- Home
- Entertainment
- TV Talk
- ಹೊಸ ಹೆಜ್ಜೆ ಇಟ್ಟ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ವರಲಕ್ಷ್ಮೀ… ಸೀರಿಯಲ್ ಬಿಟ್ತಿದ್ದಾರ?
ಹೊಸ ಹೆಜ್ಜೆ ಇಟ್ಟ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ವರಲಕ್ಷ್ಮೀ… ಸೀರಿಯಲ್ ಬಿಟ್ತಿದ್ದಾರ?
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಟಿ ಪ್ರಜ್ಞಾ ಭಟ್ ಇದೀಗ ಹೊಸದಾಗಿ ತಮ್ಮದೇ ಆದ ಬ್ಯುಸಿನೆಸ್ ಆರಂಭಿಸಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ಬುನ ತಂಗಿ ವರಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಪ್ರಜ್ಞಾ ಭಟ್ ಇದೀಗ ಸೀರಿಯಲ್ ಜೊತೆಗೆ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು, ವರಲಕ್ಷ್ಮಿ ಖ್ಯಾತಿಯ ಪ್ರಜ್ಞಾ ಭಟ್ ಹೊಸದಾಗಿ ಮೇಕಪ್ ಮತ್ತು ಹೇರ್ ಅಕಾಡೆಮಿಯನ್ನು ಆರಂಭಗೊಳಿಸಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ಈ ಕುರಿತಾಗಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೂಜೆಯ ಫೋಟೊಗಳನ್ನ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ದಿನ ನಮ್ಮ ನೂತನ ಪ್ರಜ್ಞಾ ಮೇಕಪ್ ಮತ್ತು ಹೇರ್ ಅಕಾಡೆಮಿ ಶುಭಾರಂಭಗೊಂಡಿದ್ದು , ಶುಭಹಾರೈಸಿದ ಎಲ್ಲಾ ನಮ್ಮ ಬಂಧು - ಮಿತ್ರರಿಗೂ ಧನ್ಯವಾದಗಳನ್ನು ಕೋರುತ್ತಾ ಇನ್ನು ಮುಂದೆಯೂ ನಿಮ್ಮ ಸಲಹೆ ಸಹಕಾರಗಳನ್ನು ಅಪೇಕ್ಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ
ಪ್ರಜ್ಞಾ ಭಟ್ ಅವರು ಸದ್ಯ ಶ್ರಾವಣಿ ಸುಬ್ರಹ್ಮಣ್ಯದಲ್ಲಿ (Shravani Subramanya) ವರಲಕ್ಷ್ಮೀ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸುಬ್ಬುನ ಮುದ್ದಿನ ತಂಗಿಯಾಗಿಯಾಗಿ, ಶ್ರಾವಣಿಯ ಮುದ್ದಿನ ನಾದಿನಿಯಾಗಿದ್ದಾರೆ. ಆದರೆ ಇದೀಗ ಮೇಕಪ್ ಅಕಾಡೆಮಿ ಆರಂಭಿಸಿದ ಮೇಲೆ ಸೀರಿಯಲ್ ನಲ್ಲಿ ನಟಿಸುತ್ತಾರೆಯೋ ಇಲ್ಲವೋ ತಿಳಿದಿಲ್ಲ.
ಪ್ರಜ್ಞಾ ಭಟ್ ಅವರು ಈ ಹಿಂದೆ ಹಲವು ಸೀರಿಯಲ್ ನಲ್ಲಿ ನಟಿಸಿದ್ದರು, 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿಯಲ್ಲಿ ಹೀರೋಯಿನ್ ತಂಗಿ ಪಾತ್ರದಲ್ಲಿ. ಅಲ್ಲದೇ ಸ್ಟಾರ್ ಸುವರ್ಣ ವಾಹಿನಿಯ ಪ್ರೇಮ ಲೋಕ , ಪಾಪ ಪಾಂಡು (Papa Pandu) ಧಾರಾವಾಹಿಯಲ್ಲೂ ನಟಿಸಿದ್ದರು, ಜೊತೆಗೆ ಒಲವೇ ಮಂದಾರ 2 ಸಿನಿಮಾದಲ್ಲೂ ನಟಿಸಿದ್ದರು.
ನಟಿಯಾಗೋದಕ್ಕೂ ಮುನ್ನ ಪ್ರಜ್ಞಾ ಭಟ್ ಮಾಡೆಲ್ ಆಗಿದ್ದರು. ಮಲ್ನಾಡ್ ಸುಂದರಿ ಅಂತಾನೆ ಫೇಮಸ್ ಆಗಿರುವ ಪ್ರಜ್ಞಾ ಭಟ್, 2015 ರಲ್ಲಿ ಮಿಸ್ ಚಿಕ್ಕಮಗಳೂರು ರನ್ನರ್ ಅಪ್ ಆಗಿದ್ದರು, ಅಷ್ಟೇ ಅಲ್ಲ 2016ರಲ್ಲಿ ಮಿಸ್ ಕ್ವೀನ್ ಕರ್ನಾಟಕ ಎನ್ನುವ ಕಾರ್ಯಕ್ರಮದ ವಿನ್ನರ್ ಕಿರೀಟವನ್ನು ಸಹ ಧರಿಸಿದ್ದರು.
ಪ್ರಜ್ಞಾ ಭಟ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇವರು ಪತಿ ನಾಗಶ್ರಿತ್ ಭಟ್. ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರ್ತಾರೆ, ಪ್ರಜ್ಞಾ. ಇದೀಗ ವರಮಹಾಲಕ್ಷ್ಮೀ ಪೂಜೆಯ ದಿನದ ಫೋಟೊಗಳನ್ನು ಸಹ ಹಂಚಿಕೊಂಡಿದ್ದು, ಗಂಡ ಹಾಗೂ ಮನೆಯವರು ಪ್ರಜ್ಞಾಗೆ ಸಾತ್ ನೀಡಿದ್ದಾರೆ.