- Home
- Entertainment
- TV Talk
- 'ನಮ್ ಮನೆ, ನಮ್ ಇಷ್ಟ'-ಚಿತ್ರವಿಚಿತ್ರ ಬಟ್ಟೆ ಹಾಕಿ, ಡುಪ್ಲೆಕ್ಸ್ ಮನೆ ಕಟ್ಟಿಸಿದ Tik Tok Tharun Nayak
'ನಮ್ ಮನೆ, ನಮ್ ಇಷ್ಟ'-ಚಿತ್ರವಿಚಿತ್ರ ಬಟ್ಟೆ ಹಾಕಿ, ಡುಪ್ಲೆಕ್ಸ್ ಮನೆ ಕಟ್ಟಿಸಿದ Tik Tok Tharun Nayak
ಚಿತ್ರವಿಚಿತ್ರ ಬಟ್ಟೆ ಹಾಕುವ ಟಿಕ್ ಟಾಕರ್ ತರುಣ್ ಈಗ ಭರ್ಜರಿಯಾಗಿ ಮನೆ ಕಟ್ಟಿಸಿದ್ದಾರೆ. ಈ ಮನೆ ಹೇಗಿದೆ?

ಟಿಕ್ ಟಾಕ್ ಮಾಡುವಾಗ ತರುಣ್ ಎನ್ನುವವರ ಒಂದು ವಿಡಿಯೋ, ಒಂದು ದಿನದಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದಿತ್ತು. ಅದಾದ ನಂತರ ಅವರು ಯುಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ತರುಣ್ ಅವರಿಗೆ ಯುಟ್ಯೂಬ್‌ನಲ್ಲಿ 2.9 ಮಿಲಿಯನ್ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಕಳೆದ ಒಂದು ವರ್ಷದಿಂದ ಯುಟ್ಯೂಬ್‌ನಿಂದ ಹಣ ಬರುತ್ತಿದೆಯಂತೆ. ಯುಟ್ಯೂಬ್‌ನಿಂದ ಅಷ್ಟು ಹಣ ಬರುತ್ತಿಲ್ಲ ಎಂದು ಬೇರೆ ಏನಾದರೂ ಕೆಲಸ ಮಾಡಬೇಕು ಅಂತ ತರುಣ್ ಅಂದುಕೊಂಡಿದ್ದಾರಂತೆ.
ತರುಣ್ ಅವರು ಡಿಗ್ರಿ ಓದಿದ್ದಾರೆ. ಅಣ್ಣ ಜೊತೆಗೆ ತಾಯಿ ಕೂಡ ಇದ್ದಾರೆ. ತಾಯಿ ಮುನ್ಸಿಪಾಲ್ಟಿಯಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಅಣ್ಣ ಕೂಡ ಓದುತ್ತಿದ್ದಾರೆ. ಅಣ್ಣ ಹಾಗೂ ತಮ್ಮ ಇಬ್ಬರೂ ಖಾಸಗಿ ಶಾಲೆಯಲ್ಲಿ ಓದಿದ್ದಾರೆ. ತಂದೆ ತೀರಿಕೊಂಡು 11 ವರ್ಷಗಳೇ ಕಳೆದಿವೆ.
ವ್ಯವಸಾಯ ಮಾಡುವಾಗ ತರುಣ್ ತಂದೆ ಕರೆಂಟ್ ಶಾಕ್ ಹೊಡೆದು ತೀರಿಕೊಂಡಿದ್ದಾರೆ. ಅಪ್ಪ ಅಂದರೆ ತುಂಬ ಇಷ್ಟ. ಈಗ ಅವರು ಇಲ್ಲದಿರೋದು ಬೇಸರ ತಂದಿದೆ ಎಂದು ತರುಣ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ನಮ್ಮ ಮನೆ ನಮಗೆ ಇಷ್ಟ ಆದರೆ ಸಾಕು, ಉಳಿದವರಿಗೆ ಇಷ್ಟ ಆಗಬೇಕು ಅಂತೇನಿಲ್ಲ. ನಿಮಗೆ ನಮ್ಮ ಸ್ಥಿತಿ ಅರ್ಥ ಆಗೋದಿಲ್ಲ, ಆದರೆ ನೀವು ಕೆಟ್ಟದಾಗಿ ಮಾಡಿ ಧೈರ್ಯ ಕುಂದುವ ಹಾಗೆ ಮಾಡ್ತೀರಿ. ನಾವು ಶ್ರೀಮಂತರಲ್ಲ. ನಾನು ಮಧ್ಯಮವರ್ಗದವರು, ಒಮ್ಮೊಮ್ಮೆ ಊಟ ಇಲ್ಲ ಅಂದಾಗ ನೀರು ಕುಡಿದುಕೊಂಡು ಬದುತ್ತಿದ್ದೆವು. ಅಂಥ ಸ್ಥಿತಿಯಿಂದ ಈವರೆಗೆ ಬಂದಿದ್ದೇವೆ” ಎಂದಿದ್ದಾರೆ ತರುಣ್.