- Home
- Entertainment
- TV Talk
- ಬಿಗ್ ಬಾಸ್ ಸ್ಪರ್ಧಿಯ ದಿಢೀರ್ ಸಾವು; ಪತ್ನಿಯ ತೊಳೆಯದ ಬಟ್ಟೆ, ಟೂತ್‌ಬ್ರಶ್ ಬಳಸುತ್ತಿರೋ ಪತಿ! ಎಂಥ ಪ್ರೇಮ!
ಬಿಗ್ ಬಾಸ್ ಸ್ಪರ್ಧಿಯ ದಿಢೀರ್ ಸಾವು; ಪತ್ನಿಯ ತೊಳೆಯದ ಬಟ್ಟೆ, ಟೂತ್‌ಬ್ರಶ್ ಬಳಸುತ್ತಿರೋ ಪತಿ! ಎಂಥ ಪ್ರೇಮ!
‘ಕಾಟಾ ಲಗಾ’ ಹುಡುಗಿ ಎಂದೇ ಫೇಮಸ್ ಆಗಿರೋ ನಟಿ ಶೆಫಾಲಿ ಜರಿವಾಲಾ ಅವರು ಹೃದಯಾಘಾತದಿಂದ ನಿಧನರಾಗಿ ತಿಂಗಳಾಗುತ್ತ ಬಂತು. ಇವರ ಸಾವು ಇಡೀ ಭಾರತೀಯ ಚಿತ್ರರಂಗ ಸೇರಿದಂತೆ ಸಾಮಾನ್ಯ ಜನರಿಗೆ ಶಾಕ್ ನೀಡಿತ್ತು. ಇದಾಗಿ ಕೆಲವು ತಿಂಗಳುಗಳಾದರೂ, ಅವರ ಪತಿ, ನಟ ಪರಾಗ್ ತ್ಯಾಗಿ ಕೂಡ ದುಃಖದಿಂದ ಹೊರಬಂದಿಲ್ಲ.

ಟ್ಯಾಟೂ ಹಾಕಿಸಿಕೊಂಡಿರೋ ಪರಾಗ್
ತಾನು ಇನ್ನೂ ಹೆಂಡ್ತಿ ಸಾವಿನ ದುಃಖದಿಂದ ಹೊರಬಂದಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಎದೆಯ ಮೇಲೆ ಹೆಂಡ್ತಿ ಮುಖವನ್ನು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಅದಕ್ಕೆ ಶೆಫಾಲಿ ತಂದೆ ಮುತ್ತಿಟ್ಟ ಫೋಟೋ ಕೂಡ ವೈರಲ್ ಆಗಿತ್ತು. ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಶೆಫಾಲಿ ಬಟ್ಟೆ ತೊಳೆದಿಲ್ಲ
ಶೆಫಾಲಿಯವರ ತೊಳೆಯದ ಟೀ-ಶರ್ಟ್‌ಗಳು, ಶಾರ್ಟ್ಸ್‌ಗಳನ್ನು ತಾನು ಇನ್ನೂ ಕೂಡ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. “ನಾನು ಶೆಫಾಲಿಯ ಟೀ ಶರ್ಟ್‌ನ್ನು ಇಟ್ಟುಕೊಂಡಿದ್ದೇನೆ. ಶೆಫಾಲಿಯ ತೊಳೆಯದ ಬಟ್ಟೆಗಳಿದ್ದವು, ಅದನ್ನು ಬುಟ್ಟಿಯಲ್ಲಿ ಹಾಕಿಡಲಾಗಿತ್ತು. ನಾನು ಅದನ್ನು ನನ್ನ ಬಳಿ ಇಟ್ಟುಕೊಂಡಿದೀನಿ, ಅದನ್ನು ತೊಳೆಯೋದಿಲ್ಲ” ಎಂದು ಹೇಳಿದ್ದಾರೆ.
ಬಟ್ಟೆ ಹಾಕ್ಕೊಳೋಕೆ ಬರೋದಿಲ್ಲ
“ನಾನು ಆ ಬಟ್ಟೆಗಳನ್ನು ಹಿಡ್ಕೊಂಡು ನಿತ್ಯವೂ ಮಲಗುತ್ತೇನೆ. ಆಗ ಅವಳು ಮತ್ತೆ ನನ್ನ ಜೊತೆ ಇರುತ್ತಾಳೆ ಅಂತ ಅನಿಸುತ್ತದೆ. ಶೆಫಾಲಿ ಬಟ್ಟೆ ಚಿಕ್ಕದು, ಹೀಗಾಗಿ ಅದನ್ನು ಹಾಕ್ಕೊಳೋಕೆ ಬರೋದಿಲ್ಲ. ಹೀಗಾಗಿ ಹಿಡ್ಕೊಂಡು ಮಲಗ್ತೀನಿ” ಎಂದು ಅವರು ಹೇಳಿದ್ದಾರೆ. ನಾನು ಶೆಫಾಲಿಯ ದಿಂಬು, ಕಂಬಳಿಯನ್ನು ಬಳಸುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ.
ಸಾಯೋ ದಿನ ಏನಾಯ್ತು?
ಶೆಫಾಲಿ ಸಾಯೋ ದಿನ ನನಗೆ ಏನೋ ಆಗತ್ತೆ ಅಂತ ಅನಿಸ್ತಿತ್ತು. ನಮ್ಮ ನಾಯಿ ಸಿಂಬಾವನ್ನು ಹೊರಗಡೆ ಕರೆದುಕೊಂಡು ಹೋಗು ಅಂತ ಹೇಳಿದ್ದಳು. ಅಂದು ನಮ್ಮ ಮನೆಕೆಲಸ ಮಾಡುವವನ ಮಗನಿಗೆ ಸುಸ್ತಾಗಿತ್ತು. ಅವನು ಮನೆಗೆ ಬಂದಾಗ ಶೆಫಾಲಿಗೆ ಉಸಿರಾಡಲು ಆಗುತ್ತಿರಲಿಲ್ಲ. ಅವನು ಎಲೆಕ್ರ್ಟೋಲೈಟ್ ಕುಡಿಸಿದ್ದಾನೆ, ಸಿಪಿಆರ್ ಮಾಡಿದ್ದಾನೆ, ಆದರೆ ಅವಳು ಬದುಕೇ ಇಲ್ಲ, ಜೀವ ಹೋಗಿತ್ತು ಎಂದು ಅವರು ಹೇಳಿದ್ದಾರೆ.
42 ವರ್ಷದಲ್ಲಿ ನಿಧನ
ಶೆಫಾಲಿ ಎಂದಿಗೂ ಎಂಟಿ ಏಜಿಂಗ್ ಮೆಡಿಸಿನ್ ತಗೊಂಡಿಲ್ಲ. ಅವಳು ಕೇವಲ ಸಾಮಾನ್ಯ ಮಲ್ಟಿವಿಟಮಿನ್ ಮಾತ್ರೆಗಳನ್ನು ತಗೊಳ್ಳುತ್ತಿದ್ದಳು, ಕೆಲವೊಮ್ಮೆ ಐವಿ ಡ್ರಿಪ್ ಮೂಲಕ ವಿಟಮಿನ್ ಸೇವನೆ ಮಾಡುತ್ತಿದ್ದಳು, ಇದರಿಂದ ಯಾವುದೇ ಸಮಸ್ಯೆ ಆಗೋದಿಲ್ಲ. 27 ಜೂನ್ 2025 ರಂದು ಶೆಫಾಲಿ ಅವರು 42 ವರ್ಷದಲ್ಲಿ ಹೃದಯಾಘಾತದಿಂದ ನಿಧನರಾದರು.