- Home
- Technology
- What's New
- ಹಳೆಯ ಫೋಟೋಗಳಿಗೆ ಹೊಸ ಜೀವ ನೀಡುವ ChatGPT, ನಿಮ್ಮ ಓಲ್ಡ್ ಫೋಟೋಗೆ ಹೊಸ ಲುಕ್ ಬೇಕಾದ್ರೆ ಹೀಗೆ ಮಾಡಿ
ಹಳೆಯ ಫೋಟೋಗಳಿಗೆ ಹೊಸ ಜೀವ ನೀಡುವ ChatGPT, ನಿಮ್ಮ ಓಲ್ಡ್ ಫೋಟೋಗೆ ಹೊಸ ಲುಕ್ ಬೇಕಾದ್ರೆ ಹೀಗೆ ಮಾಡಿ
ChatGPT ಕೇವಲ ಬರಹದ ಉತ್ತರವಷ್ಟೇ ಅಲ್ಲದೆ, ಚಿತ್ರಗಳನ್ನೂ ರಚಿಸಬಹುದು. ಹಳೆಯ ಹರಿದ ಫೋಟೋಗಳನ್ನು ರಿಪೇರಿ ಮಾಡಿ ಹೊಸದಾಗಿ ಮಾಡಬಹುದು. ಕಪ್ಪು ಬಿಳುಪಿನ ಫೋಟೋಗಳನ್ನು ಕಲರ್ ಫೋಟೋಗಳನ್ನಾಗಿ ಪರಿವರ್ತಿಸಬಹುದು.
ದಿನದಿಂದ ದಿನಕ್ಕೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಜನರನ್ನು ಬೆರಗುಗೊಳಿಸುತ್ತಿವೆ. ಇವುಗಳಲ್ಲಿ ಪ್ರಮುಖವಾದದ್ದು ChatGPT ಎಂಬ ಟೂಲ್. ಈ ಲೇಖನದಲ್ಲಿ ChatGPTಯ ಒಂದು ಅತ್ಯುತ್ತಮ ವೈಶಿಷ್ಟ್ಯವನ್ನು ತಿಳಿದುಕೊಳ್ಳೋಣ. ಹಿಂದಿನ ದಿನಗಳಲ್ಲಿ ಸಣ್ಣದಾದರೂ ಸಂದೇಹ ಬಂದರೆ, ತಕ್ಷಣ ಗೂಗಲ್ ಓಪನ್ ಮಾಡಿ ಉತ್ತರ ಹುಡುಕುತ್ತಿದ್ದೆವು. ಆದರೆ ಈಗ ChatGPT ಬಂದುಬಿಟ್ಟ ಮೇಲೆ, ಜನರು ನೇರವಾಗಿ ಅದನ್ನೇ ಬಳಸುತ್ತಿದ್ದಾರೆ. ಗೂಗಲ್‌ನಲ್ಲಿ ಒಂದು ಪ್ರಶ್ನೆ ಕೇಳಿದರೆ ಹಲವಾರು ಉತ್ತರಗಳು ಸಿಗುತ್ತವೆ, ಆದರೆ ChatGPT ನಿಖರವಾದ, ಸ್ಪಷ್ಟವಾದ ಉತ್ತರವನ್ನು ನೇರವಾಗಿ ನೀಡುತ್ತದೆ.
ChatGPT ಮೂಲಕ ಕೇವಲ ಬರಹದ ಉತ್ತರವಷ್ಟೇ ಅಲ್ಲದೆ, ಚಿತ್ರಗಳನ್ನೂ ರಚಿಸಬಹುದು. ನಿಮ್ಮ ಕಲ್ಪನೆಗೆ ದೃಶ್ಯ ರೂಪ ಕೊಡಲು ಇದು ತುಂಬಾ ಸಹಾಯ ಮಾಡುತ್ತದೆ. ಒಂದು ಸನ್ನಿವೇಶವನ್ನು ಕಲ್ಪಿಸಿ ಅದನ್ನು ಪಠ್ಯ ರೂಪದಲ್ಲಿ (prompt) ChatGPTಗೆ ನೀಡಿದರೆ, ಅದು ಅದನ್ನು ಫೋಟೋ ರೂಪದಲ್ಲಿ ತೋರಿಸುತ್ತದೆ. ಆದರೆ ಇದರೊಂದಿಗೆ, ಸರಿಯಾದ ಪ್ರಾಂಪ್ಟ್ ಕೊಡಬೇಕಾದ ಅಗತ್ಯವಿದೆ.
ಹಳೆಯ ಕಾಲದಲ್ಲಿ ರೀಲ್ಸ್ ಕ್ಯಾಮೆರಾದ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಇಂದಿನ ಪೀಳಿಗೆಗೆ ಇದು ಆಶ್ಚರ್ಯವಾಗಬಹುದು. ಹಲವರ ಮನೆಯಲ್ಲಿ ಇಂತಹ ಹಳೆಯ ಫೋಟೋಗಳು ಇರುತ್ತವೆ. ಕೆಲವು ಹರಿದುಹೋಗಿರಬಹುದು. ಕೆಲವು ಬಣ್ಣ ಮಾಸಿರಬಹುದು. ಈಗ ಈ ಹಳೆಯ ಫೋಟೋಗಳನ್ನು ಚಾಟ್‌ಜಿಪಿಟಿಯ ಸಹಾಯದಿಂದ ಮತ್ತೆ ಪಡೆಯಬಹುದು.
ಹಳೆಯ ಫೋಟೋಗಳನ್ನು ಹೊಸದಾಗಿ ಮಾಡಬಹುದು! ಹೇಗೆ?
ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಆ ಹಳೆಯ ಫೋಟೋವನ್ನು ಕ್ಲಿಕ್ ಮಾಡಿ (ಅಥವಾ ಸ್ಕ್ಯಾನ್ ಮಾಡಿ).
ನಂತರ ChatGPT ಅನ್ನು ಓಪನ್ ಮಾಡಿ.
ಆ ಫೋಟೋವನ್ನು ChatGPTಗೆ ಅಪ್‌ಲೋಡ್ ಮಾಡಿ.
'Fix this image, repair damaged parts' ಎಂದು ಕಮಾಂಡ್ ಕೊಡಿ.
ಅಷ್ಟೆ! ChatGPT ಆ ಚಿತ್ರವನ್ನು ನವೀಕರಿಸಿ, ಹೊಸ ರೂಪದಲ್ಲಿ ನಿಮಗೆ ನೀಡುತ್ತದೆ.
ಕಪ್ಪು ಬಿಳುಪಿನ ಫೋಟೋಗಳನ್ನು ಕಲರ್ ಫೋಟೋವಾಗಿ ಮಾಡಬಹುದು.
ಇಂದಿಗೂ ಹಲವರ ಬಳಿಯಲ್ಲಿ ಕಪ್ಪು ಬಿಳುಪಿನ ಹಳೆಯ ಫೋಟೋಗಳು ಉಳಿದಿವೆ. ಇವುಗಳನ್ನು ಈಗ ನೀವು ಬಣ್ಣದ ಫೋಟೋಗಳಾಗಿ ಪರಿವರ್ತಿಸಬಹುದು.
ಫೋಟೋವನ್ನು ಮೊಬೈಲ್ ಮೂಲಕ ತೆಗೆದುಕೊಳ್ಳಿ
ಚಾಟ್‌ಜಿಪಿಟಿಯಲ್ಲಿ ಅಪ್‌ಲೋಡ್ ಮಾಡಿ.
ಈ ಪ್ರಾಂಪ್ಟ್ ನೀಡಿ: "Convert this black and white photo into a color photo.."
ಅದ್ರಿಂದಲೇ, ಬಣ್ಣದ ಹೊಸ ರೂಪದಲ್ಲಿ ಆ ಹಳೆಯ ನೆನಪನ್ನು ಮತ್ತೆ ಕಾಣಬಹುದು!