- Home
- Entertainment
- TV Talk
- ಬರೋಬ್ಬರಿ 6 ವರ್ಷಗಳ ಬಳಿಕ ಜೊತೆಯಾದ ಅಗ್ನಿ ಸಾಕ್ಷಿ ತಂಡ… ಚಾಕಲೇಟ್ ಹೀರೊ ವಿಜಯ್ ಸೂರ್ಯ ಮಿಸ್ಸಿಂಗ್
ಬರೋಬ್ಬರಿ 6 ವರ್ಷಗಳ ಬಳಿಕ ಜೊತೆಯಾದ ಅಗ್ನಿ ಸಾಕ್ಷಿ ತಂಡ… ಚಾಕಲೇಟ್ ಹೀರೊ ವಿಜಯ್ ಸೂರ್ಯ ಮಿಸ್ಸಿಂಗ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ತಂಡ ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಆದರೆ ವಿಜಯ್ ಸೂರ್ಯ ಮಾತ್ರ ರೀಯೂನಿಯನ್ ನಲ್ಲಿ ಮಿಸ್ ಆಗಿದ್ದಾರೆ.

ಅಗ್ನಿ ಸಾಕ್ಷಿ ಧಾರಾವಾಹಿ (Agnisakshi serial) ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಬರೋಬ್ಬರಿ ಏಳು ವರ್ಷಗಳ ಕಾಲ ತೆರೆ ಕಂಡ ಧಾರಾವಾಹಿ ಕನ್ನಡಿಗರ ಫೇವರಿಟ್ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಸೀರಿಯಲ್ ನಟ-ನಟಿಯರು ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.
ಇದೀಗ ಸೀರಿಯಲ್ ಮುಗಿದು ಬರೋಬ್ಬರಿ ಆರು ವರ್ಷಗಳ ಬಳಿಕ ಸೀರಿಯಲ್ ತಾರೆಯರು ಮತ್ತೆ ಜೊತೆ ಸೇರಿ ರೀಯೂನಿಯನ್ ಮಾಡಿದ್ದು, ತಾವು ಎಂಜಾಯ್ ಮಾಡಿದ ಕ್ಷಣಗಳನ್ನು ಸೆರೆಹಿಡಿದು,ನಟಿ ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿಯಾಗಿ ನಟಿಸಿರುವ ವೈಷ್ಣವಿ ಗೌಡ (Vaishnavi Gowda), ಮಾಯಾ ಪಾತ್ರಧಾರಿ ಇಶಿತಾ ವರ್ಷ, ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ, ಅಂಜಲಿ ಪಾತ್ರಧಾರಿ ಸುಕೃತಾ ನಾಗ್, ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ, ಗೌತಮ್ ಪಾತ್ರಧಾರಿ ಶಶಾಂಕ್, ರಾಧಿಕಾ ಪಾತ್ರಧಾರಿ ಅನುಷಾ ರಾವ್ ಎಲ್ಲರೂ ಜೊತೆಯಾಗಿ ಮತ್ತೆ ಸೇರಿದ್ದರು.
ರೆಸಾರ್ಟ್ ಒಂದರಲ್ಲಿ ಈ ಎಲ್ಲಾ ತಾರೆಯರು ಸೇರಿ ಮತ್ತೆ ಮೋಜು ಮಸ್ತಿ ಮಾಡಿ ಸಂಭ್ರಮಿಸಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ, ಅಗ್ನಿ ಸಾಕ್ಷಿಅಭಿಮಾನಿಗಳು ಫೋಟೊ ನೋಡಿ ಸಂಭ್ರಮಿಸಿದಾರೆ. ಎಷ್ಟೋ ವರ್ಷಗಳ ಬಳಿಕ ಮತ್ತೆ ಎಲ್ಲರನ್ನೂ ಜೊತೆಯಾಗಿ ನೋಡಿ ಖುಷಿಪಟ್ಟಿದ್ದಾರೆ.
ಆದರೆ ಈ ಫೋಟೊದಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಚಾಕಲೇಟ್ ಬಾಯ್ ವಿಜಯ್ ಸೂರ್ಯ (Vijay Surya) ಅವರು ಮಿಸ್ಸಿಂಗ್ . ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಯಾಕೆ ನಮ್ ಸಿದ್ಧಾರ್ಥ್ ಕಾಣುತ್ತಿಲ್ಲ, ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಡಿಂಪಲ್ ಕಪಲ್ ಗಳಾದ ಸಿಧ್ದಾರ್ಥ್ ಮತ್ತು ಸನ್ನಿಧಿ ವೀಕ್ಷಕರ ಮೋಸ್ಟ್ ಫೇವರಿಟ್ ಕಪಲ್ ಗಳಾಗಿದ್ದರು. ಇವತ್ತಿಗೂ ಕೂಡ ಈ ಜೋಡಿಯನ್ನು ಜನ ಇಷ್ಟಪಡುತ್ತಾರೆ. ಸೀರಿಯಲ್ ಮುಗಿದು ವರ್ಷಗಳು ಆರು ಕಳೆದರೂ ಈಗಲೂ ಜನರು ಇಷ್ಟಪಡುತ್ತಿರುವ ತಾರೆಯರು ಇವರಾಗಿದ್ದಾರೆ.
ಸದ್ಯ ಈ ನಟ-ನಟಿಯರೆಲ್ಲಾ ಬೇರೆ ಬೇರೆ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಷ್ಣವಿ ಗೌಡ ಸೀತಾರಾಮ ಸೀರಿಯಲ್ ಬಳಿಕ ಮದುವೆಯಾಗಿದ್ದಾರೆ, ಅನುಷಾ ರಾವ್ ಕರಿಮಣಿ, ಸುಕೃತಾ ಭಾಗ್ಯಲಕ್ಷ್ಮಿ, ರಾಜೇಶ್ ಅವರು ಭಾಗ್ಯಲಕ್ಷ್ಮಿ ಮತ್ತು ಶಾರದೆ, ಶಶಾಂಕ್ ಅವರು ಲಕ್ಷ್ಮಿ ನಿವಾಸ, ಇಶಿತಾ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ.