ಜೇಸಿಬಿ ಹಿಟಾಚಿಯಲ್ಲಿ ಉಯ್ಯಾಲೆಯಂತೆ ಸುತ್ತಾಡಲು ಆಸೆಪಡುವ ಶ್ವಾನವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಟಾಚಿ ಕೊಕ್ಕೆಯಲ್ಲಿ ಕುಳಿತು ಸುತ್ತುವ ಶ್ವಾನದ ಮುದ್ದಾದ ವಿಡಿಯೋ ನೋಡುಗರ ಮನ ಗೆದ್ದಿದೆ.

ಶ್ವಾನಗಳು ಮನುಷ್ಯರ ಬೆಸ್ಟ್‌ ಫ್ರೆಂಡ್ ಇದರಲ್ಲಿ ಎರಡು ಮಾತಿಲ್ಲ, ಇತ್ತೀಚೆಗಂತು ಕೆಲವರು ಶ್ವಾನವನ್ನು ತಾವು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡುತ್ತಿರುತ್ತಾರೆ. ಅದಕ್ಕೆ ದಿನಾ ಸ್ಥಾನ ಮಾಡಿಸುವುದು, ಹಬ್ಬ ಹರಿದಿನಗಳಲ್ಲಿ ಮನೆಯ ಇತರ ಸದಸ್ಯರಂತೆ ಅದಕ್ಕೂ ಬಟ್ಟೆ ತೊಡಿಸುವುದು. ಹಬ್ಬದೂಟ ಉಣಬಡಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತಮ್ಮ ಮನೆಯ ಶ್ವಾನವನ್ನು ಖುಷಿಪಡಿಸುತ್ತಾರೆ. ಶ್ವಾನಗಳು ಮಕ್ಕಳಂತೆ ಅವು ಮರಿಗಳಿರುವಾಗ ನೀವು ಹೇಗೆ ಬೆಳೆಸುತ್ತಿರೋ ಹಾಗೆ ಬುದ್ಧಿಯನ್ನು ಕಲಿಯುತ್ತವೆ. ಮನುಷ್ಯರ ಒಡನಾಟವನ್ನು ಬಹಳವೇ ಇಷ್ಟಪಡುವ ಶ್ವಾನಗಳು ಭಾವಜೀವಿಗಳು ಬುದ್ಧಿವಂತ ಪ್ರಾಣಿಗಳು. ಎರಡು ವರ್ಷದ ಕಂದನ ಬುದ್ಧಿಯನ್ನು ಈ ಶ್ವಾನಗಳು ಹೊಂದಿವೆ ಎಂದು ಸಂಶೋಧನೆಗಳಲ್ಲಿ ಸಾಬೀತಾಗಿವೆ. ಶ್ವಾನಗಳ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗಿ ವೈರಲ್ ಆಗ್ತಿರ್ತಾವೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ನೋಡುಗರಿಗೆ ಖುಷಿ ನೀಡುತ್ತಿದೆ.

ಜೇಸಿಬಿ ಹಿಟಾಚಿ ಎಂದರೆ ಈ ನಾಯಿಗೂ ತುಂಬಾ ಪ್ರೀತಿ..!

ಸಾಮಾನ್ಯವಾಗಿ ಮಣ್ಣು ಅಗೆಯುವ ಜೇಸಿಬಿ ಹಿಟಾಚಿಗಳೆಂದರೆ ಬಹುತೇಕರಿಗೆ ಇಷ್ಟ ಊರಲೆಲ್ಲೋ ಜೇಸಿಬಿ ಕೆಲಸ ಮಾಡುತ್ತಿದೆ ಎಂದಾದರೆ ಅಲ್ಲಿ ಕೆಲಸ ಮಾಡಿಸುವ ಮೇಸ್ತಿ ಮಾತ್ರವಲ್ಲದೇ ಕೆಲಸವಿಲ್ಲದ/ಕೆಲಸವಿರುವ ಎಲ್ಲರೂ ತಮ್ಮ ಕೆಲಸ ಬಿಟ್ಟು ಅಲ್ಲಿ ಜೇಸಿಬಿ ಕೆಲಸ ಮಾಡುವುದನ್ನು ನೋಡುವುದಕ್ಕೆ ನಿಂತಿರುತ್ತಾರೆ. ಮಣ್ಣು ಅಗೆಯುವ ಈ ಮೆಷಿನ್ ಬಹುತೇಕರಿಗೆ ಅದೊಂತರ ಕುತೂಹಲಕಾರಿ ಎನಿಸುತ್ತದೆ. ಇನ್ನು ಪುಟ್ಟ ಮಕ್ಕಳಿದ್ದರಂತೂ ಅಲ್ಲೇ ಮಕ್ಕಳು ಝಂಡಾ ಊರಿಬಿಡುತ್ತಾರೆ. ಆದರೆ ಈ ವೀಡಿಯೋ ನೋಡಿದರೆ ಮಕ್ಕಳು ದೊಡ್ಡವರು ಮಾತ್ರವಲ್ಲ, ನಾಯಿಗಳಿಗೂ ಜೇಸಿಬಿ ಅಥವಾ ಹಿಟಾಚಿ ನೋಡಿದರೆ ಇಷ್ಟ ಎಂಬುದು ಈ ವೀಡಿಯೊದಿಂದ ಖಚಿತವಾಗಿದೆ. ಹಾಗಿದ್ರೆ ವೀಡಿಯೋದಲ್ಲಿ ಇರುವುದೇನು...?

ಉಯ್ಯಾಲೆಯಂತೆ ಹಿಟಾಚಿಯಲ್ಲಿ ಸುತ್ತ ತಿರುಗಿಸಲು ಶ್ವಾನದ ಆಗ್ರಹ

ವೀಡಿಯೋದಲ್ಲಿ ಕಾಣುವಂತೆ ಹಿಟಾಚಿ ಬಳಿ ಬರುವ ಶ್ವಾನವೊಂದು ಅದರ ಕೊಕ್ಕೆಯಲ್ಲಿ ಕುಳಿತು ತನ್ನನ್ನು ಸುತ್ತಲೂ ತಿರುಗಿಸುವವಂತೆ ಶ್ವಾನದ ಮಾಲೀಕನಿಗೆ ಬಾಯ್ಬಾರದಿದ್ದರೂ ಹೇಳುವ ರೀತಿ ಮಜವಾಗಿದೆ. ವೀಡಿಯೋದಲ್ಲಿ ಹಿಟಾಚಿಯ ಚಾಲಕ ಶ್ವಾನವನ್ನು ಹಿಟಾಚಿಯ ಕೊಕ್ಕೆಯಲ್ಲಿ ಕೂರಿಸಿ ಊರ ಜಾತ್ರೆಯಲ್ಲಿ ಮಕ್ಕಳು ಉಯ್ಯಾಲೆಯಲ್ಲಿ ಕುಳಿತು ಸುತ್ತಲೂ ಸುತ್ತುವಂತೆ ನಾಯಿಯನ್ನು ತಿರುಗಿಸುತ್ತಾನೆ. ಒಂದು ಸುತ್ತು ಬಂದ ನಂತರ ನಾಯಿಯನ್ನು ಕೊಕ್ಕೆಯಿಂದ ಕೆಳಗಿಳಿಸಿಬಿಡುತ್ತಾನೆ. ನಂತರ ಹಿಟಾಚಿ ಚಾಲಕ ಅದರ ಕೊಕ್ಕೆಯನ್ನು ಮೇಲೇತ್ತುತ್ತಿದ್ದಂತೆ ನಾಯಿ ಮತ್ತೊಂದು ರೌಂಡ್‌ ಕರೆದೊಯ್ಯುವಂತೆ ಬೊಬ್ಬೆ ಹೊಡೆಯುವುದನ್ನುಮೇಲೇರುವ ಕೊಕ್ಕೆಯತ್ತ ಹಾರುವುದನ್ನು ವೀಡಿಯೋದಲ್ಲಿ ನೋಡಬಹುದು.

ನಂತರ ನಾಯಿಯ ಆಸೆಗೆ ಮಣಿದ ಹಿಟಾಚಿ ಚಾಲಕ ಕೊಕ್ಕೆಯನ್ನು ಕೆಳಗಿಳಿಸಿದ್ದು, ಈ ವೇಳೆ ಮತ್ತೆ ಶ್ವಾನ ಹಿಟಾಚಿ ಏರಿ ಕುಳಿತಿದೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ನೋಡುಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನಾಯಿಯನ್ನು ತಿರುಗಿಸಿದಂತೆ ನಮ್ಮನ್ನು ಒಂದು ಸುತ್ತು ತಿರುಗಿಸುವಂತೆ ಕಾಮೆಂಟ್ ಮಾಡಿದ್ದಾರೆ. OopsAndLaughs ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ನಾಯಿಗೆ ಈ ರೀತಿ ಎಂಟರ್‌ಟೈನ್‌ಮೆಂಟ್ ನೀಡಿದ್ದಕ್ಕೆ ಅನೇಕರು ಧನ್ಯವಾದ ತಿಳಿಸಿದ್ದಾರೆ. ಇದೊಂದು ಮುದ್ದಾದ ಫನ್ ರೈಡ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಅಮಿತ್ ಶಾ 'ಸೋದರಳಿಯ'ನಿಗೆ 'ಮಾವನ ಮನೆ' ಗತಿ! ಕೋಟಿ ಕೋಟಿ ವಂಚಿಸಿದ ನಕಲಿ 'ಅಜಯ್ ಶಾ' !

ಇದನ್ನೂ ಓದಿ: 3 ವರ್ಷದಿಂದ ಈ ಲೇಡಿ ಕೆಲಸಕ್ಕೆ ಚಕ್ಕರ್! ಇಲ್ಲಿ ಸರ್ಕಾರಿ ಡಾಕ್ಟರ್, ಕೆನಡಾದಲ್ಲಿ ಫಿಲ್ಮ್ ಮೇಕರ್!

View post on Instagram