- Home
- Entertainment
- TV Talk
- ಮನೆಯೊಳಗಡೆ ಲವ್ ಮಾಡಿದ್ದು ಸಾಕು, ಹೊರಗೆ ಹೋಗಿ ಮಾಡ್ಕೊಳ್ಳಿ; ಜೋಡಿಯನ್ನು ಹೊರಹಾಕಿದ Bigg Boss!
ಮನೆಯೊಳಗಡೆ ಲವ್ ಮಾಡಿದ್ದು ಸಾಕು, ಹೊರಗೆ ಹೋಗಿ ಮಾಡ್ಕೊಳ್ಳಿ; ಜೋಡಿಯನ್ನು ಹೊರಹಾಕಿದ Bigg Boss!
Bigg Boss Show Elimination: ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಲವ್ ಮಾಡಲು ಆರಂಭಿಸಿದ್ದ ಜೋಡಿಯೊಂದು ಏಕಾ ಏಕಿ ಹೊರಬಿದ್ದಿದೆ. ಇದು ಎಲ್ಲರಿಗೂ ಶಾಕ್ ನೀಡಿದೆ. ಸಿಕ್ಕಾಪಟ್ಟೆ ಮಾತನಾಡುತ್ತ, ಪುರುಷ ಸ್ಪರ್ಧಿ ತೊಡೆ ಮೇಲೆ ಮಹಿಳಾ ಸ್ಪರ್ಧಿ ಮಲಗಿರೋದು ವೀಕ್ಷಕರಿಗೆ ಸಿಟ್ಟು ತರಿಸಿತ್ತು.

ಡಬಲ್ ಎಲಿಮಿನೇಷನ್
ಬಿಗ್ ಬಾಸ್ 19 ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಸಲ್ಮಾನ್ ಖಾನ್ ಕೂಡ ಡಬಲ್ ಎಲಿಮಿನೇಶನ್ ಇರಲಿದೆ ಎಂದು ಹೇಳಿದ್ದರು. ಈ ವಾರ ಪ್ರಣೀತ್ ಮೋರ್, ನೆಹಾಲ್ ಚೂಡಾಸಮ, ಬಸೀರ್ ಅಲಿ, ಗೌರವ್ ಖನ್ನಾ ಅವರು ನಾಮಿನೇಟ್ ಆಗಿದ್ದರು. ಇವರಲ್ಲಿ ಇಬ್ಬರು ಔಟ್ ಆಗಿದ್ದಾರೆ ಎನ್ನಲಾಗಿದೆ.
ಸೀಕ್ರೇಟ್ ರೂಮ್‌ಗೆ ಹೋಗ್ತಾರೆ ?
ಸ್ಪರ್ಧಿಗಳು ಸೀಕ್ರೇಟ್ ರೂಮ್‌ಗೆ ಹೋಗ್ತಾರೆ ಎನ್ನಲಾಗಿತ್ತು. ಆದರೆ ಈ ಬಾರಿ ಯಾವ ರೂಮ್ ಇಲ್ಲವಂತೆ, ಪಕ್ಕಾ ಮನೆಯಿಂದ ಹೊರಹೋಗೋದು ಪಕ್ಕಾ. ಶುಕ್ರವಾರವೇ ವೀಕೆಂಡ್ ಕಾ ವಾರ್ ಎಲಿಮಿನೇಶನ್ ಆಗಿದೆ, ಸಲ್ಮಾನ್ ಖಾನ್ ಅವರು ಡಬಲ್ ಎಲಿಮಿನೇಷನ್ ಮಾಡಿದ್ದು, ಬಸೀರ್ ಅಲಿ, ನೆಹಾಲ್ ಚೂಡಾಸಮ ಅವರನ್ನು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊನೆ ಕ್ಷಣದಲ್ಲಿ ಬದಲಾವಣೆ
ಸೀಕ್ರೇಟ್ ರೂಮ್‌ಗೆ ಹೋಗಬೇಕು ಎಂದು ಪ್ಲ್ಯಾನ್ ಆಗಿತ್ತು, ಆಮೇಲೆ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿಕೊಂಡು ಹೊರಹಾಕಿದ್ದಾರಂತೆ. ನೆಹಾಲ್ ಅವರನ್ನು ಈ ಹಿಂದೆಯೇ ಎಲಿಮಿನೇಶನ್ ಮಾಡಿದ್ದೀವಿ ಎಂದು ಹೇಳಿ ಸೀಕ್ರೇಟ್ ರೂಮ್‌ಗೆ ಕಳಿಸಲಾಗಿತ್ತು. ಆಮೇಲೆ ಮತ್ತೆ ಅವರು ಮನೆಯೊಳಗಡೆ ಬಂದಿದ್ದರು.
ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು
ಬಸೀರ್ ಅಲಿಗೆ ಒಂದಿಷ್ಟು ಅಭಿಮಾನಿಗಳಿದ್ದು, ಅವರು ಹೊರಗಡೆ ಬಂದಿರೋದು ವೀಕ್ಷಕರಿಗೆ ಬೇಸರ ತಂದಿದೆ. "ಬಸೀರ್ ಅವರು ಅಮಾಲ್ ಮಲಿಕ್ ಹಾಗೂ ನೆಹಾಲ್ ಅವರಿಂದ ಹಾಳಾದರು. ಆರಂಭದಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು” ಎಂದಿದ್ದಾರೆ.
ಬಸೀರ್ ತಾಯಿ ಹೇಳಿದ್ದೇನು?
ಬಸೀರ್ ಮತ್ತು ನೆಹಾಲ್ ಆತ್ಮೀಯತೆ ಬಗ್ಗೆ ಮಾತನಾಡಿದ್ದ ಬಸೀರ್ ಅಲಿ ಅವರು, ಅವರಿಬ್ಬರು ಜಿಮ್ ಸ್ನೇಹಿತರು. ಬಿಗ್ ಬಾಸ್ ಮನೆಯ ಹೊರಗೆ ಕೂಡ ಅವರು ಕೆಲವು ಬಾರಿ ಭೇಟಿಯಾಗಿದ್ದರು. ಅವರಿಬ್ಬರು ಲವ್ ಮಾಡ್ತಿಲ್ಲ, ಬಿಗ್ ಬಾಸ್ ಮನೆಯಲ್ಲಿ ಕಾಣ್ತಿರೋದು ಆಟದ ಭಾಗ” ಎಂದು ಹೇಳಿದ್ದಾರೆ.