‘ದೇಶದ ಜನರನ್ನು ಕಾಂಗ್ರೆಸ್ ಲೂಟಿ ಮಾಡಿತ್ತು. ಕಡಿಮೆ ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸುತ್ತಿತ್ತು’ ಎಂದು ಒಡಿಶಾದ ಝಾರ್ಸುಗುಡದಲ್ಲಿ ನಮೋ ಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಝಾರ್ಸುಗುಡ (ಒಡಿಶಾ) : ‘ದೇಶದ ಜನರನ್ನು ಕಾಂಗ್ರೆಸ್ ಲೂಟಿ ಮಾಡಿತ್ತು. ಕಡಿಮೆ ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಒಡಿಶಾದ ಝಾರ್ಸುಗುಡದಲ್ಲಿ ನಮೋ ಯುವ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕಾಂಗ್ರೆಸ್ ಜನರನ್ನು ಲೂಟಿ ಮಾಡುವ ಯಾವುದೇ ಅವಕಾಶವನ್ನು ಬಿಡಲಿಲ್ಲ. ವಾರ್ಷಿಕ 2 ಲಕ್ಷ ರು. ಆದಾಯ ಹೊಂದಿರುವವರ ಮೇಲೆಯೂ ತೆರಿಗೆ ವಿಧಿಸಿತ್ತು. ಬಿಜೆಪಿ ಆ ಮಿತಿಯನ್ನು 12 ಲಕ್ಷ ರು.ಗೆ ಹೆಚ್ಚಿಸಿತು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜನರನ್ನು ಲೂಟಿ ಮಾಡುತ್ತವೆ. ಅವರ ಬಗ್ಗೆ ಎಚ್ಚರದಿಂದಿರಿ’ ಎಂದರು.ಜಿಎಸ್‌ಟಿ ಸರಳೀಕರಣದಿಂದ ದೇಶದಲ್ಲಿ ಬೆಲೆ ಕುಸಿದರೂ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ವಿರುದ್ಧ ಸ್ಥಿತಿಯಿದೆ ಎಂದು ಆರೋಪಿಸಿದರು.
‘ನಮ್ಮ ಸರ್ಕಾರ ಸಿಮೆಂಟ್ ದರ ಇಳಿಸಿದಾಗ ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಅದರ ಮೇಲೆ ತನ್ನದೇ ತೆರಿಗೆ ವಿಧಿಸಿತು. ನಾವು ಜಿಎಸ್ಟಿ ಕಡಿತಗೊಳಿಸಿದಾಗ ದೇಶದೆಲ್ಲೆಡೆ ದರ ಕುಸಿತ ಕಂಡಿತು, ಆದರೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅದನ್ನು ಜನರಿಗೆ ತಲುಪಿಸಲು ವಿರೋಧಿಸಿದರು’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಿ 4ಜಿ ನೆಟ್‌ವರ್ಕ್ ಲಾಂಚ್ ಮಾಡಿದ್ದಾರೆ. ಭಾರದ ಮೂಲೆ ಮೂಲೆಯಲ್ಲಿ ಈ 4ಜಿ ನೆಟ್‌ವರ್ಕ ಲಭ್ಯವಾಗುತ್ತಿದೆ. ಬಿಎಸ್ಎನ್ಎಲ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಳೆದ 25 ವರ್ಷಗಳಿಂದ ಭಾರತದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಬಿಎಸ್ಎನ್‌ಎಲ್, 25ನೇ ವರ್ಷಕ್ಕೆ ಸ್ವದೇಶಿ 4ಜಿ ನೆಟವರ್ಕ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ 4ಜ ನೆಟ್‌ವರ್ಕ್ ಸರ್ವೀಸ್ ಲಾಂಚ್ ಮಾಡಿದೆ. 25 ಅಥವಾ ಅದಕ್ಕಿಂತ ಹೆಚ್ಚು ವರ್ಷ ಸ್ವದೇಶಿ ಟೆಲಿಕಾಂ ಕಂಪನಿಯೊಂಂದು ಕಾರ್ಯಾನಿರ್ವಹಿಸುತ್ತಿರುವುದು ಇದೇ ಮೊದಲು, ಇಷ್ಟೇ ಅಲ್ಲ ಡೆನ್ಮಾರ್ಕ್, ಸ್ವೀಡನ್, ಸೌತ್ ಕೊರಿಯ ಹಾಗೂ ಚೀನಾದಂತ ದಿಗ್ಗಜ ದೇಶಗಳ ಸಾಲಿಗೆ ಸೇರಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜಿಎಸ್‌ಟಿ 2.0 ಜಾರಿ ಕುರಿತು ದೇಶವನ್ನುದ್ದೇಶಿ ಮಾತನಾಡಿದ್ದರು. ಸೆಪ್ಟೆಂಬರ್ 22ರಿಂದ ದೇಶದಲ್ಲಿ ಹೊಸ ಜಿಎಸ್‌ಟಿ ದರ ಜಾರಿಯಾಗಿದೆ. ಇದಕ್ಕೂ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಜಿಎಸ್‌ಟಿ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ್ದರು. ಇದೇ ವೇಳೆ ಸ್ವದೇಶಿ, ಸ್ವಾಲಂಬನೆ ಹಾಗೂ ಆತ್ಮನಿರ್ಭರತೆ ಭಾರತ ಕುರಿತು ಮತ್ತೆ ಮಹತ್ವದ ವಿಚಾರ ಪ್ರಸ್ತಾಪಿಸಿದ್ದರು. ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಲು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಮೋದಿ ಸ್ವದೇಶಿ 4ಜಿ ಸರ್ವೀಸ್ ಲಾಂಚ್ ಮಾಡುವ ಮೂಲಕ ಬಿಎಸ್ಎನ್ಎಲ್ ವ್ಯಾಪ್ತಿ ವಿಸ್ತರಿಸಿದ್ದಾರೆ.
