‘ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಿಂದ ಹೊರ ಬಂದ ನಟಿ ಮಹತಿ… ಭಾವುಕ ವಿದಾಯ ಹೇಳಿದ ನಟಿ
‘ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ರೇಣುಕೆ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಮಹತಿ ವೈಷ್ಣವಿ ಇದೀಗ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈ ಕುರಿತು ಭಾವುಕ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ನಟಿ ಸೀರಿಯಲ್ ಬಿಡಲು ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಶ್ರೀ ರೇಣುಕಾ ಯಲ್ಲಮ್ಮ
ಸ್ಟಾರ್ ಸುವರ್ಣ ವಾಹಿನಿಯಲ್ಲಿ (Shree Renuka Yellamma) ಪ್ರಸಾರವಾಗುತ್ತಿರುವ ಜನಪ್ರಿಯ ಐತಿಹಾಸಿಕ ಧಾರಾವಾಹಿಯಾಗಿರುವ ‘ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ರೇಣುಕಾ ಪಾತ್ರಕ್ಕೆ ತಮ್ಮ ಅದ್ಭುತ ಅಭಿನಯದಿಂದ ಜೀವ ತುಂಬಿದ ನಟಿ ಮಹತಿ ವೈಷ್ಣವಿ.
ಮಹತಿ ವೈಷ್ಣವಿ
ಗಟ್ಟಿಮೇಳ ಧಾರಾವಾಹಿಯಲ್ಲಿ ಪುಟಾಣಿ ತಂಗಿ ಪಾತ್ರದಲ್ಲಿ ನಟಿಸಿದ್ದ ನಟಿ ಮಹತಿ ವೈಷ್ಣವಿ. ಆ ಧಾರಾವಾಹಿ ಮುಗಿದ ಬಳಿಕ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ನಾಯಕಿ ರೇಣುಕೆಯಾಗಿ ನಟಿಸಿದ್ದರು. ಇದೀಗ ಧಾರಾವಾಹಿಯಿಂದ ಅವರು ಹೊರ ಬಂದಿದ್ದಾರೆ.
ಧಾರಾವಾಹಿಯಿಂದ ಹೊರ ಬಂದ ನಟಿ
ಇದೀಗ ಮಹತಿ (Mahati Vaishnavi)ಆ ಧಾರಾವಾಹಿಯಿಂದ ಹೊರ ಬಂದಿದ್ದು, ಕಳೆದ ಒಂದೂವರೆ ವರ್ಷಗಳಿಂದ ರೇಣುಕಾ ಪಾತ್ರಕ್ಕೆ ಜೀವ ತುಂಬಿರುವ ನಟಿ, ಧಾರಾವಾಹಿಯಿಂದ ಈಗ ಹೊರ ಬಂದಿದ್ದು, ಈ ಕುರಿತು ನಟಿ ಭಾವುಕ ಪಾತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಹೇಳಿದ್ದೇನು?
ಕಳೆದ ಒಂದೂವರೆ ವರ್ಷಗಳಿಂದ, ರೇಣುಕೆ ಕೇವಲ ಪಾತ್ರವಾಗಿರಲಿಲ್ಲ, ಅವಳು ನನ್ನ ಆತ್ಮದ ಭಾಗವಾಗಿದ್ದಳು. ದೇವತೆಯ ಪಾತ್ರ ವಹಿಸುವುದು ಮತ್ತು ಈ ಪ್ರಯಾಣವನ್ನು ಮುನ್ನಡೆಸುವುದು ನಾನು ಊಹಿಸಿದ್ದಕ್ಕಿಂತ ಮೀರಿದೆ. ವಿದಾಯ ಹೇಳುವುದು ನನ್ನ ಸ್ವಂತ ಕುಟುಂಬವನ್ನು ಬಿಟ್ಟು ಹೋದಂತೆ ಭಾಸವಾಗುತ್ತದೆ. ಕೊನೆಯ ದಿನ ತುಂಬಾ ಭಾವನಾತ್ಮಕವಾಗಿತ್ತು, ನನಗೆ ನನ್ನನ್ನು ನಾನೇ ನಿಭಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಧನ್ಯವಾದ ತಿಳಿಸಿದ ನಟಿ
ರೇಣುಕೆ ಪಾತ್ರಕ್ಕಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಂದಿ ಮೂವೀಸ್ ಅವರಿಗೆ, ನನ್ನ ನಿರ್ಮಾಪಕರಾದ ಅರವಿಂದ್ ಸರ್ ಮತ್ತು ಶ್ರೀನಿವಾಸ್ ಸರ್ ಮತ್ತು ನಮ್ಮ ನಿರ್ದೇಶನ ತಂಡ - ನಾಗಣ್ಣ, ವಿಷ್ಣು ಸರ್, ಶ್ರೇಯಸ್ ಅಣ್ಣ ಮತ್ತು ರಾಜು ಅಣ್ಣಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಮ್ಯಾನೇಜರ್ ಶ್ರೀನಿವಾಸ್ ಸರ್ ಮತ್ತು ಹೇಮಂತ್ ಸರ್, ಪ್ರತಿದಿನ ನನ್ನನ್ನು ಸುಂದರವಾಗಿ ಕಾಣುವಂತೆ ಮಾಡಿದ ನನ್ನ ಮೇಕಪ್, ಕೂದಲು ಮತ್ತು ವೇಷಭೂಷಣ ತಂಡ, ನಮ್ಮನ್ನು ಕುಟುಂಬದಂತೆ ನೋಡಿಕೊಂಡ ನಿರ್ಮಾಣ ತಂಡ, ಸೆಟ್ ವಿಭಾಗ, ಕ್ಯಾಮೆರಾಮೆನ್ ಗುರು ಸರ್ ಮತ್ತು ರಮೇಶ್ ಅಣ್ಣ, ನನ್ನ ಸಹನಟರು ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು. ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು ಎಂದಿದ್ದಾರೆ.
ನಿಮ್ಮ ಆಶೀರ್ವಾದ ಸದಾ ನನ್ನ ಜೊತೆ
ಈ ಮರೆಯಲಾಗದ ಅನುಭವವನ್ನು ನನಗೆ ನೀಡಿದ್ದಕ್ಕಾಗಿ ಸ್ಟಾರ್ ಸುವರ್ಣ ವಾಹಿನಿಗೆ ವಿಶೇಷ ಧನ್ಯವಾದಗಳು. ನಾನು ಎಲ್ಲಿಗೆ ಹೋದರೂ ರೇಣುಕೆ ಯಾವಾಗಲೂ ನನ್ನೊಳಗೆ ವಾಸಿಸುತ್ತಾಳೆ. ಈವಾಗ ಅಲ್ಲಿಂದ ಹೊರ ಬರುತ್ತಿದ್ದೇನೆ, ಆದರೆ ಅವಳ ಪ್ರೀತಿ ಮತ್ತು ಆಶೀರ್ವಾದಗಳನ್ನು ಶಾಶ್ವತವಾಗಿ ನನ್ನ ಜೊತೆ ಹೊತ್ತುಕೊಂಡು ಹೋಗುತ್ತಿದ್ದೇನೆ.. ಎಂದು ನಟಿ ಮಹತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಸೀರಿಯಲ್ ನಿಂದ ಹೊರ ಬಂದಿದ್ದು ಯಾಕೆ?
ನಟಿ ಮಹತಿ ಧಾರಾವಾಹಿಯಿಂದ ಹೊರ ಬಂದಿದ್ದು ಯಾಕೆ ಎಂದು ಸ್ಪಷ್ಟನೆ ಇಲ್ಲ. ಆದರೆ ಮಾಹಿತಿ ಪ್ರಕಾರ ಧಾರಾವಾಹಿಯಲ್ಲಿ ಒಂದಷ್ಟು ವರ್ಷಗಳ ಮುಂದಿನ ಕಥೆಯನ್ನು ತಿಳಿಸುತ್ತಿದ್ದು, ಹಾಗಾಗಿ ಪಾತ್ರಧಾರಿಯ ಬದಲಾವಣೆ ಅಗತ್ಯದಿಂದಾಗಿ ಧಾರಾವಾಹಿಯಿಂದ ಹೊರ ಬರುತ್ತಿರುವುದಾಗಿ ತಿಳಿದು ಬಂದಿದೆ.