ಭಾರತದ ಕೊನೆ ರೈಲು ನಿಲ್ದಾಣವಿದು! ವಿಶೇಷತೆ ಗೊತ್ತಾದ್ರೆ ಹೋಗಲೇಬೇಕೆನಿಸುತ್ತೆ!
ಪ್ರಪಂಚದಲ್ಲೇ ಅತಿ ದೊಡ್ಡ ರೈಲ್ವೆ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಭಾರತವೂ. ಪ್ರತಿದಿನ ಕೋಟ್ಯಂತರ ಜನರು ರೈಲ್ವೆ ಪ್ರಯಾಣ ಮಾಡುತ್ತಾರೆ. ಬೃಹತ್ ರೈಲ್ವೆ ಮಾರ್ಗದ ಜೊತೆಗೆ, ಇತಿಹಾಸ ಇರುವ ಭಾರತೀಯ ರೈಲ್ವೆಯ ಕೊನೆಯ ರೈಲು ನಿಲ್ದಾಣ ಯಾವುದು ಗೊತ್ತಾ?
ಪ್ರತಿದಿನ 2 ಕೋಟಿಗೂ ಹೆಚ್ಚು ಪ್ರಯಾಣಿಕರು, ಸುಮಾರು 70 ಸಾವಿರ ಕಿಲೋಮೀಟರ್‌ಗಳ ನೆಟ್‌ವರ್ಕ್.. 13 ಸಾವಿರಕ್ಕೂ ಹೆಚ್ಚು ರೈಲುಗಳು.. ಸಾವಿರಾರು ರೈಲು ನಿಲ್ದಾಣಗಳು.. ಹೀಗೆ ಹೇಳುತ್ತಾ ಹೋದರೆ.. ಭಾರತೀಯ ರೈಲ್ವೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯೋಲ್ಲ. ಭಾರತೀಯ ರೈಲ್ವೆ ಆರಂಭದಿಂದ ಇಲ್ಲಿಯವರೆಗೂ ನಡೆದ ಅಭಿವೃದ್ಧಿ, ಅದ್ಭುತಗಳು, ಭೀಕರ ಅಪಘಾತಗಳು.. ಇವೆಲ್ಲವೂ ದೊಡ್ಡ ಇತಿಹಾಸವೇ ಇದೆ. ಮುಂದಿನ ಪೀಳಿಗೆಗೆ ಭಾರತೀಯ ರೈಲ್ವೆ ಬಗ್ಗೆಯೇ ಪಾಠ ಇಡಬಹುದು.
ಸಾವಿರಾರು ನಿಲ್ದಾಣಗಳನ್ನು ಹೊಂದಿರುವ ಭಾರತೀಯ ರೈಲ್ವೆಗೆ ದೊಡ್ಡ ಇತಿಹಾಸವಿದೆ. ಪ್ರತಿಯೊಂದು ರೈಲು ನಿಲ್ದಾಣಕ್ಕೂ ಒಂದೊಂದು ಕಥೆಯಿದೆ. ಅವುಗಳ ಹಿಂದೆ ಅನೇಕರ ತ್ಯಾಗವಿದೆ. ಹೀಗೆ ಹೇಳುತ್ತಾ ಹೋದರೆ ಮುಗಿಯೋಲ್ಲ ಬಿಡಿ. ಈಗ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಭಾರತದ ಕೊನೆಯ ರೈಲು ನಿಲ್ದಾಣ ಯಾವುದು? ಅದರ ವಿಶೇಷತೆ ಏನು..?
ಭಾರತದ ಕೊನೆಯ ರೈಲು ನಿಲ್ದಾಣ ಬೇರೆಲ್ಲೂ ಇಲ್ಲ, ಬಾಂಗ್ಲಾದೇಶದ ಗಡಿ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿದೆ. ಈ ನಿಲ್ದಾಣದ ಹೆಸರು ಸಿಂಗಾಬಾದ್ ರೈಲು ನಿಲ್ದಾಣ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಬೀಬ್‌ಪುರ ಪ್ರದೇಶದಲ್ಲಿರುವ ಈ ರೈಲು ನಿಲ್ದಾಣವನ್ನು ಭಾರತದ ಕೊನೆಯ ರೈಲು ನಿಲ್ದಾಣವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದರ ನಂತರ ಬಾಂಗ್ಲಾದೇಶದ ಗಡಿ ಪ್ರಾರಂಭವಾಗುತ್ತದೆ.
ಈ ಸಿಂಗಾಬಾದ್ ರೈಲು ನಿಲ್ದಾಣ ಬಹಳ ಚಿಕ್ಕದು. ಮತ್ತು ಪ್ರಾಚೀನವಾದುದು. ಬ್ರಿಟಿಷರ ಕಾಲದಲ್ಲಿ ಇದನ್ನು ನಿರ್ಮಿಸಲಾಯಿತು. ಎಷ್ಟೇ ಚಿಕ್ಕದಾದರೂ.. ಬಹಳ ಪ್ರಾಚೀನವಾದುದರಿಂದ.. ಈ ನಿಲ್ದಾಣವು ಐತಿಹಾಸಿಕ ಮಹತ್ವ ಹೊಂದಿದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ವೃದ್ಧಿಗೆ ಇದು ಪ್ರಮುಖ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ವ್ಯಕ್ತಿಗಳು ಢಾಕಾಕ್ಕೆ ಹೋಗಲು ಈ ನಿಲ್ದಾಣವನ್ನೇ ಬಳಸುತ್ತಿದ್ದರು.
ಇಷ್ಟೊಂದು ಇತಿಹಾಸವಿರುವ ಈ ರೈಲು ನಿಲ್ದಾಣ ಈಗ ಏಕೆ ಬಳಕೆಯಲ್ಲಿಲ್ಲ. ಕನಿಷ್ಠ ಸರ್ಕಾರಗಳು, ವಿಶೇಷ ಅನುದಾನ ನೀಡಿ. ಪರಂಪರೆ ತಾಣವನ್ನಾಗಿ ಸಂರಕ್ಷಿಸಬಹುದಿತ್ತು. ಯಾರೂ ಕ್ಯಾರೇ ಎನ್ನದ ಕಾರಣ, ಈಗಿದು ನಿರ್ಜನ ಪ್ರದೇಶವಾಗಿದೆ. ಈಗಿಲ್ಲಿ ಯಾವುದೇ ರೈಲು ನಿಲ್ಲುವುದಿಲ್ಲ. ಈ ರೈಲು ನಿಲ್ದಾಣವನ್ನು ಈಗ ಸರಕು ಸಾಗಾಣಿಕೆ ರೈಲುಗಳಿಗೆ ಮಾತ್ರ ಬಳಸಲಾಗುತ್ತಿದೆ. ಇಲ್ಲಿಂದ ಬಾಂಗ್ಲಾ ದೇಶಕ್ಕೆ ಕೆಲವು ಸರಕು ರೈಲುಗಳು ಸಂಚರಿಸುತ್ತವೆ. ಈ ರೈಲು ನಿಲ್ದಾಣ ಕೇವಲ ವ್ಯಾಪಾರಕ್ಕೆ ಮಾತ್ರ ಉಪಯೋಗವಾಗುತ್ತಿದೆ.
ಇಲ್ಲಿ ಯಾವುದೇ ರೈಲು ನಿಲ್ಲುವುದಿಲ್ಲ ಅಥವಾ ಯಾವುದೇ ಪ್ರಯಾಣಿಕರು ಬರುವುದಿಲ್ಲ. ಆದ್ದರಿಂದ ಈ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳು ನಿರ್ಜನವಾಗಿ ಕಾಣುತ್ತವೆ. ಟಿಕೆಟ್ ಕೌಂಟರ್‌ಗಳನ್ನು ಸಹ ಮುಚ್ಚಲಾಗಿದೆ. ನಿಲ್ದಾಣದಲ್ಲಿ ಕೆಲವು ರೈಲ್ವೆ ಸಿಬ್ಬಂದಿ ಮಾತ್ರ ಇದ್ದಾರೆ.