ಮುಖದ ಕಾಂತಿ ಹೆಚ್ಚಿಸುವ ಸ್ಕಿನ್ ಟೋನರ್ ಮನೆಯಲ್ಲಿಯೇ ತಯಾರಿಸಿ

First Published Jan 8, 2021, 12:57 PM IST

ಮುಖದ ಟೋನರ್ ಸ್ಕಿನ್ ಕೇರ್ ನ ಒಂದು ಅತ್ಯಗತ್ಯ ಭಾಗವಾಗಿದೆ. ಇದು ತ್ವಚೆಯ ಅಂದ ಹೆಚ್ಚಿಸಲು ಸಹಾಯಕವಾಗಿದೆ. ಮಾರ್ಕೆಟ್ ನಿಂದ ಕೆಮಿಕಲ್ ಯುಕ್ತ ಟೋನರ್ ತರುವ ಬದಲು ಮನೆಯಲ್ಲೇ ನೈಸರ್ಗಿಕ ವಾದ ಫೇಶಿಯಲ್ ಟೋನರ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡಿ.

ಮುಖದ ಟೋನರ್ ಸ್ಕಿನ್ ಕೇರ್ ನ ಒಂದು ಅತ್ಯಗತ್ಯ ಭಾಗವಾಗಿದೆ. ಮನೆಯಲ್ಲೇ ನೈಸರ್ಗಿಕವಾದ ಫೇಶಿಯಲ್ ಟೋನರ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡಿ.

ಸ್ಕಿನ್ ಕೇರ್ ವಿಷಯಕ್ಕೆ ಬಂದರೆ ಟೋನಿಂಗ್ ಎಂದಿಗೂ ಮರೆಯಬಾರದ ಒಂದು ಭಾಗ. ಮುಖದ ಟೋನರ್ ಚರ್ಮಕ್ಕೆ ತುಂಬಾ ಕಠಿಣ ಮತ್ತು ಅನಗತ್ಯ ಎಂದು ಪರಿಗಣಿಸಲ್ಪಟ್ಟ ಕಾಲವಿತ್ತು.  ಟೋನಿಂಗ್ ಆರೋಗ್ಯಕರ ಸ್ಕಿನ್ ಕೇರ್ ದಿನಚರಿಯ ಅವಿಭಾಜ್ಯ ಅಂಗವೀಗ. ವಾಸ್ತವವಾಗಿ,  ಹೊಳೆಯುವ ಚರ್ಮವನ್ನು ಪಡೆಯಲು ಅಗತ್ಯವಿರುವ ಮೂರು ಹಂತಗಳ ಭಾಗವಾಗಿದೆ.

ಫೇಶಿಯಲ್ ಟೋನರ್ - ಸ್ಕಿನ್ ಕೇರ್ ನ ಒಂದು ಅವಶ್ಯಕ ಭಾಗ

ಟೋನಿಂಗ್ ಮೂರು ಹಂತದ ಬೇಸಿಕ್ ಸ್ಕಿನ್ ಕೇರ್ ದಿನಚರಿಯ ಒಂದು ಭಾಗವಾಗಿದ್ದು, ಇದು ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಒಳಗೊಂಡಿದೆ. ಈ ಹಂತಗಳು ಆರೋಗ್ಯಕರ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಉತ್ತಮ ಟೋನರ್ ಚರ್ಮದ pH ಮಟ್ಟವನ್ನು ಕಾಯ್ದುಕೊಳ್ಳಲು, ರಂಧ್ರಗಳ ಗೋಚರತೆಯನ್ನು ಕಡಿಮೆ ಮಾಡಲು, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು, ಕೆಂಪಗಾಗಿ ಮತ್ತು ಕಿರಿಕಿರಿಯನ್ನು ಶಮನಗೊಳಿಸಿ ಉತ್ತಮ ಪರಿಹಾರ ನೀಡುತ್ತದೆ ಮತ್ತು ಕಾಂತಿಯುತ ಚರ್ಮವನ್ನು ನೀಡುತ್ತದೆ.

ಆದ್ದರಿಂದ, ಚರ್ಮಕ್ಕೆ ಹೊಂದಿಕೆಯಾಗುವ ಉತ್ತಮ ಫೇಶಿಯಲ್ ಟೋನರ್‌ನಲ್ಲಿ ಹೂಡಿಕೆ ಮಾಡಬಹುದು, ಅಥವಾ ಮನೆಯಲ್ಲೇ ತಯಾರಿಸಬಹುದು. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ನೈಸರ್ಗಿಕ ಟೋನರ್ ಇಲ್ಲಿದೆ. ಆದರೆ ಅದಕ್ಕೂ ಮೊದಲು ಇದನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂದು ತಿಳಿದಿರಬೇಕು.

ಟೋನರ್ ಬಳಸುವುದು ಹೇಗೆ?

ಮೊದಲ ಹಂತವೆಂದರೆ ಚರ್ಮಕ್ಕೆ ಹೊಂದುವಂತಹ ಫೇಸ್ ವಾಶ್ ಸಹಾಯದಿಂದ ಚರ್ಮವನ್ನು ಸ್ವಚ್ಛಗೊಳಿಸುವುದು. ನಂತರ ಟೋನರ್ ಅನ್ನು ಬಳಸಿ ನಂತರ ಇದನ್ನು ಹಚ್ಚಲಾಗುತ್ತದೆ. ಒಂದು ಹತ್ತಿಯ ಮೇಲೆ ಸ್ವಲ್ಪ ಟೋನರ್ ಅನ್ನು ಸುರಿದು ಅದನ್ನು ಚರ್ಮದ ಮೇಲೆ ಹಾಕಿ.

ಮನೆಯಲ್ಲೇ ತಯಾರಿಸಿದ ಸ್ಕಿನ್ ಟೋನರ್ -  ಅಲೋವೆರಾ ಮತ್ತು ರೋಸ್ ವಾಟರ್

ಅಲೋವೆರಾ ಮತ್ತು ರೋಸ್ ವಾಟರ್ ಇವೆರಡೂ ಚರ್ಮಕ್ಕೆ ಅದ್ಭುತಗಳನ್ನು ಉಂಟುಮಾಡುತ್ತದೆ ಮತ್ತು ಶತಮಾನಗಳಿಂದ ಗಿಡಮೂಲಿಕೆಗಳ ಪರಿಹಾರಗಳ ಒಂದು ಭಾಗ. ಅಲೋವೆರಾವು ಚರ್ಮಕ್ಕೆ ಮಾಯೀಶ್ಚರೈಸ್ ಮಾಡಲು ಮತ್ತು ಮೊಡವೆ, ಸನ್ ಬರ್ನ್ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ರೋಸ್ ವಾಟರ್ ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಕೆಂಪಗಾಗುವಿಕೆ ಮತ್ತು ಉಬ್ಬರ ಕಡಿಮೆ ಮಾಡುತ್ತದೆ. ಚರ್ಮದ ಟೋನ್ ಅನ್ನು ಸಹ ಹೊರ ಹಾಕಲು ಸಹಾಯ ಮಾಡುತ್ತದೆ. ಈ ಎರಡು ಅದ್ಭುತ ಸಾಮಾಗ್ರಿಗಳನ್ನು ಬಳಸಿಕೊಂಡು ಸ್ಕಿನ್ ಟೋನರ್ ತಯಾರಿಸುವುದು ಹೇಗೆ ಎಂದು ಇಲ್ಲಿ ನೋಡಿ

ವಿಧಾನ -  ಅಲೋವೆರಾ ಮತ್ತು ರೋಸ್ ವಾಟರ್ ಟೋನರ್ ತಯಾರಿಸುವ ವಿಧಾನ

ಒಂದು ಅಲೋವೆರಾ ಎಲೆಯನ್ನು ತೆಗೆದುಕೊಂಡು ಒಂದು ಬೌಲ್ ನಲ್ಲಿ ಜೆಲ್ ಅನ್ನು ತೆಗೆಯಿರಿ. ಈಗ ಸ್ವಲ್ಪ ತಾಜಾ ಗುಲಾಬಿ ದಳಗಳನ್ನು ತೆಗೆದುಕೊಂಡು, ನೀರಿನೊಂದಿಗೆ ಮಿಶ್ರಣ ಮಾಡಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಈಗ, ಜೆಲ್ ಅನ್ನು ರೋಸ್ ವಾಟರ್ ಗೆ ಹಾಕಿ ಮತ್ತೆ ಬ್ಲೆಂಡ್ ಮಾಡಿ.

ಬೇಕಾದಲ್ಲಿ ಎಸೆನ್ಶಿಯಲ್ ಆಯಿಲನ್ನು ಈ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಟೋನರ್‌ನಂತೆ ದ್ರವ ರೂಪದ ಸ್ಥಿರತೆಗೆ ತನ್ನಿ. ಹೀಗೆ ನೈಸರ್ಗಿಕವಾದ ಮನೆಯಲ್ಲೇ ತಯಾರಿಸಿದ ಟೋನರ್ ಅನ್ನು ಹೊಂದಿ, ಇದು ಶುಷ್ಕತೆಯನ್ನು ದೂರವಿಡುವುದು ಮಾತ್ರವಲ್ಲದೇ, ಚರ್ಮದ ಕಾಂತಿ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.

ತಾಜಾ ಆಗಿ ಇಡಲು ಈ ಟೋನರ್ ಅನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡಬಹುದು. ಇದನ್ನು ಮುಖ ಮತ್ತು ಕುತ್ತಿಗೆ ಮೇಲೆ ನಿಯಮಿತವಾಗಿ ಬಳಸಿ ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

ಸೂಚನೆ: ಲೇಖನದಲ್ಲಿ ನಮೂದಿಸಿರುವ ಪದಾರ್ಥಗಳು ನೈಸರ್ಗಿಕವಾಗಿದ್ದರೂ, ಅವುಗಳಲ್ಲಿ ಕೆಲವು ಅಲರ್ಜಿಯಾಗುವ ಸಾಧ್ಯತೆ ಇದೆ. ನಿಮ್ಮ ಸ್ಕಿನ್ ಕೇರ್ ಪದ್ಧತಿಯಲ್ಲಿ ಯಾವುದೇ ಪದಾರ್ಥಗಳನ್ನು ಸೇರಿಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?