ಸಿನಿಮಾದಲ್ಲಿ ಸೋತ ಬಳಿಕ... ಆಧ್ಯಾತ್ಮಿಕ ಶಿಕ್ಷಕಿಯಾಗಲು ಹೊರಟ್ರ ಸಾನ್ಯಾ ಅಯ್ಯರ್
ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ ಪುಟ್ಟ ಗೌರಿ ಸಾನ್ಯಾ ಅಯ್ಯರ್ ಇದೀಗ ಆಧ್ಯಾತ್ಮಿಕ ಶಿಕ್ಷಕಿಯಾಗಲು ಹೊರಟಿದ್ದಾರೆ. ನೀವೂ ಕೂಡ ಅವರ ವಿದ್ಯಾರ್ಥಿಯಾಗಬಹುದು.

ಪುಟ್ಟಗೌರಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ ಸಾನ್ಯಾ ಅಯ್ಯರ್, ಮತ್ತೆ ವೀಕ್ಷಕರಿಗೆ ಹತ್ತಿರವಾದುದು ಬಿಗ್ ಬಾಸ್ ಸೀಸನ್ 9 ರ ಮೂಲಕ. ಬಿಗ್ ಬಾಸ್ ಒಟಿಟಿ ಹಾಗೂ ಟಿವಿ ಬಿಗ್ ಬಾಸ್ ಎರಡೂ ಕಡೆ ಮಿಂಚಿದ್ದರು ಈ ಬೆಡಗಿ. ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯಾ ಜೋಡಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು.
ಬಳಿಕ ಹಿರಿತೆರೆಗೆ ಕಾಲಿಟ್ಟ ನಟಿ ಅಲ್ಲೂ ಕೂಡ ಗೌರಿ ಸಿನಿಮಾ ಮೂಲಕ ಪರಿಚಿತರಾದರು. ಇಂದ್ರಜಿತ್ ಲಂಕೇಶ್ ನಿರ್ದೇಶನದ, ಹಾಗೂ ಸಮರ್ಜಿತ್ ಲಂಕೇಶ್ ನಟಿಸಿರುವ ಸಿನಿಮಾ ಇದಾಗಿದ್ದು. ಆದರೆ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲೇ ಇಲ್ಲ ಇದಾದ ನಂತರ ಚಿತ್ರರಂಗದಿಂದ ಸಾನ್ಯಾ ದೂರವೇ ಉಳಿದಿದ್ದರು. ಆದರೆ ಹಲವಾರು ಈವೆಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಇನ್ನು ಸಾನ್ಯಾ ಅಯ್ಯರ್ ಮೊದಲಿನಿಂದಲೂ ಆಧ್ಯಾತ್ಮಿಕತೆಯ ಕುರಿತು ಹೆಚ್ಚಿನ ಒಲವು ತೋರಿಸುತ್ತಿದ್ದರು. ಇದೀಗ ಅದೇ ಹಾದಿಯಲ್ಲಿ ಪ್ರಯಣ ಮುಂದುವರೆಸಲು ತಯಾರಾಗಿದ್ದಾರೆ. ಹಾಗಿದ್ರೆ ಅವರು ಆರಂಭಿಸಿರುವ ಜರ್ನಿ ಏನು, ಇದರಿಂದ ಅವರು ಏನು ಸಾಧನೆ ಮಾಡಲಿದ್ದಾರೆ, ಅನ್ನೋದನ್ನು ತಿಳಿಯೋಣ.
ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಶೇರ್ ಮಾಡಿರುವ ಸಾನ್ಯಾ, ಅದರ ಜೊತೆ ಎಲ್ಲರಿಗೂ ನಮಸ್ಕಾರ. ಇದು ನನಗೆ ತುಂಬಾ ವೈಯಕ್ತಿಕವಾದ ವಿಷಯ, ನನ್ನ ಹೃದಯ ಮತ್ತು ಆತ್ಮದ ವಿಸ್ತರಣೆ. ಇದು ಒಂದು ಆಂತರಿಕ ಚಲನೆ ಮತ್ತು ನಾನು ಈ ಬೆಳಕು ಮತ್ತು ಕಲಿಕೆಯ ಪ್ರಯಾಣದಲ್ಲಿ ವೇಗವರ್ಧಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಪರ್ಕ ಮಾಡಲು ಹಿಂಜರಿಯಬೇಡಿ, ಇದು ಸಂಪೂರ್ಣ ಗೌಪ್ಯತೆಯನ್ನು ಹೊಂದಿರುವ ತೀರ್ಪು ರಹಿತ ವಲಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದೊಂದು ಉಪಶಮನ ಎನ್ನುವ ಹೀಲಿಂಗ್ ಮತ್ತು ಸ್ಟ್ರೆಂತ್ ಬಿಲ್ಡ್ ಮಾಡುವ ಕಾರ್ಯಕ್ರಮವಾಗಿದ್ದು, ಇದನ್ನು ಸಾನ್ಯಾ ಅಯ್ಯರ್ ನಡೆಸಿಕೊಡುತ್ತಿದ್ದಾರೆ. ಇದು ತನ್ನನ್ನು ತಾನು ತಿಳಿಯಲು ಹಾಗೂ ತಮ್ಮೊಳಗೆ ದೀಪವನ್ನು ಬೆಳಗಲು ಅನುಕೂಲ ಮಾಡಿಕೊಡುವಂತಹ ಒಂದು ಸೆಶನ್ ಆಗಿದೆ.
ಇದು ಆದ್ಯಾತ್ಮಿಕತೆಯ ಒಂದು ಭಾಗವಾಗಿದ್ದು, . ಒಂದರ ನಂತರ ಒಂದು ಹೇಳಿಕೊಡಲಿದ್ದಾರೆ. ಇದು ಒಂದು ಗಂಟೆಯ ಶೋ ಆಗಿದ್ದು, ಗೂಗಲ್ ಮೀಟ್ ಮೂಲಕ ಕ್ಲಾಸ್ ತೆದೆದುಕೊಳ್ಳಲಿದ್ದಾರೆ. ಹೆಚ್ಚಾಗಿ ದೇವಸ್ಥಾನಗಳ ದರ್ಶನ ಪಡೆಯುತ್ತಿದ್ದ ನಟಿ ಈಗ ಅದರ ಜೊತೆ ಹೊಸ ಹೆಜ್ಜೆಯನ್ನು ಇಟ್ಟಿರುವುದು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.