- Home
- Entertainment
- TV Talk
- ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ ಈ ವ್ಯಕ್ತಿ Bigg Boss Kannada Season 12 ಶೋನಲ್ಲಿ ಸ್ಪರ್ಧಿಯಾಗಲಿದ್ದಾರಾ?
ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ ಈ ವ್ಯಕ್ತಿ Bigg Boss Kannada Season 12 ಶೋನಲ್ಲಿ ಸ್ಪರ್ಧಿಯಾಗಲಿದ್ದಾರಾ?
ಕಿಚ್ಚ ಸುದೀಪ್ ನಟನೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಖ್ಯಾತ ಯುಟ್ಯೂಬರ್ ಭಾಗವಹಿಸಲಿದ್ದಾರಾ? ಹಾಗಾದರೆ ಅವರು ಯಾರು?

ಧರ್ಮಸ್ಥಳ ಸೌಜನ್ಯಾ ಅತ್ಯಾ*ಚಾರ ಆರೋಪದ ವಿಚಾರವಾಗಿ ಕನ್ನಡ ಯೂಟ್ಯೂಬರ್ ಸಮೀರ್ ಎಂಡಿ ಅವರು "ಧೂತ" ಯುಟ್ಯೂಬ್ ಚಾನೆಲ್ ಮೂಲಕ ದನಿ ಎತ್ತಿದ್ದರು. ಅದಾದ ಬಳಿಕ ಈ ಕೇಸ್ ಮತ್ತೆ ಜೀವನ ಪಡೆದು ತನಿಖೆ ಆಗುತ್ತಿದೆ. ತನಿಖಾ ವಿಷಯಗಳಿಗೆ ಸಂಬಂಧಿಸಿದ ಒಂದಷ್ಟು ಪ್ರಕರಣಗಳ ವಿಡಿಯೋಗಳಿಂದ ಸಮೀರ್ ಈಗ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ.
ಇತ್ತೀಚೆಗೆ, ಸಮೀರ್ ಎಂಡಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಭಾಗವಹಿಸಲಿದ್ದಾರೆ ಎಂಬ ವದಂತಿಗಳು ಹರಡಿವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಧರ್ಮಸ್ಥಳದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಪಟ್ಟ ವಿವಾದಾತ್ಮಕ ವಿಡಿಯೋದಿಂದ ಚರ್ಚೆಯಲ್ಲಿರುವ ಸಮೀರ್ ಎಂಡಿಯನ್ನು ಬಿಗ್ ಬಾಸ್ ತಂಡ ಸಂಪರ್ಕಿಸಿದೆ ಎಂದು ತಿಳಿದುಬಂದಿದೆ.
ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ನಾನು ಭಾಗಿ ಆಗೋದಿಲ್ಲ ಎಂದು ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಶೋನ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಸಮೀರ್ ಎಂಡಿ ಹೆಸರಿದೆ. ಈ ಬಗ್ಗೆ ಸಮೀರ್ ಅಥವಾ ವಾಹಿನಿಯು ಪ್ರತಿಕ್ರಿಯೆ ನೀಡಬೇಕಿದೆ.
ಬಿಗ್ ಬಾಸ್ ಕನ್ನಡ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಈ ಶೋ ಆರಂಭ ಆಗುವ ಮುನ್ನ ಯಾರಿಗೂ ಹೇಳಬಾರದು ಎಂದು ನೀತಿ ಇದೆ. ಹೀಗಾಗಿ ವಾಹಿನಿಯು ಈ ಬಗ್ಗೆ ಮಾತನಾಡೋದಿಲ್ಲ. ಆದರೆ ಶೋಗೆ ಹೋಗೋದಿಲ್ಲ ಎಂದಾದಲ್ಲಿ ಸೆಲೆಬ್ರಿಟಿಗಳು ಮಾಧ್ಯಮದ ಮುಂದೆ ಹೇಳಿಕೊಳ್ಳುತ್ತಾರೆ.
ಅಂದಹಾಗೆ ರೀಲ್ಸ್ ರೇಷ್ಮಾ, ಡಾ ಬ್ರೋ, ನಿರೂಪಕಿ ಜಾಹ್ನವಿ, ಸಾಗರ್ ಬಿಳಿಗೌಡ ಮುಂತಾದವರು ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಇರಲಿದ್ದಾರೆ ಎಂದು ಹೇಳಲಾಗ್ತಿದೆ.
ಸೆಪ್ಟೆಂಬರ್ ಅಂತ್ಯದಲ್ಲಿ ಬಿಗ್ ಬಾಸ್ ಶೋ ಶುರುವಾಗಲಿದೆ. ಕಿಚ್ಚ ಸುದೀಪ್ ಅವರು ಈ ಶೋ ನಿರೂಪಣೆ ಮಾಡಲಿದ್ದಾರೆ. ಅಂದಹಾಗೆ ಈ ಬಾರಿಯ ಬಿಗ್ ಬಾಸ್‌ನಲ್ಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಲಾಗ್ತಿದೆ ಎಂದು ಹೇಳಲಾಗ್ತಿದೆ.