- Home
- Entertainment
- TV Talk
- Kannada Serial TRP: ಸೀರಿಯಲ್‌ಗಳ ಮಧ್ಯೆ ಭರ್ಜರಿ ಜಟಾಪಟಿ; ಎಲ್ರನ್ನು ಹಿಂದಿಕ್ಕಿ NO 1 ಆದ ಸೀರಿಯಲ್ ಯಾವುದು?
Kannada Serial TRP: ಸೀರಿಯಲ್‌ಗಳ ಮಧ್ಯೆ ಭರ್ಜರಿ ಜಟಾಪಟಿ; ಎಲ್ರನ್ನು ಹಿಂದಿಕ್ಕಿ NO 1 ಆದ ಸೀರಿಯಲ್ ಯಾವುದು?
kannada Tv Serial This Week: ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್‌ಪಿ ಬದಲಾಗುವುದು. ಈ ವಾರ ಕೂಡ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಬಂತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಟಾಪ್ ಟೆನ್ ಸೀರಿಯಲ್‌ಗಳು ಯಾವುವು?

Top Serials
ಟಾಪ್ 10 ಧಾರಾವಾಹಿಗಳು ಯಾವುವು? ಯಾವ ಸೀರಿಯಲ್‌ಗೆ ಎಷ್ಟು TRP ಬಂತು?
ಅಮೃತಧಾರೆ ಧಾರಾವಾಹಿ
ಐದು ವರ್ಷಗಳ ಹಿಂದೆ ಭೂಮಿ ಮನೆ ಬಿಟ್ಟು ಹೋದಳು. ಆಗ ಗೌತಮ್ ದಿವಾನ್ ಮನೆ ಬಿಟ್ಟು ಹೋಗಿದ್ದಾನೆ. ಗೌತಮ್ ಈಗ ಅವಳ ಹುಡುಕಾಟದಲ್ಲಿದ್ದಾನೆ. ಇನ್ನು ಗೌತಮ್ ಹಾಗೂ ಅವನ ಮಗ ಆಕಾಶ್ ಭೇಟಿಯಾಗಿದೆ. ಈ ಸೀರಿಯಲ್‌ಗೆ 7.6 TRP ಸಿಕ್ಕಿದೆ.
ಬ್ರಹ್ಮಗಂಟು ಧಾರಾವಾಹಿ
ಈ ಧಾರಾವಾಹಿಗೆ 6.1 TVR ಸಿಕ್ಕಿದೆ. ದೀಪಾ ಹಾಗೂ ಚಿರಾಗ್ ನಡುವೆ ಆತ್ಮೀಯತೆ ಜಾಸ್ತಿ ಆಗ್ತಿದೆ. ಇದು ಸೌಂದರ್ಯಗೆ ಕಿರಿಕಿರಿ ತರಿಸಿದೆ. ಇನ್ನೊಂದು ಕಡೆ ದಿಶಾ ಎನ್ನುವ ಮಾಡೆಲ್ ತನ್ನ ಪ್ರಾಜೆಕ್ಟ್‌ಗೆ ಯಶಸ್ಸು ತಂದುಕೊಡ್ತಾಳೆ ಅಂತ ಚಿರಾಗ್ ಅಂದುಕೊಂಡಿದ್ದಾನೆ. ಈಗ ದೀಪಾ, ದಿಶಾ ಆಗಲು ರೆಡಿ ಆಗುತ್ತಿದ್ದಾಳೆ.
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ ಧಾರಾವಾಹಿಗೆ 6.1 TVR ಸಿಕ್ಕಿದೆ. ಈಗ ದುರ್ಗಾ ಹಾಗೂ ಶರತ್ ಮದುವೆಯಾಗಿದೆ. ಮಾಯಾ ಮಾತ್ರ ಕೆಂಡಕಾರುತ್ತಿದ್ದಾಳೆ.
ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿಗೆ 8.00 TRP ಸಿಕ್ಕಿದೆ. ರಾಣಿ ಹಾಗೂ ರಶ್ಮಿ ಜೀವನ ನರಕ ಆಗಿದೆ. ಇನ್ನೊಂದು ಕಡೆ ಪಾರ್ವತಿಗೆ ಶಾರದಮ್ಮನ ಸುಳಿವು ಸಿಕ್ಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿಗೆ 8.1 TRP ಸಿಕ್ಕಿದೆ. ಈ ಮೂಲಕ ಈ ಸೀರಿಯಲ್ ನಂ 2 ನೇ ಸ್ಥಾನದಲ್ಲಿದೆ. ಹರೀಶ್ ಹಾಗೂ ಸಂತೋಷ್ ವಿರುದ್ಧ ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಕಥೆ ಪ್ರಸಾರ ಆಗ್ತಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.9 TVR ಸಿಕ್ಕಿದೆ. ಆದೀಶ್ವರ್ ಕಾಮತ್ ಕಂಪೆನಿಯಲ್ಲಿ ಭಾಗ್ಯಗೆ ಕೆಲಸ ಸಿಗುವ ಕುರಿತು ಎಪಿಸೋಡ್ ಪ್ರಸಾರ ಆಗುತ್ತಿದೆ. ಹರೀಶ್ ರಾಜ್, ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಭಾರ್ಗವಿ ಎಲ್‌ಎಲ್‌ಬಿ
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ 4.2 TVR ಸಿಕ್ಕಿದೆ. ಭಾರ್ಗವಿ ಹಾಗೂ ಅರ್ಜುನ್ ಮದುವೆಯಾಗಿದೆ. ಅರ್ಜುನ್, ಜೆಪಿ ಮಗ ಅಂತ ಈಗ ತಿಳಿದು ಭಾರ್ಗವಿ ಬೇಸರ ಮಾಡಿಕೊಂಡಿದ್ದಾಳೆ. ಮುಂದೆ ಜೆಪಿ ಹಾಗೂ ಭಾರ್ಗವಿ ಕದನ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.
ಮುದ್ದುಸೊಸೆ ಧಾರಾವಾಹಿ
ತ್ರಿವಿಕ್ರಮ್, ಪ್ರತಿಮಾ ಠಾಕೂರ್ ನಟನೆಯ ಮುದ್ದುಸೊಸೆ ಧಾರಾವಾಹಿಗೆ 4.9 TVR ಸಿಕ್ಕಿದೆ. ಭದ್ರ ಹಾಗೂ ವಿದ್ಯಾ ಸೇರಿ ಸುಭಾಷ್ ಮದುವೆಯನ್ನು ಮಾಡಿಸಿದ್ದಾರೆ. ಈ ಮೂಲಕ ಅನ್ಯಾಯ ಆದವರಿಗೆ ನ್ಯಾಯ ಕೊಡಿಸಿದ್ದಾರೆ.
ನಂದಗೋಕುಲ ಧಾರಾವಾಹಿ
ನಂದಗೋಕುಲ ಧಾರಾವಾಹಿಗೆ 5.6 TVR ಸಿಕ್ಕಿದೆ. ದೊಡ್ಡ ತಾರಾಗಣವಿರುವ ಸೀರಿಯಲ್ ಇದು. ನಂದಕುಮಾರ್ ಮನೆ ಸುತ್ತ ಕಥೆ ಸಾಗುತ್ತಿದೆ. ನಂದಕುಮಾರ್ ಅವರು ಮಕ್ಕಳ ಕಥೆ ಇಲ್ಲಿ ಹೈಲೈಟ್ ಆಗಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ 5.9 TRP ಸಿಕ್ಕಿದೆ. ಸ್ನೇಹಾ ಹಾಗೂ ಕಂಠಿ, ಸುಮಾ ಸುತ್ತ ಕಥೆ ಸಾಗುತ್ತಿದೆ. ಉಮಾಶ್ರೀ, ಧನುಷ್, ವಿದ್ಯಾ ರಾಜ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆರೂರು ಜಗದೀಶ್ ನಿರ್ದೇಶನ, ನಿರ್ಮಾಣದ ಸೀರಿಯಲ್ ಇದಾಗಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ 4.6 TVR ಸಿಕ್ಕಿದೆ. ಶ್ರಾವಣಿ ಹಾಗೂ ಸುಬ್ರಹ್ಮಣ್ಯ ಮದುವೆ ನಡೆದಿದೆ. ಮನೆಯವರೇ ಈ ಮದುವೆ ಮಾಡಿಸಿದ್ದಾರೆ. ವಿಜಯಾಂಬಿಕಾ ಈ ಮದುವೆಯ ವಿರುದ್ಧವಾಗಿದ್ದಾಳೆ. ಆಸಿಯಾ ಫಿರ್‌ದೋಸ್, ಅಮೋಘ್ ನಟನೆಯ ಸೀರಿಯಲ್ ಇದು.
ಕರ್ಣ ಧಾರಾವಾಹಿ
ಕರ್ಣ ಧಾರಾವಾಹಿಗೆ 8.3 TRP ಸಿಕ್ಕಿದೆ. ಈ ಮೂಲಕ ಈ ಸೀರಿಯಲ್ ನಂ 1 ಸ್ಥಾನ ಪಡೆದಿದೆ. ಕರ್ಣ ಹಾಗೂ ನಿಧಿ, ನಿತ್ಯಾ ಮಾರಿಗುಡಿಗೆ ಹೋಗಿದ್ದಾರೆ. ಅಲ್ಲಿ ನಯನತಾರಾ ಕೂಡ ಇದ್ದಾಳೆ. ಈ ಕುರಿತು ಕಥೆ ಸಾಗುತ್ತಿದೆ. ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ ನಟನೆಯ ಸೀರಿಯಲ್ ಇದು.