ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ತ್ರಿಪುರ ಸುಂದರಿ’ ನಟಿ ಹರ್ಷಿತಾ ವೆಂಕಟೇಶ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ತ್ರಿಪುರ ಸುಂದರಿ ಧಾರಾವಾಹಿ ನಟಿಸಿರುವ ಹಾಗೂ ರಾಜಾ ರಾಣಿ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿದ್ದ ನಟಿ ಹರ್ಷಿತಾ ವೆಂಕಟೇಶ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿದ್ದಾರೆ.

ಚೊಚ್ಚಲ ತಾಯ್ತನದ ಸಂಭ್ರಮ
ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ಹೌದು ಆ ನಟಿ ಹರ್ಷಿತಾ ವೆಂಕಟೇಶ್. ಇವರ ಪ್ರೆಗ್ನೆನ್ಸಿ ಫೋಟೊ ಶೂಟ್ ಸದ್ಯ ವೈರಲ್ ಆಗುತ್ತಿದೆ.
‘ತ್ರಿಪುರ ಸುಂದರಿ’ ನಟಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ಹಾಗೂ ವಿಲನ್ ಆಗಿ ಹರ್ಷಿತಾ ವೆಂಕಟೇಶ್ ನಟಿಸಿದ್ದರು.
ಹರ್ಷಿತಾ ವೆಂಕಟೇಶ್
ಹರ್ಷಿತಾ ವೆಂಕಟೇಶ್ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ತೆಲುಗು ಕಿರುತೆರೆಯಲ್ಲೂ ಸಹ ಇವರು ಮಿಂಚಿದ್ದಾರೆ.
ಬೆಂಗಳೂರು ಹುಡುಗಿ
ಹರ್ಷಿತಾ ಬೆಂಗಳೂರಿನ ಹುಡುಗಿ. ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಂತೆ ಅವರಿಗೆ ಬೇರೆ ಭಾಷೆಯಿಂದ ಕೂಡ ಆಫರ್ ಬರತೊಡಗಿತು. ಈಗಾಗಲೇ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಹರ್ಷಿತಾ ನಟಿಸಿದ್ದಾರೆ.
ನಟಿಸಿರುವ ಧಾರಾವಾಹಿಗಳು
ಹರ್ಷಿತಾ ವೆಂಕಟೇಶ್ ಅವರು ಕಾರ್ತಿಕ ದೀಪ, ಮೇಘ ಮಯೂರಿ, ಚಂದನದ ಗೊಂಬೆ, ಅಮ್ನೋರು, ಮಡದಿ ಸೇರಿ ಅನೇಕ ಕನ್ನಡ ಧಾರಾವಾಹಿಗಳಲ್ಲಿ ಹಾಗೂ ಎರಡು ತೆಲುಗು ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ.
ವಿನಯ್ ಜೊತೆ ವಿವಾಹ
ಹರ್ಷಿತಾ ವೆಂಕಟೇಶ್ ಹಾಗೂ ವಿನಯ್ ಜೊತೆ 2020ರ ಆಗಸ್ಟ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾದಿಂದಾಗಿ ನಟಿ ಅಂದುಕೊಂಡಂತೆ ಅದ್ದೂರಿಯಾಗಿ ಮದುವೆ ಮಾಡಲು ಸಾಧ್ಯವಾಗಲಿಲ್ಲ.
ರಾಜಾ ರಾಣಿಯಲ್ಲಿ ಜೋಡಿ
ಹರ್ಷಿತಾ ವೆಂಕಟೇಶ್ ತಮ್ಮ ಪತಿ ಜೊತೆ ಕಲರ್ಸ್ ಕನ್ನಡದ ಜನಪ್ರಿಯ ಕಪಲ್ ರಿಯಾಲಿಟಿ ಶೋ ರಾಜಾ ರಾಣಿಯಲ್ಲಿ ಭಾಗವಹಿಸಿದ್ದರು. ಈ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.
ಮೊದಲ ಮಗುವಿನ ನಿರೀಕ್ಷೆ
ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿತಾ, ದೇವಸ್ಥಾನದಲ್ಲಿ ಸುಂದರವಾದ ಫೋಟೊ ಶೂಟ್ ಮಾಡಿಸಿದ್ದು, ಫೋಟೋಗಳು ಸಿಂಪಲ್ ಹಾಗೂ ಸುಂದರವಾಗಿ ಬಂದಿವೆ.