ದೆಹಲಿಯ ಕೆಂಪುಕೋಟೆ ಬಳಿ ನಡೆದ ಜೈನ ಧಾರ್ಮಿಕ ಸಮಾರಂಭದಲ್ಲಿ ₹1.5 ಕೋಟಿ ಮೌಲ್ಯದ ಚಿನ್ನದ ಕಲಶಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಕಳ್ಳತನವಾಗಿದೆ. ಜೈನ ಪುರೋಹಿತರ ವೇಷ ಧರಿಸಿದ್ದ ಕಳ್ಳ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ.

ದೆಹಲಿ (ಸೆ.06): ನವದೆಹಲಿ ಕೆಂಪುಕೋಟೆಯ ಬಳಿ ನಡೆದ ನಡೆದ ಜೈನ ಧಾರ್ಮಿಕ ಸಮಾರಂಭದಲ್ಲಿ ₹1.5 ಕೋಟಿ ಮೌಲ್ಯದ ಎರಡು ಚಿನ್ನದ ಕಲಶಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜೈನ ಪುರೋಹಿತರ ವೇಷ ಧರಿಸಿದ್ದ ಕಳ್ಳ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾನೆ.

ಕೆಂಪು ಕೋಟೆ ಬಳಿ ನಡೆದ ಜೈನ ಧಾರ್ಮಿಕ ಸಮಾರಂಭದಲ್ಲಿ ಭಾರೀ ಭದ್ರತಾ ಲೋಪ ಕಂಡಿಬಂದಿದೆ. ಸುಮಾರು ₹1.5 ಕೋಟಿ ಮೌಲ್ಯದ ಎರಡು ಚಿನ್ನದ 'ಕಲಶಗಳು' ಮತ್ತು ಇತರ ಬೆಲೆಬಾಳುವ ಚಿನ್ನದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜೈನ ಪುರೋಹಿತರ ವೇಷ ಧರಿಸಿದ್ದ ಕಳ್ಳ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನದಿಂದ ಮಾಡಿದ ಜೈನ ಆಚರಣೆಗಳಲ್ಲಿ ಬಳಸುವ ವಸ್ತುಗಳು, ವಜ್ರ, ಪಚ್ಚೆ, ಮಾಣಿಕ್ಯಗಳಿಂದ ಕೂಡಿದ ವಸ್ತುಗಳು ಕೂಡ ಕಳುವಾದ ವಸ್ತುಗಳಲ್ಲಿ ಸೇರಿವೆ. ಜೈನ ಆಚರಣೆಗಳಲ್ಲಿ ಬಳಸುವ ಮತ್ತು ಪವಿತ್ರವೆಂದು ಪರಿಗಣಿಸಲಾದ ವಸ್ತುಗಳಿವು. ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿದ ಈ ವಸ್ತುಗಳನ್ನು ಪ್ರತಿದಿನ ಪೂಜೆಗಾಗಿ ತರುತ್ತಿದ್ದರು.

ರೆಡ್ ಫೋರ್ಟ್ ಬಳಿಯ 15 ಆಗಸ್ಟ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ 10 ದಿನಗಳ 'ದಶಲಕ್ಷಣ ಮಹಾಪರ್ವ'ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಜೈನ ಪುರೋಹಿತರ ವೇಷ ಧರಿಸಿ ಚೀಲದೊಂದಿಗೆ ಕಳ್ಳ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಣ್ಯರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಟಕರ ಗಮನ ಬೇರೆಡೆಗೆ ಹರಿದಾಗ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಕಾರ್ಯಕ್ರಮ ಪುನರಾರಂಭವಾದಾಗ ವೇದಿಕೆಯಿಂದ ವಸ್ತುಗಳು ಕಾಣೆಯಾಗಿರುವುದು ಕಂಡುಬಂದಿದೆ.