- Home
- Entertainment
- TV Talk
- ಮತ್ತೆ 130gm ಗೋಲ್ಡ್ ಖರೀದಿಸಿದ ಯುಟ್ಯೂಬರ್ ಮಧು ಗೌಡ ನೋಡಿ ವೀಕ್ಷಕರಿಗಾಯ್ತು ದೊಡ್ಡ ಜ್ಞಾನೋದಯ! ಏನದು?
ಮತ್ತೆ 130gm ಗೋಲ್ಡ್ ಖರೀದಿಸಿದ ಯುಟ್ಯೂಬರ್ ಮಧು ಗೌಡ ನೋಡಿ ವೀಕ್ಷಕರಿಗಾಯ್ತು ದೊಡ್ಡ ಜ್ಞಾನೋದಯ! ಏನದು?
ಕನ್ನಡ ಯುಟ್ಯೂಬರ್ ಮಧು ಗೌಡ ಹಾಗೂ ನಿಖಿಲ್ ರವೀಂದ್ರ ದಂಪತಿ ಮದುವೆಗೆ ಭರ್ಜರಿ ಹಣ ಖರ್ಚು ಮಾಡಿತ್ತು. ಅದಾದ ಬಳಿಕ ಥಾರ್ ಗಾಡಿ, ಬಂಗಾರ, ಫಾರಿನ್ ಟ್ರಿಪ್, ಇನ್ನುಳಿದಂತೆ ಗಿಫ್ಟ್ ಎಂದು ಒಂದಲ್ಲ ಒಂದು ವಸ್ತುಗಳನ್ನು ಖರೀದಿ ಮಾಡುತ್ತಲೇ ಇರುವುದು. ಈಗ ಇನ್ನೂ ದುಬಾರಿ ವಸ್ತುವನ್ನು ಖರೀದಿಸಿದೆ.

ಗಂಡ ನಿಖಿಲ್ ಸಾಕಷ್ಟು ಬಾರಿ ಹುಟ್ಟುಹಬ್ಬಕ್ಕೆ ಏನು ಗಿಫ್ಟ್ ಬೇಕು ಎಂದು ಕೇಳಿದ್ದರು. ಆಗ ಮಧು ಅವರು ಈಗ ನನ್ನ ಬಳಿ ಎಲ್ಲವೂ ಇದೆ. ಏನೂ ಬೇಡ ಅಂತ ಹೇಳಿದ್ದರು. ಆಮೇಲೆ ಮಧು ಗೌಡ ಅವರು ಬೆಳ್ಳಿ ಫ್ರೇಮ್ ಇರೋ ದೇವರ ಫೋಟೋವನ್ನು ಖರೀದಿ ಮಾಡಿದ್ದರು.
ಮಧು ಗೌಡ ಅವರ ತಂದೆ ಒಡೆತನದ ಹದಿನಾಲ್ಕು ಮನೆಗಳಿವೆಯಂತೆ. ಅವುಗಳನ್ನು ಬಾಡಿಗೆಗೆ ಕೊಡಲಾಗಿದೆ. ಮದುವೆ ಬಳಿಕ ಅವರಿಗೆ ಒಂದು ಮನೆಯನ್ನು ಗಿಫ್ಟ್ ಆಗಿ ಕೂಡ ನೀಡಲಾಗಿತ್ತು. ಆರ್ಥಿಕವಾಗಿ ಮೊದಲಿನಿಂದಲೂ ಇವರು ತುಂಬ ಚೆನ್ನಾಗಿದ್ದವರು.
ಮಧು ಗೌಡ ಅವರು ಯುಟ್ಯೂಬ್ ಚಾನೆಲ್ ಹೊಂದಿದ್ದು, ಅಲ್ಲಿ ವಿವಿಧ ರೀತಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಸಾಕಷ್ಟು ಬ್ರ್ಯಾಂಡ್ ಪ್ರಮೋಶನ್ ಮಾಡಿ ಹಣ ಗಳಿಸುವುದುಂಟು. ಇವರ ವಿಡಿಯೋಗಳಿಗೆ ದೊಡ್ಡ ಮಟ್ಟದ ವೀಕ್ಷಣೆ ಕೂಡ ಸಿಗುವುದು.
ಸದಾ ಸೆಲೆಬ್ರೇಶನ್, ಆಸ್ತಿ ಖರೀದಿ ಮಾಡೋದು, ಬಂಗಾರ ಖರೀದಿ ಮಾಡುವ ವಿಡಿಯೋಗಳನ್ನು ಅವರು ಶೇರ್ ಮಾಡೋದು ಜಾಸ್ತಿ. ತಾವು ಸೇವಿಂಗ್ಸ್ ಮಾಡಿರೋ ಹಣದಿಂದ 130 ಗ್ರಾಂ ಬಂಗಾರವನ್ನು ಖರೀದಿ ಮಾಡಿದ್ದಾರೆ. ಹೌದು, 15 ಲಕ್ಷ ರೂಪಾಯಿ ನೀಡಿ ಬಂಗಾರದ ಆಭರಣವನ್ನು ಖರೀದಿಸಿದ್ದಾರಂತೆ.
ಮಧು ಬಂಗಾರ ಇಷ್ಟು ಆಸ್ತಿ ಮಾಡೋದನ್ನು ನೋಡಿರೋ ಕೆಲ ವೀಕ್ಷಕರು, “ನಾವು ಇವರ ವಿಡಿಯೋಗಳನ್ನು ನೋಡಿ ಬೆಳೆಸುತ್ತಿದ್ದೇವೆ, ನಾನು ಹೇಗಿದ್ದೆವೆಯೋ ಹಾಗೆ ಇದ್ದೇವೆ” ಎಂದಿದ್ದಾರೆ. ಇನ್ನೂ ಕೆಲವರು ಇವರಿಗೆಲ್ಲ ಎಲ್ಲಿಂದ ಹಣ ಬರುತ್ತದೆ ಅಂತ ಅರ್ಥ ಆಗೋದಿಲ್ಲ ಎಂದಿದ್ದಾರೆ.