- Home
- Entertainment
- TV Talk
- ಟಿಆರ್‌ಪಿಯಲ್ಲಿ No 1 ಇದ್ದ ಗಟ್ಟಿಮೇಳ ಧಾರಾವಾಹಿ ಬಿಡಲು ಕಾರಣ ಏನು? ಈಗ ಮೌನ ಮುರಿದ ಅಶ್ವಿನಿ
ಟಿಆರ್‌ಪಿಯಲ್ಲಿ No 1 ಇದ್ದ ಗಟ್ಟಿಮೇಳ ಧಾರಾವಾಹಿ ಬಿಡಲು ಕಾರಣ ಏನು? ಈಗ ಮೌನ ಮುರಿದ ಅಶ್ವಿನಿ
Actress Ashwini: ವರ್ಷಾನುಗಟ್ಟಲೇ ಟಿಆರ್‌ಪಿಯಲ್ಲಿ ನಂ 1 ಆಗಿದ್ದ ಗಟ್ಟಿಮೇಳ ಸೀರಿಯಲ್‌ಗೆ ದೊಡ್ಡ ಅಭಿಮಾನಿ ಬಗಳವಿತ್ತು. ಈ ಸೀರಿಯಲ್ ಮುಗಿದು ಎರಡು ವರ್ಷ ಆಗುತ್ತ ಬಂತು. ಆದರೂ ಕೂಡ ಈ ಧಾರಾವಾಹಿಯನ್ನು ವೀಕ್ಷಕರು ನೆನಪಿಸಿಕೊಳ್ಳುತ್ತಿರುತ್ತಾರೆ.

ದೊಡ್ಡ ತಾರಾ ಬಳಗ
ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗ ಇತ್ತು. ಎರಡು ಕುಟುಂಬಗಳ ಕಥೆ ಇಲ್ಲಿದೆ. ಆಗರ್ಭ ಶ್ರೀಮಂತ ವೇದಾಂತ್ ಕುಟುಂಬ ಒಂದುಕಡೆಯಾದರೆ, ಮಧ್ಯಮವರ್ಗದ ಅಮೂಲ್ಯ ಕುಟುಂಬ ಇನ್ನೊಂದು ಕಡೆ. ಅಮೂಲ್ಯ ಹಾಗೂ ವೇದಾಂತ್ ಮದುವೆ ಆಗುವ ಕಥೆಯೂ ಇಲ್ಲಿದೆ.
ಆರತಿ ಪಾತ್ರದಲ್ಲಿ ಅಶ್ವಿನಿ
ಅಮೂಲ್ಯ ಅಕ್ಕ ಆರತಿ ಪಾತ್ರದಲ್ಲಿ ನಟಿ ಅಶ್ವಿನಿ ನಟಿಸಿದ್ದರು. ಆರಂಭದ ಕೆಲ ವರ್ಷಗಳ ಕಾಲ ಇವರು ಆರತಿಯಾಗಿ ಜೀವಿಸಿದ್ದರು. ಅದಾದ ನಂತರ ಇವರು ಧಾರಾವಾಹಿಗೆ ಗುಡ್‌ಬೈ ಹೇಳಿದ್ದರು. ಆರತಿ ನಂತರ ಗಗನಾ, ಆರತಿ ಪಡುಬಿದ್ರಿ ಕೂಡ ಇವರ ಪಾತ್ರವನ್ನು ನಿಭಾಯಿಸಿದ್ದರು. ಹೀಗಿದ್ದರೂ ಕೂಡ ಆರತಿಯನ್ನು ಯಾರೂ ಮರೆತಿಲ್ಲ.
ಸೀರಿಯಲ್ ಬಿಟ್ಟಿದ್ದು ಯಾಕೆ?
ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಯುಟ್ಯೂಬ್ ಚಾನೆಲ್‌ನಲ್ಲಿ ಆರತಿ ಅವರು ಯಾಕೆ ಸೀರಿಯಲ್ ಬಿಟ್ಟರು ಎಂಬ ಪ್ರಶ್ನೆ ಕೇಳಿಬರುವುದು. Asianet Suvaran News ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಶ್ವಿನಿ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಅಸಲಿ ಕಾರಣ ಏನು?
“ನಾನು ಯಾಕೆ ಗಟ್ಟಿಮೇಳ ಧಾರಾವಾಹಿ ಬಿಟ್ಟೆ ಅಂತ ಜನರು ಈಗಲೂ ಪ್ರಶ್ನೆ ಮಾಡ್ತಾರೆ. ಇದಕ್ಕೂ ಕಾರಣವಿದೆ. ನನಗೆ ಜನಪ್ರಿಯತೆ, ಎಲ್ಲವನ್ನೂ ಗಟ್ಟಿಮೇಳ ತಂದುಕೊಟ್ಟಿದೆ, ಟೀಂ ಕೂಡ ಚೆನ್ನಾಗಿತ್ತು. ಎಲ್ಲ ಮನೆಯಲ್ಲಿ ಇರುವಂತೆ ಇಲ್ಲಿಯೂ ಸಮಸ್ಯೆ ಬಂದಿತ್ತು, ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು. ಮನೆಯಲ್ಲಿ ಏನಾದರೂ ಆದರೆ ಸಹಿಸಿಕೊಳ್ಳಬಹುದು, ಆದರೆ ಕೆಲಸದ ಸ್ಥಳದಲ್ಲಿ ಸಮಸ್ಯೆ ಆದರೆ ತಡೆದುಕೊಳ್ಳೋಕೆ ಆಗೋದಿಲ್ಲ, ಹೀಗಾಗಿ ಸೀರಿಯಲ್ ಬಿಟ್ಟೆ” ಎಂದು ಅವರು ಹೇಳಿದ್ದಾರೆ.
ಉದ್ಯಮ
ಗಟ್ಟಿಮೇಳ ಧಾರಾವಾಹಿ ನಂತರ ಅಶ್ವಿನಿ ಅವರು ಯಾವುದೇ ಸೀರಿಯಲ್‌ನಲ್ಲಿ ನಟಿಸಿಲ್ಲ. ಅವರು ಮಾಲ್ಟ್ ಉದ್ಯಮ ಆರಂಭಿಸಿದ್ದು, ಈಗ ನಾಲ್ಕಾರು ಜನರಿಗೆ ಕೆಲಸ ಕೊಡುವಂತಾಗಿದ್ದಾರೆ.