ದುರಂತದ ಮುನ್ಸೂಚನೆಯೇ?, ಅಂದೂ ಸಹ 19 ಸಾವಿರ ಜನರ ಸಾವಿಗೂ ಮುನ್ನ ಈ ಮೀನು ಕಾಣಿಸಿಕೊಂಡಿತ್ತು!
ಓರ್ ಫಿಶ್ ನಿಧಾನವಾಗಿ ಚಲಿಸುವ ಸೋಮಾರಿ ಮೀನು, ಇದು ಬಹಳ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ನಿಧಾನವಾಗಿ ಈಜುತ್ತದೆ. ಈ ಮೀನಿಗೂ ವಿಪತ್ತುಗಳಿಗೂ ಸಂಬಂಧವಿದೆ ಎನ್ನಲಾಗಿದೆ.

ತಮಿಳುನಾಡು ಕರಾವಳಿಯಲ್ಲಿ ಒಂದು ವಿಶಿಷ್ಟವಾದ ಓರ್ ಫಿಶ್ ಸೆರೆಹಿಡಿಯಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಈ ಮೀನನ್ನು 'ಡೂಮ್ಸ್‌ಡೇ ಫಿಶ್' ಎಂದೂ ಕರೆಯುತ್ತಾರೆ. ಈ ಆಳ ಸಮುದ್ರ ಜೀವಿ (ಮೇಲ್ಮೈ ಬಳಿ ಅಪರೂಪವಾಗಿ ಕಂಡುಬರುತ್ತದೆ) ಜಪಾನಿನ ಹಳೆಯ ನಂಬಿಕೆಯ ಪ್ರಕಾರ ನೈಸರ್ಗಿಕ ವಿಕೋಪಗಳ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ.
ಸ್ವಾಭಾವಿಕವಾಗಿ ಇದು ಭಾರತೀಯ ಕರಾವಳಿಯಲ್ಲಿ ಕಂಡುಬಂದಿರುವುದು ಸ್ಥಳೀಯರಲ್ಲಿ ಕಳವಳವನ್ನುಂಟುಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಏಳು ಜನರು ಈ ಅಪರೂಪದ ಸಮುದ್ರ ಜೀವಿಯನ್ನು ಹಿಡಿದಿರುವುದನ್ನು ಕಾಣಬಹುದು. ಈ ಮೀನು ಬೆಳ್ಳಿಯ, ಅಲೆಅಲೆಯಾದ ದೇಹವನ್ನು ಮತ್ತು ಅದರ ತಲೆಯ ಬಳಿ ಆಕರ್ಷಕ ಕೆಂಪು ರೆಕ್ಕೆಯನ್ನು ಹೊಂದಿದೆ.
ವೈರಲ್ ಆಗುತ್ತಿರುವ ಪೋಸ್ಟ್‌ನ ಶೀರ್ಷಿಕೆ ಹೀಗಿದೆ, 'ಆಳ ಸಮುದ್ರದಲ್ಲಿ ಸಾಮಾನ್ಯವಾಗಿ ಕಂಡುಬರುವ ಡೂಮ್ಸ್‌ಡೇ ಮೀನು ಎಂದೂ ಕರೆಯಲ್ಪಡುವ ಅಪರೂಪದ ಓರ್ ಫಿಶ್ ತಮಿಳುನಾಡಿನಲ್ಲಿ ಬಲೆಗೆ ಸಿಕ್ಕಿಹಾಕಿಕೊಂಡಿದೆ.'
ಓರ್ ಫಿಶ್ ನಿಧಾನವಾಗಿ ಚಲಿಸುವ ಮತ್ತು ಸೋಮಾರಿಯಾದ ಮೀನು, ಇದು ಬಹಳ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ನಿಧಾನವಾಗಿ ಈಜುತ್ತದೆ. ಈ ಮೀನು ವಿಪತ್ತುಗಳೊಂದಿಗೆ ಸಹ ಸಂಬಂಧಿಸಿದೆ. ಏಕೆಂದರೆ ಜನರು ಪ್ರಮುಖ ಭೂಕಂಪಗಳಿಗೆ ಮೊದಲು, ವಿಶೇಷವಾಗಿ ಜಪಾನ್‌ನಲ್ಲಿ ಓರ್ ಫಿಶ್ ದಡಕ್ಕೆ ಬರುವುದನ್ನು ನೋಡಿದ್ದಾರೆ. 2011ರಲ್ಲಿ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದಾಗ ಸರಿಸುಮಾರು 19 ಸಾವಿರ ಜನರು ಸಾವನ್ನಪ್ಪಿದರು. ಆಗ ಕೂಡ ಈ ಮೀನು ಕಾಣಿಸಿಕೊಂಡಿತ್ತು. ಇದು ನೀರಿನೊಳಗಿನ ಭೂಕಂಪನ ಚಟುವಟಿಕೆಯನ್ನು ಗ್ರಹಿಸಬಹುದು ಮತ್ತು ಮಾನವರಿಗೆ ಎಚ್ಚರಿಕೆ ನೀಡಲು ಮೇಲ್ಮೈಗೆ ಬರಬಹುದು ಎಂದು ಅವರು ನಂಬುತ್ತಾರೆ.
ಆದರೆ ಈ ಸಿದ್ಧಾಂತವನ್ನು ವಿಜ್ಞಾನವು ಎಂದಿಗೂ ದೃಢಪಡಿಸಲ್ಲ. ಓರ್ ಫಿಶ್ 11 ಮೀಟರ್ ಉದ್ದವಿರಬಹುದು. ಅವು ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ವಾಸಿಸುತ್ತವೆ ಮತ್ತು ಅನಾರೋಗ್ಯಕ್ಕೆ ಒಳಗಾದಾಗ, ಸತ್ತಾಗ ಅಥವಾ ಸಂತಾನೋತ್ಪತ್ತಿ ಮಾಡಿದಾಗ ಮಾತ್ರ ಮೇಲ್ಮೈಗೆ ಮರಳುತ್ತವೆ.
ಈ ಮೀನನ್ನು ನೋಡುವುದು ಅಪರೂಪ. ಆದರೆ ಇತ್ತೀಚಿನ ವರ್ಷಗಳಲ್ಲಿ, ಇದು ಪ್ರಪಂಚದಾದ್ಯಂತ ಹಲವಾರು ಬಾರಿ ಕಾಣಿಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ, ಟ್ಯಾಸ್ಮೇನಿಯಾದ ಸ್ಟ್ರಾಹಾನ್ ಬಳಿಯ ಓಷನ್ ಬೀಚ್‌ನಲ್ಲಿ ಓರ್ ಫಿಶ್ ಕಂಡುಬಂದಿದೆ. ಮೂರು ಮೀಟರ್ ಉದ್ದದ ಈ ಮೀನನ್ನು ನಿವಾಸಿ ಸಿಬಿಲ್ ರಾಬರ್ಟ್ಸನ್ ಕಡಲತೀರದಲ್ಲಿ ನಡೆದಾಡುವಾಗ ಕಂಡುಹಿಡಿದರು.
The rarely seen oarfish, which usually are in deep-sea, which is also known as 'Doomsday' fish is caught in the net in TamilNadu pic.twitter.com/8N4TTNyDec
— Aryan (@chinchat09) June 16, 2025