ಭಾರತದ CDSCO ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಿ ಕಳಪೆ, ಖರೀದಿಸುವ ಮುನ್ನ ತಿಳಿದಿರಲಿ, ಯಾವೆಲ್ಲಾ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ ಅನ್ನೋ ಸಂಪೂರ್ಣ ಲಿಸ್ಟ್‌ನ್ನು ಸಿಡಿ‌ಎಸ್‌ಸಿಒ ಬಹಿರಂಗಪಡಿಸಿದೆ.

ನವದೆಹಲಿ (ಅ.24) ಔಷಧಿಗಳ ವಿಚಾರದಲ್ಲಿ ಅತೀವ ಎಚ್ಚರಿಕೆ ವಹಿಸಬೇಕು ಅನ್ನೋದು ಇತ್ತೀಚೆಗಿನ ಬೆಳವಣಿಗೆಯಲ್ಲೂ ಸ್ಪಷ್ಟವಾಗಿದೆ. ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣದ ಬಳಿಕ ಭಾರತದಲ್ಲಿ ಸಿಕ್ಕ ಸಿಕ್ಕ ಔಷಧಿ, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಖರೀದಿಸುವ ಔಷಧಿಗಳು ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಬಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತದ ಔಷಧಿಗಳ ಗುಣಮಟ್ಟ ಪರೀಕ್ಷಿಸುವ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಔಷಧಿಗಳ ಗುಣಮಟ್ಟ ಪರೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡಿದೆ. ಅಪಾಯಕಾರಿ ಬೆಳವಣಿಗೆ ಎಂದರೆ ಬರೋಬ್ಬರಿ 112 ಔಷಧಿಗಳ ಮಾದರಿ ಭಾರತದ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿದೆ. ಇವುಗಳ ಪಟ್ಟಿಯನ್ನು CDSCO ಬಿಡುಗಡೆ ಮಾಡಿದೆ.

ಕರ್ನಾಟಕ ಗ್ಲೈಮ್‌ಪ್ರೈಡ್ ಸೇರಿ 112 ಔಷಧಿ ಗುಣಮಟ್ಟ ಕಳಪೆ

CDSCO ನಡೆಸಿದ ಮಾದರಿ ಡ್ರಗ್ಸ್ ಪರೀಕ್ಷೆಗಳ ಫಲಿತಾಂಶವನ್ನು ಬಹಿರಂಗಪಡಿಸಿದೆ. ಈ ಪೈಕಿ ಕರ್ನಾಟಕದ ಗ್ಲೈಮ್‌ಪ್ರೈಡ್ ಸೇರಿದಂತೆ 112 ಔಷಧಿಗಳು ಕಳಪೆಯಾಗಿದೆ ಎಂದು ವರದಿ ನೀಡಿದೆ. 112 ಔಷಧಿಗಳು ಭಾರತದ ಔಷಧಿಗಳ ಗುಣಮಟ್ಟಕ್ಕಿಲ್ಲ (NSQ) ಎಂದು ವರದಿಪ ಪ್ರಕಟಗೊಂಡಿದೆ. 112 ರ ಪೈಕಿ 52 ಔಷಧಿಗಳು ಕೇಂದ್ರ ಔಷಧಿ ಗುಣಮಟ್ಟ ಲ್ಯಾಬೋರೇಟೋರಿ (NSQ)ಯಲ್ಲಿ ಟೆಸ್ಟ್‌ನಲ್ಲಿ ಕಳಪೆ ಎಂದು ಫಲಿತಾಂಶ ಬಂದಿದ್ದರೆ, ಇನ್ನುಳಿದ 60 ಔಷಧಿಗಳು ರಾಜ್ಯ ಲ್ಯಾಬೋರೇಟೊರಿಯಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆ ಗುಣಮಟ್ಟ ಎಂಬ ಫಲಿತಾಂಶ ಬಂದಿದೆ.

ಅಕ್ರಮ ಉತ್ಪಾದನೆ ಪತ್ತ

ಸೆಪ್ಟೆಂಬರ್ ತಿಂಗಳ ಬಿಡುಗಡೆ ಮಾಡಿದ ಈ ವರದಿಯಲ್ಲಿರುವ ಔಷಧಿಗಳು ಮಾರುಕಟ್ಟೆಯಲ್ಲಿದ್ದರೆ ಖರೀದಿಸುವಾಗ ಎಚ್ಚರ ವಹಿಸಬೇಕು. ಗುಣಮಟ್ಟದಲ್ಲಿ ವಿಫಲ ಎಂದಿರುವ ಔಷಧಿಗಳು ಇತರ ಅಪಾಯ ತಂದೊಡ್ಡಬಲ್ಲದು.ಈ ಪೈಕಿ ಚತ್ತೀಸಘಡದ ಉತ್ಪಾದನೆ ಮಾಡಿರುವ ಒಂದು ಔಷಧಿ ಕಳಪೆ ಮಾತ್ರವಲ್ಲ, ಅಕ್ರಮವಾಗಿ ಉತ್ಪಾದನೆ ಮಾಡಲಾಗಿದೆ ಅನ್ನೋದು ಪತ್ತೆಯಾಗಿದೆ. ಬೇರೆ ಕಂಪನಿಯ ಹೆಸರಿನಡಿಯಲ್ಲಿ ಅಕ್ರಮವಾಗಿ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿ ತಯಾರಿಸಿರುವುದು ಪತ್ತೆಯಾಗಿದೆ. ಈ ಎಲ್ಲಾ ಔಷಧಿಗಳು ಕಳಪೆ ಎಂದು CDSCO ಪ್ರಕಟಿಸಿದೆ.

ಕೆಲ ನಿರ್ದಿಷ್ಠ ವರ್ಷದಲ್ಲಿ ಅಂದರೆ ಬ್ಯಾಚ್ ಡ್ರಗ್ಸ್‌ಗಳು ಮಾತ್ರ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಈ ಪೈಕಿ ಟ್ಯಾಮೋಕ್ಸಿಫೆನ್ ಟ್ಯಾಬ್ಲೆಟ್ಸ್ ಐಪಿ, ರೇಬ್‌ಪ್ರಝೋಲ್ ಸೋಡಿಯಂ ಇಂಜೆಕ್ಷನ್ ಐಪಿ,ಪಂತೋಪ್ರಜೋಲ್ ಟ್ಯಾಬ್ಲೆಟ್ ಐಪಿ, ಡಿಕ್ಲೋಫೆನಾಕ್ ಸೋಡಿಯಂ,ಫಾಲಿಕ್ ಆ್ಯಸಿಡ್, ಅಮೊಕ್ಸಿಲಿನ್ ಮತ್ತು ಪೊಟಾಸಿಯಂ ಕ್ಲವುಲಾನಾ ಟ್ಯಾಬ್ಲೆಟ್ ಐಪಿ, ಕ್ಯಾಲಿಕ್ಸಿಯಾ ಕ್ಯಾಲ್ಸಿಯಂ ಕಾರ್ಬೋನೇಟ್ 500 ಎಂಜಿ, ಡಿಕ್ಲೋಫೆನಾ ಸೋಡಿಯಂ ಮತ್ತು ಪ್ಯಾರಾಸೆಟಮೊಲ್ ಟ್ಯಾಬ್ಲೆಟ್ ಐಪಿ, ಅಲ್‌ಬೆಂಡಜೋಲ್ ಟ್ಯಾಬ್ಲೆಟ್ ಐಪಿ ಸೇರಿದಂತೆ 112 ಔಷಧಿಗಳು ಕಳಪೆ ಗುಣಮಟ್ಟ ಹೊಂದಿದೆ.