ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು.
ಕೋಲ್ಕತಾ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು.
ಅಲ್ಲದೆ, ಹಿಂದಿ ಭಾಷೆಯ ಬಗ್ಗೆ ಕನ್ನಡದ ಕವಿ ಕುವೆಂಪು ಅವರ ನಿಲುವುಗಳ ಬಗ್ಗೆಯೂ ಭಾಷಣಕಾರರು ಮಾತನಾಡಿದರು. ಸ್ಥಳೀಯ ಭಾಷೆಗಳ ಜಾಗದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನಾ ರ್‍ಯಾಲಿ ನಡೆದಿದ್ದು, ಬಂಗಾಳಿ ಸೇರಿದಂತೆ ಅನ್ಯ ಹಿಂದಿಯೇತರ ಭಾಷೆಗಳಿರುವ ಫಲಕಗಳು, ಕುವೆಂಪು, ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿಯಂತಹ ದಿಗ್ಗಜರ ಫೋಟೋಗಳನ್ನು ಪ್ರದರ್ಶಿಸಲಾಯಿತು.
ಈ ವೇಳೆ, ಹಿಂದಿಯಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆಗಳು ಮತ್ತು ವೆಬ್‌ಸೈಟ್‌ಗಳು ಸಂವಿಧಾನದಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ ಎಲ್ಲಾ ಭಾಷೆಗಳಲ್ಲೂ ದೊರೆಯಬೇಕು ಎಂದು ಆಗ್ರಹಿಸಲಾಯಿತು.
ತಮಿಳ್ನಾಡು ರಾಜ್ಯ ಶಿಕ್ಷಣ ನೀತಿ ಪ್ರಕಟ : ಹಿಂದಿಗೆ ಕೊಕ್
ಚೆನ್ನೈ : ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸುಸುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಶುಕ್ರವಾರ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ಪಷ್ಟ ಪರ್ಯಾಯವಾಗಿದೆ. ಈ ಮೂಲಕ, ತಮಿಳುನಾಡು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿದೆ.
ಇದರಲ್ಲಿ ದ್ಬಿಭಾಷಾ ಸೂತ್ರ ಮಾತ್ರ ಜಾರಿಗೆ ತರಲಾಗಿದ್ದು, ತ್ರಿಭಾಷಾ ಸೂತ್ರಕ್ಕೆ (ಹಿಂದಿಗೆ) ಕೊಕ್ ನೀಡಲಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲಿಗೆ 11 ಮತ್ತು 12ನೇ ತರಗತಿಗಳ ಕ್ರೋಡೀಕೃತ ಅಂಕಗಳ ಆಧಾರದ ಮೇಲೆ ಕಲಾ ಮತ್ತು ವಿಜ್ಞಾನ ಕೋರ್ಸ್‌ಗಳ ಪದವಿ ಪ್ರವೇಶಕ್ಕೆ ಶಿಫಾರಸು ಮಾಡುತ್ತದೆ.
ಎನ್‌ಇಪಿಯಲ್ಲಿ ಇದ್ದಂತೆ 11ನೇ ತರಗತಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಪರೀಕ್ಷೆ (ಪಬ್ಲಿಕ್ ಎಕ್ಸಾಂ) ಇರುವುದಿಲ್ಲ. ಇಂಗ್ಲಿಷ್, ತಮಿಳು ಜತೆಗೆ ಜತೆಗೆ, ವಿಜ್ಞಾನ, ಎಐಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ.
