ಆಸ್ಟ್ರಿಯಾ ರೈತರ ಕೃಷಿ ಪದ್ಧತಿ ಬಗ್ಗೆ ತರಳಬಾಳು ಶ್ರೀಗಳ ಮೆಚ್ಚುಗೆ: ಅಧ್ಯಾಪಕರಿಗೆ ಗೌರವ ಸಮರ್ಪಣೆ
ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರು ಯೂರೋಪ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಆಸ್ಟ್ರಿಯಾ ದೇಶದಲ್ಲಿ ರೈತರೊಂದಿಗೆ ಚರ್ಚಿಸಿದ್ದಾರೆ.
(ಕೃಪೆ: ತರಳಬಾಳು ಶಿಷ್ಯವರ್ಗ)
ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬೆಳೆ ಉತ್ಪಾದಕತೆ ಹಾಗೂ ರೈತರ ಆದಾಯ ಸುಧಾರಿಸಲು ಶ್ರೀಗಳು ಸದಾ ಚಿಂತಿಸುತ್ತಾರೆ. ತರಳಬಾಳು ಶ್ರೀಗಳು ಆ ದೇಶದ ರಾಜಧಾನಿ ವಿಯೆನ್ನಾದಲ್ಲಿ 1977-79ರ ಅವಧಿಯಲ್ಲಿ ವ್ಯಾಸಂಗ ಮಾಡಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ನೆರವಾದ ಅಧ್ಯಾಪಕರನ್ನು ಭೇಟಿ ಮಾಡಿ ಗೌರವ ಸಮರ್ಪಿಸಲು ಅವರು ಆಸ್ಟ್ರಿಯಾಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ತರಳಬಾಳು ಶ್ರೀಗಳು ಆಸ್ಟ್ರಿಯಾದಲ್ಲಿನ ಕೃಷಿ ಪದ್ಧತಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಭಾರತದ ರೈತ ಸಮುದಾಯಕ್ಕೆ ಸಂದೇಶ ನೀಡಿದ್ದಾರೆ. ಆಸ್ಟ್ರಿಯಾದ ಪಶ್ಚಿಮ ಭಾಗದಲ್ಲಿ ಇನ್ಸ್‌ಬ್ರಕ್ ಬಳಿಯ ಟ್ರಿನ್ ಎಂಬ ಸ್ಥಳದಲ್ಲಿ ಕೃಷಿ ಭೂಮಿಗೆ ಭೇಟಿ ನೀಡಿದ್ದಾರೆ. ಹಾಗೂ, ಇಲ್ಲಿನ ಜಮೀನಿನಲ್ಲಿ ದುಡಿಯುತ್ತಿರುವ ರೈತ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾರೆ.
ಆ ವೇಳೆ, ಮನೆಯವರೆಲ್ಲರೂ – ತಂದೆ, ತಾಯಿ, ಮಗ ಮತ್ತು ಮಗಳು ಒಟ್ಟಾಗಿ ಹೊಲದಲ್ಲಿ ಹುಲ್ಲು ಕತ್ತರಿಸುವ ಮತ್ತು ಒಂದೆಡೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಹುಲ್ಲು ಕತ್ತರಿಸುವ ಟ್ರಾಕ್ಟರ್ ನೋಡುತ್ತ ನಾವು ಆ ಹುಡುಗ ಓಡಿಸುತ್ತಿದ್ದ ಆ ಟ್ರ್ಯಾಕ್ಟರ್ ಹತ್ತಿ ಸವಾರಿ ಮಾಡಿದ್ದಾರೆ.
ತನಗೆ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯಿಲ್ಲ, ಆದರೆ ಪೂರ್ವಿಕರ ಆ ಜಮೀನಿನ ಸಾಗುವಳಿಯಲ್ಲಿ ತನಗೆ ಆಸಕ್ತಿ ಇದೆ ಎಂದು ಆ ಹುಡುಗ ನಮಗೆ ತಿಳಿಸಿದ. ರೈತರು ಹುಲ್ಲನ್ನೆಲ್ಲ ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಅದನ್ನೆಲ್ಲ ಒಂದು ಕಡೆ ಒಟ್ಟು ಮಾಡಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಆಹಾರಕ್ಕಾಗಿ ಸಂಗ್ರಹಿಸುತ್ತಾರೆ.
ಶ್ರೀಗಳು ಭೇಟಿಯಾದ ರೈತ ಕುಟುಂಬವು ವರ್ಷಕ್ಕೆ ಸುಮಾರು 1,20,000/- ಯುರೋ ಡಾಲರ್ ಗಳಿಸುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಅದರ ಮೌಲ್ಯ ಸುಮಾರು 11,00,000 ರೂಪಾಯಿಗಳು.
ನಾವಿದ್ದ ಆ ಪ್ರದೇಶದ ಭೂಮಿಯ ಸುತ್ತಲೂ ಕಾಣುವ ಪರ್ವತಗಳನ್ನು ಆಲ್ಪ್ಸ್ ಪರ್ವತಗಳು ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಈ ಎಲ್ಲಾ ಪರ್ವತಗಳು ಹಿಮದಿಂದ ಆವೃತವಾಗುತ್ತವೆ. ಚಳಿಗಾಲದಲ್ಲಿ ಸ್ಕೀಯಿಂಗ್ (Skiing) ಮಾಡಲು ಯುರೋಪಿನಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಆಸ್ಟ್ರಿಯನ್ ಸರ್ಕಾರವು ಭೂಮಿಯ ವಿಸ್ತೀರ್ಣವನ್ನು ಆಧರಿಸಿ ರೈತರಿಗೆ ತಮ್ಮ ಭೂಮಿಯನ್ನು ನಿರ್ವಹಿಸಲು ಪ್ರತಿ ವರ್ಷ ಸ್ವಲ್ಪ ಹಣವನ್ನು ಪಾವತಿಸುತ್ತದೆ. ಮರಗಳನ್ನು ಕಡಿಯಲು ರೈತರಿಗೆ ಇಲ್ಲಿ ಯಾವುದೇ ಪರವಾನಗಿಯ ಅಗತ್ಯವಿಲ್ಲ. ಆದರೆ ಯಾವುದೇ ಮರವನ್ನು ಕಡಿಯುವ ಮೊದಲು ಅವರು ಹೊಸ ಮರಗಳನ್ನು ನೆಡಬೇಕು ಎಂದೂ ಹೇಳಿದ್ದಾರೆ.