- Home
- Entertainment
- TV Talk
- ಕನ್ನಡ ಬಿಟ್ಟು ತೆಲುಗು ಬಿಗ್ ಬಾಸ್ ಸುಂದರಿ ಕಡೆ ಹೋಗ್ತಿದ್ಯಲ್ಲ ಕನ್ನಡಿಗರ ಮನಸ್ಸು… ಯಾರೀ ಬ್ಯೂಟಿ
ಕನ್ನಡ ಬಿಟ್ಟು ತೆಲುಗು ಬಿಗ್ ಬಾಸ್ ಸುಂದರಿ ಕಡೆ ಹೋಗ್ತಿದ್ಯಲ್ಲ ಕನ್ನಡಿಗರ ಮನಸ್ಸು… ಯಾರೀ ಬ್ಯೂಟಿ
ಬಿಗ್ ಬಾಸ್ ತೆಲುಗು 9 - 2.0 ಭರ್ಜರಿಯಾಗಿ ಪ್ರಸಾರವಾಗುತ್ತಿದ್ದು, ಇದೀಗ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಬೆಡಗಿ ಕೇವಲ ತೆಲುಗಿನಲ್ಲಿ ಮಾತ್ರವಲ್ಲ, ಕನ್ನಡ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಯಾರು ಆ ಬೆಡಗಿ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಗ್ ಬಾಸ್ ತೆಲುಗು 9
ಬಿಗ್ ಬಾಸ್ ತೆಲುಗು 9 ಇದೀಗ 2.0 ಹಂತವನ್ನು ಪ್ರವೇಶಿಸಿದೆ, ಮತ್ತು ಆಟವು ಎಂದಿಗಿಂತಲೂ ಹೆಚ್ಚು ವಿಭಿನ್ನವಾಗಿ ಅದ್ಭುತವಾಗಿ ಪ್ರಸಾರವಾಗುತ್ತಿದೆ. ವೈಲ್ಡ್‌ಕಾರ್ಡ್ ಎಂಟ್ರಿ ಮೂಲಕ ಹೊಸ ಮುಖಗಳು, ಹೊಸ ಹೊಸ ಟ್ವಿಸ್ಟ್, ಡ್ರಾಮ, ಪವರ್ ಪ್ಲೇ ಎಲ್ಲಾ ಸೇರಿ ರಣರಂಗವಾಗಿದೆ. ಇದೀಗ ತೆಲುಗು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ತಮಿಳು ಕಿರುತೆರೆ ನಟಿ ಆಯೇಷಾ ಝಿನಥ್ ಸದ್ಯಕ್ಕಂತೂ ಎಲ್ಲಾ ಕಡೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಆಯೇಷಾ ಝಿನಥ್ ಯಾರು?
ನಿರ್ಭೀತ ಸ್ವಭಾವ ಮತ್ತು ದಿಟ್ಟ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಆಯೇಷಾ ಝಿನಥ್ , ಐದನೇ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎನರ್ಜಿ, ಕಾನ್ಫಿಡೆನ್ಸ್ ಮತ್ತು ಸೌಂದರ್ಯ ತಕ್ಷಣವೇ ಎಲ್ಲರ ಗಮನ ಸೆಳೆದಿದೆ. ನಿರೂಪಕ ನಾಗಾರ್ಜುನ ಕೂಡ ಅಯೇಸಾ ಅವರ ಉತ್ಸಾಹ ಮತ್ತು ತೆಲುಗು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡೊದನ್ನು ಹೊಗಳಿದರು. ಈ ಸಮಯದಲ್ಲಿ ಆಯೇಷಾ ತನಗೆ ಈಗ ಟ್ರೋಫಿ ಗೆಲ್ಲುವತ್ತ ಮಾತ್ರ ಗಮನ ಇದೆ ಎಂದು ಹೇಳಿದ್ದರು.
ಆಯೇಷಾ ಕುರಿತು ಒಂದಷ್ಟು ಮಾಹಿತಿ
ಜೂನ್ 6, 1997 ರಂದು ಜನಿಸಿದ ಆಯೇಷಾ, ಪೊನ್ಮಗಲ್ ವಂತಲ್ ಸೀರಿಯಲ್ ಮೂಲಕ ತಮ್ಮ ಕರಿಯರ್ ಪ್ರಾರಂಭಿಸಿದರು ಮತ್ತು ಸತ್ಯ ಮತ್ತು ಸತ್ಯ 2 ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದರು. ನಂತರ ಅವರು ಉಪ್ಪು ಪುಲಿ ಖಾರಮ್, ತಾರಾ ಮತ್ತು ಮೋಯಿ ವಿರುಂಡು ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಿಗ್ ಬಾಸ್ ತಮಿಳು 6 ರ ಸಮಯದಲ್ಲಿ ಆಯೇಷಾ ಭಾರಿ ಗಮನ ಸೆಳೆದರು, ಅಲ್ಲಿ ಕಮಲ್ ಹಾಸನ್ ಅವರೊಂದಿಗಿನ ಅವರ ಚರ್ಚೆಗಳು ಭಾರಿ ವೈರಲ್ ಆಗಿದ್ದವು.
ಬಿಗ್ ಬಾಸ್ 2.0 ಆರಂಭ
ಬಿಗ್ ಬಾಸ್ ತೆಲುಗು 9 ರ ಹೊಸ ಹಂತ, "2.0", ಇದೀಗ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಿದ್ದು. ವಾರಾಂತ್ಯದ ಸಂಚಿಕೆಯು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಈ ಸಂದರ್ಭದಲ್ಲಿ, ಇತರ ಭಾಷೆಗಳ ಬಿಗ್ ಬಾಸ್ ನಿರೂಪಕರು ವಿಶೇಷ ವೀಡಿಯೊ ಸಂದೇಶಗಳ ಮೂಲಕ ಕಾಣಿಸಿಕೊಂಡರು. ತಮಿಳು ಬಿಗ್ ಬಾಸ್ ನಿರೂಪಕ ವಿಜಯ್ ಸೇತುಪತಿ, ಆಯೇಷಾಗೆ ಶುಭ ಹಾರೈಸಿದರು ಮತ್ತು ನಾಮಿನೇಶನ್ ಪವರ್ ಕೂಡ ನೀಡಿದರು. ಈ ಶಕ್ತಿಯು ಮುಂಬರುವ ವಾರಗಳಲ್ಲಿ ನಾಮಿನೇಷನ್ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಅವರಿಗೆ ಅವಕಾಶ ನೀಡುತ್ತದೆ.
ಹೊಸ ಸಂಚಲನ
ಆಯೆಷಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ದೊಡ್ಮನೆಗೆ ಹೊಸ ಎನರ್ಜಿ, ಶಕ್ತಿ ತಂದಿದ್ದಾರೆ ಅಂದ್ರೆ ಸುಳ್ಳಲ್ಲ. ಅವರ ಉತ್ಸಾಹಭರಿತ ಮಾತುಗಳು, ನೇರವಾದ ಅಭಿಪ್ರಾಯಗಳು ಮತ್ತು ಆಕರ್ಷಕ ಆಟಿಟ್ಯೂಡ್ ಈಗಾಗಲೇ ಅವರನ್ನು ಅಭಿಮಾನಿಗಳ ಫೇವರಿಟ್ ಕಂಟೆಸ್ಟ್ಂಟ್ ಆಗಿ ಮಾಡಿದೆ. ಬಿಗ್ ಬಾಸ್ ತೆಲುಗು 9 ರ 2.0 ಆರಂಭವಾಗಿ ಇಷ್ಟು ದಿನದ ಬಳಿಕ ದೊಡ್ಮನೆಗೆ ಎಂಟ್ರಿ ಕೊಟ್ಟ ಆಯೆಷಾ ಹೇಗೆ ಮನೆ ಪೂರ್ತಿ ಆವರಿಸುತ್ತಾರೆ ಕಾದು ನೋಡಬೇಕು.
ಕನ್ನಡಿಗರ ಕಣ್ಣು ಕೂಡ ಆಯೇಷಾ ಮೇಲೆ
ಈಗಂತೂ ಆಯೇಷಾ ಮೇಲೆ ಕನ್ನಡಿಗರ ಕಣ್ಣೂ ಕೂಡ ಬಿದ್ದಿದ್ದು, ಕನ್ನಡ ಬಿಗ್ ಬಾಸ್ ಬಿಟ್ಟು ತೆಲುಗು ಬಿಗ್ ಬಾಸ್ ಕಡೆ ಜನ ಮುಖ ಮಾಡಿದ್ದಂಗಿದೆ. ಕನ್ನಡ ಸೋಶಿಯಲ್ ಮೀಡಿಯಾದಲ್ಲೂ ಕೂಡ ಆಯೇಷಾ ಮಿಂಚುತ್ತಿದ್ದಾರೆ. ಜನ ಯಾರೂ ಈ ಬ್ಯೂಟಿ. ಭಾಷೆ ಗೊತ್ತಾಗಿಲ್ಲಾಂದ್ರು ಪರ್ವಾಗಿಲ್ಲ, ಅಂದವನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಿದ್ದಾರೆ.