ರಾಮಾಚಾರಿ ಬೆಡಗಿ ಮೌನ ಅಂದಗಾರ್ತಿ... ತಂಗಿ ಮೌಲ್ಯ ಅಕ್ಕನಿಂತಲೂ ಚೆಂದ!
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೆಮನೆ, ತಮ್ಮ ಸಹೋದರಿ ಮೌಲ್ಯ ಜೊತೆ ಫೋಟೊಶೂಟ್ ಮಾಡಿಸಿದ್ದು, ಅಕ್ಕ ತಂಗಿಯರ ಫೋಟೊ ವೈರಲ್ ಆಗ್ತಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ (Ramachari Serial) ಚಾರು ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವ ನಟಿ ಮೌನ ಗುಡ್ಡೆಮನೆ. ಧಾರಾವಾಹಿಯ ಆರಂಭದಲ್ಲಿ ಅಹಂಕಾರಿ ಹೆಣ್ಣಾಗಿ ಕಾಣಿಸಿಕೊಂಡು, ಸದ್ಯ ಮನೆಮೆಚ್ಚಿದ ಸೊಸೆಯಾಗಿ ಜನಮನ ಗೆದ್ದಿದ್ದಾರೆ ಮೌನ.
ಚಾರು ಪಾತ್ರದಿಂದಾಗಿ ಮೌನ ಗುಡ್ಡೆಮನೆಗೆ (Mouna Guddemane) ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫ್ಯಾನ್ಸ್ ಪೇಜ್ ಗಳು ಸಹ ಹುಟ್ಟಿಕೊಂಡಿವೆ. ಅಷ್ಟೊಂದು ಕ್ರೇಜ್ ಇದೆ ನಟಿಗೆ. ಮೌನ ಸೋಶಿಯಲ್ ಮೀಡಿಯಾದಲ್ಲಿ ಏನೇ ಫೋಟೊ ಹಾಕಿದ್ರೂ ಅದು ಸದ್ದು ಮಾಡುತ್ತೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೌನ ಗುಡ್ಡೆಮನೆ, ಹೆಚ್ಚಾಗಿ ತಮ್ಮ ಸೀರೆಯುಟ್ಟ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನೂ ಕೆಲವು ಸಲ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ನಟಿ ತಮ್ಮ ಮುದ್ದು ತಂಗಿ ಜೊತೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಹೌದು ಮೌನ ಗುಡ್ಡೆಮನೆ ಮುದ್ದಿನ ತಂಗಿಯ ಹೆಸರು ಮೌಲ್ಯ ಗುಡ್ಡೆಮನೆ (Moulya Guddemane). ಇಬ್ಬರು ನೋಡೋದಕ್ಕೂ ಒಂದೇ ರೀತಿಯಾಗಿದ್ದಾರೆ. ಇದೀಗ ಇಬ್ಬರು ಸೀರೆಯುಟ್ಟಿರುವ ತುಂಬಾನೆ ಮುದ್ದಾದ ಫೋಟೊಗಳನ್ನು ಮೌನ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಒಂದೇ ಹೂದೋಟದ ವಿಭಿನ್ನ ಹೂವುಗಳು (Different flowers from the same garden.”) ಎನ್ನುವ ಕ್ಯಾಪ್ಶನ್ ಕೊಟ್ಟಿರುವ ಮೌನ, ಮರೂನ್ ಬಣ್ಣದ ಸೀರೆ, ಬ್ಲೌಸ್ ಜೊತೆಗೆ ಗಾಗಲ್ಸ್ ಹಾಕಿದ್ರೆ, ಮೌಲ್ಯ ಪಿಂಕ್ ಬಣ್ಣದ ಸೀರೆಯುಟ್ಟು ಅಕ್ಕನ ಜೊತೆ ಪೋಸ್ ಕೊಟ್ಟಿದ್ದಾರೆ.
ಅಕ್ಕ ತಂಗಿಯ ಈ ಮುದ್ದಾದ ಫೋಟೊಗಳನ್ನು ಚಾರು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸೂಪರ್ ಅಕ್ಕ ತಂಗಿ ಮುದ್ದಾ ಕಾಣಿಸ್ತಾ ಇದ್ದೀರಾ. ಮುದ್ದು ಗೊಂಬೆ ಚಾರು ಆಹಾ ನೋಡೋಕೆ ಒಂತರಾ ಚಂದ. ದಂತದ ಬೊಂಬೆ ನಡತೆಯಲ್ಲು ಸಿರಿವಂತಿಕೆಯಲ್ಲು ಸಂಸ್ಕೃತಿಗಳ ಸರಮಾಲೆ ಇದೆ ನಿನ್ನಲ್ಲಿ ನನ್ನ ಮುದ್ದಿನ ಸಹೋದರಿ ಈ ೨೧ ನೇ ಶತಮಾನದಲ್ಲಿ ನೀನೊಬ್ಬಳೆ ಕಣಮ್ಮ ನಾರಿಮಣಿ ನನ್ನ ಪಾಲಿಗೆ ಅಂತಾನೂ ಕಾಮೆಂಟ್ ಮಾಡಿದ್ದಾರೆ ಅಭಿಮಾನಿಯೊಬ್ಬರು.