ಜ್ವಾಲಾಮುಖಿ ಉಕ್ಕುವ ಸಮಯದಲ್ಲೇ ಯುವಕನೊಬ್ಬ ಪ್ರೇಮ ನಿವೇದನೆ ಮಾಡಿದ್ದಾನೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮನಿವೇದನೆಗೆ ಪ್ರೇಮಿಗಳು ವಿಶೇಷ ಸ್ಥಳಗಳನ್ನು ಹುಡುಕುತ್ತಾರೆ. ಯಾರು ನೋಡಿರದ ಯಾರು ಪ್ರಪೋಸ್ ಮಾಡದ ಸ್ಥಳದಲ್ಲಿ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಬೇಕು ಎಂಬುದು ಕೆಲ ಯುವಕರ ಆಸೆ ಅದರಂತೆ ಕೆಲವರು ಜಲಪಾತದಲ್ಲಿ, ಸಮುದ್ರದ ಮಧ್ಯೆ, ಬೋಟ್‌ನಲ್ಲಿ ಆಕಾಶದಲ್ಲಿ ಪರ್ವತ ಪ್ರದೇಶದಲ್ಲಿ ಹೀಗೆ ವಿಭಿನ್ನ ಸ್ಥಳಗಳಲ್ಲಿ ಪ್ರೇಮ ನಿವೇದನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಯನ್ನು ಕರೆದುಕೊಂಡು ಹೋಗಿ ಬೆಟ್ಟ ಪ್ರದೇಶವೊಂದರಲ್ಲಿ ಪ್ರೇಮ ನಿವೇದನೆ ಮಾಡಿದ್ದು, ಯುವಕನ ಲವ್ ಪ್ರಪೋಸಲ್ ವೇಳೆ ಅಚ್ಚರಿಯೊಂದು ನಡೆದಿದೆ.

ಹುಡುಗನೋರ್ವ ಹುಡುಗಿಗೆ ಪ್ರೇಮ ನಿವೇದನೆ ಮಾಡುವ ವೇಳೆ ಸಮೀಪದ ಬೆಟ್ಟದಲ್ಲೇ ಜ್ವಾಲಾಮುಖಿಯೊಂದು ಉಕ್ಕಿದ ವೀಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ಜೋಡಿಗೆ ಪ್ರಕೃತಿಯೇ ಸಮ್ಮತಿ ಸೂಚಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಜ್ವಾಲಾಮುಖಿಯೊಂದರ ಮುಂದೆಯೇ ಯುವಕನೋರ್ವ ಪ್ರೇಮ ನಿವೇದನೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈಗ ಪ್ರೇಮಿಗಳು ಪ್ರೇಮ ನಿವೇದನೆ ಮಾಡುವಾಗಲೇ ಜ್ವಾಲಾಮುಖಿಯೊಂದು ಉಕ್ಕಿಹರಿದಿದೆ. ಅಮೆರಿಕಾದ ಗ್ವಾಟೆಮಾಲಾದ ಅಕಾಟೆನಾಂಗೊದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗ್ತಿದೆ. ಆತನ ಪ್ರೇಮಕ್ಕೆ ಪ್ರಕೃತಿಯೇ ಯೆಸ್ ಎಂದು ಹೇಳುವಂತೆ ಸೂಚಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಮುಂದೆ ಎದುರಾಗುವ ಸಂಕಷ್ಟಗಳನ್ನು ಪ್ರಕೃತಿ ಸೂಚಿಸುತ್ತಿದೆ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅವರಿಬ್ಬರ ಪ್ರೀತಿಯನ್ನು ಪ್ರಕೃತಿ ಸಂಭ್ರಮಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram

ಅಜ್ಜಿ ಬರ್ತ್‌ಡೇಗೆ ಸರ್ಫ್ರೈಸ್ ನೀಡಲು ಕೇರಳಕ್ಕೆ ಬಂದ ಎಮಿರೇಟ್ ಗಗಗನಸಖಿ

ಗಲ್ಫ್‌ ದೇಶದ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೊಬ್ಬಳು ತನ್ನ ಅಜ್ಜಿಯ ಹುಟ್ಟುಹಬ್ಬದ ದಿನ ಆಕೆಗೆ ಸರ್‌ಫ್ರೈಸ್ ನೀಡುವ ಸಲುವಾಗಿ ಹೇಳದೇ ಬಂದಿದ್ದು ಮೊಮ್ಮಗಳನ್ನು ನೋಡಿ ಅಜ್ಜಿ ಫುಲ್ ಖುಷ್ ಆಗಿದ್ದಾರೆ. ಎಮಿರೇಟ್ಸ್‌ನಲ್ಲಿ ಕ್ಯಾಬಿನ್ ಕ್ರೀವ್ ಆಗಿರುವ ಜೈನಾಬ್ ರೋಶ್ನಾ ಎಂಬಾಕೆ ಕೇರಳದಲ್ಲಿರುವ ತನ್ನ ಅಜ್ಜಿಯನ್ನು ನೋಡುವುದಕ್ಕಾಗಿ ದುಬೈನಿಂದ ಹಾರಿ ಬಂದಿದ್ದಾರೆ. ಈ ಭಾವುಕ ಕ್ಷಣ ಕ್ಯಾಮರಾದಲ್ಲಿ ವೈರಲ್‌ ಆಗಿದೆ. ವೀಡಿಯೋದಲ್ಲಿ ತನ್ನ ಅಜ್ಜಿಗೆ ಚಿನ್ನದ ಬಳೆಯನ್ನು ಈಕೆ ಉಡುಗೊರೆಯಾಗಿ ನೀಡಿದ್ದು, ಇದು ತಾನು ಅಜ್ಜಿಗೆ ನೀಡಿದ ಮೊದಲ ಬಂಗಾರದ ಉಡುಗೊರೆ ಎಂದು ಅವರು ಹೇಳಿಕೊಂಡಿದ್ದಾರೆ.

ವೀಡಿಯೊದಲ್ಲಿ ರೋಶ್ನಾ ಉತ್ಸಾಹದಿಂದ ಒಳಗೆ ನಡೆದು ಬಂದು ತನ್ನ ಅಜ್ಜಿಗೆ ಅದ್ಭುತವಾದ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅವಳು ತನ್ನ ಅಜ್ಜಿಯ ಕೈಗೆ ಬಳೆಯನ್ನು ನಿಧಾನವಾಗಿ ಹಾಕಿದಾಗ, ಅವಳ ಅಜ್ಜಿಯ ಮುಖವು ಸಂತೋಷದಿಂದ ಅರಳುತ್ತದೆ. ಭಾವುಕಳಾಗಿ, ಅವಳು ಜೈನಾಬ್‌ಗೆ ಆಶೀರ್ವಾದ ಮಾಡಿ ಆಕೆಯ ಕೆನ್ನೆಗೆ ಮುತ್ತಿಕ್ಕುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು ಉಮ್ಮಮ್ಮಾ. ಇದು ಅವರಿಗೆ ನನ್ನ ಮೊದಲ ಚಿನ್ನದ ಉಡುಗೊರೆ, ಆದ್ದರಿಂದ ನಾನು ಅವರನ್ನು ವೈಯಕ್ತಿಕವಾಗಿ ಸನ್ಮಾನಿಸುತ್ತೇನೆ ಎಂದು ದೃಢನಿಶ್ಚಯದಿಂದಿದ್ದೆ. ಅದಕ್ಕಾಗಿಯೇ ನಾನು ದುಬೈನಿಂದ ಕೇರಳಕ್ಕೆ ಹಾರಿದೆ ಎಂದು ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಅವರು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು ಅಜ್ಜಿ ಮೊಮ್ಮಗಳ ಪುನರ್ಮಿಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View post on Instagram