Jodi Hakki ಧಾರಾವಾಹಿಯಿಂದ ಅಕ್ಷರಾ ಔಟ್… ನಾಯಕಿಯಾಗಿ ಎಂಟ್ರಿ ಕೊಟ್ಟ ಪಾರು ಸೀರಿಯಲ್ ನಟಿ
ಜೀ ಪವರ್ ನಲ್ಲಿ ಇತ್ತೀಚೆಗೆ ಶುರುವಾದ ಜೋಡಿ ಹಕ್ಕಿ ಧಾರಾವಾಹಿಯಿಂದ ನಾಯಕಿ ಅಕ್ಷರಾ ಹೊರ ಬಂದಿದ್ದಾರೆ. ಈ ಪಾತ್ರದಲ್ಲಿ ಇನ್ನು ಮುಂದೆ ಮಾನ್ಸಿ ಜೋಶಿ ನಟಿಸಲಿದ್ದಾರೆ. ಈಗಾಗಲೇ ಮಾನ್ಸಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೋಡಿ ಹಕ್ಕಿ ಧಾರಾವಾಹಿ
ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅವುಗಳಲ್ಲಿ ಒಂದಾದ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ನಟಿ ಅಕ್ಷರಾ ಅವರು ಅಕ್ಷರಾ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಅಕ್ಷರಾ
ಅಕ್ಷರಾ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಆ ಧಾರಾವಾಹಿಯ ನಾಯಕಿ ಸಹನಾ ಅಂತಾನೆ ಹೇಳಬಹುದು. ಜೀ ಪವರ್ ಆರಂಭವಾದ ಮೇಲೆ ಹೊಸ ಧಾರಾವಾಹಿ ಜೋಡಿ ಹಕ್ಕಿಗೂ ಅಕ್ಷರಾ ನಾಯಕಿಯಾಗಿದ್ದರು.
ಟೀಚರ್ ಆಗಿ ಅಕ್ಷರಾ
ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಅಕ್ಷರಾ ಟೀಚರ್ ಅಕ್ಷರಾ ಪಾತ್ರಕ್ಕೆ ಜೀವ ತುಂಬಿದ್ದರು. ಈ ಹಿಂದಿನ ಜೋಡಿ ಹಕ್ಕಿ ಧಾರಾವಾಹಿ ರೀತಿನೇ ಕಥೆಯನ್ನು ಹೊಂದಿರುವ ಈ ಹೊಸ ಧಾರಾವಾಹಿಯಲ್ಲಿ, ಅಕ್ಷರಾ ಪಾತ್ರವನ್ನು ಜನ ಇಷ್ಟಪಟ್ಟಿದ್ದರು. ಇದೀಗ ದಿಢೀರ್ ಆಗಿ ಪಾತ್ರದಿಂದ ಹೊರಬಂದಿದ್ದಾರೆ.
ಅಕ್ಷರಾ ಧಾರಾವಾಹಿಯಿಂದ ಹೊರ ಬಂದಿದ್ದೇಕೆ?
ಅಕ್ಷರಾ ಹೀಗೆ ದಿಢೀರ್ ಆಗಿ ಜೋಡಿ ಹಕ್ಕಿ ಧಾರಾವಾಹಿಯಿಂದ ಹೊರ ಬಂದಿದ್ದು, ಯಾಕೆ ಎಂದು ತಿಳಿದಿಲ್ಲ. ಅವರು ಕೂಡ ಕಾರಣ ನೀಡಿಲ್ಲ. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವರೇ ಎನ್ನುವ ಪ್ರಶ್ನೆ ಮೂಡಿದೆ.
ಅಕ್ಷರಾ ಪಾತ್ರ ಮಾನ್ಸಿ ಜೋಶಿ ಎಂಟ್ರಿ
ಇದೀಗ ಜೋಡಿ ಹಕ್ಕಿ ಧಾರಾವಾಹಿಯ ಅಕ್ಷರಾ ಪಾತ್ರಕ್ಕೆ ಮಾನ್ಸಿ ಜೋಶಿಯವರು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮಾನ್ಸಿ ಜೋಶಿ ಸೀರಿಯಲ್ ನಲ್ಲಿ ನಟಿಸಿದ್ದು, ಇವರು ಇರುವ ಪ್ರೊಮೋ ಕೂಡ ರಿಲೀಸ್ ಆಗಿದೆ.
ಪಾರು ಧಾರಾವಾಹಿಯ ಅನುಷ್ಕಾ
ಮಾನ್ಸಿ ಜೋಶಿ ಕನ್ನಡದಲ್ಲಿ ಹಲವಾರು ಧಾರಾವಾಹಿಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಇವರು ನಟಿಸಿದ ಪಾರು ಧಾರಾವಾಹಿಯ ಅನುಷ್ಕಾ ಎನ್ನುವ ನೆಗೆಟಿವ್ ಪಾತ್ರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಾನ್ಸಿ ಜೋಶಿಯನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಮಲಯಾಳಂ ಧಾರಾವಾಹಿಯಲ್ಲೂ ನಟಿಸಿದ್ದ ಮಾನ್ಸಿ
ಇನ್ನು ಮಾನ್ಸಿ ಜೋಶಿಯವರು ಮಲಯಾಲಂ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಧಾರಾವಾಹಿ ಸಿಕ್ಕಾಪಟ್ಟೆ ಯಶಸ್ಸು ಪಡೆದುಕೊಂಡಿತ್ತು. ಕೆಲ ತಿಂಗಳ ಹಿಂದೆ ಧಾರಾವಾಹಿ ಕೊನೆಯಾಗಿತ್ತು. ಇದೀಗ ಮತ್ತೆ ಹೊಸ ಅವಕಾಶ ಸಿಕ್ಕಿದೆ.