ಧಾರವಾಡದಲ್ಲಿ ದೇಶದ ಮೊದಲ FMCG ಉತ್ಪಾದನಾ ಕ್ಲಸ್ಟರ್: 5 ಲಕ್ಷ ಉದ್ಯೋಗ ಸೃಷ್ಟಿ
ಬೆಂಗಳೂರು(ಅ.02): ಧಾರವಾಡದಲ್ಲಿ ದೇಶದ ಮೊದಲ ಎಫ್‌ಎಂಸಿಜಿ ಸುಸಜ್ಜಿತ (ಫಾಸ್ಟ್ ಮೂವಿಂಗ್ ಕನ್‌ಸ್ಯೂಮರ್ ಗೂಡ್ಸ್ ಉತ್ಪಾದನಾ ಕ್ಲಸ್ಟರ್) ಸ್ಥಾಪನೆಗೆ ಸಂಬಂಧಿಸಿದಂತೆ ವಿಷನ್ ಗ್ರೂಪ್ ಸಿದ್ಧಪಡಿಸಿರುವ ವರದಿಯನ್ನು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಶುಕ್ರವಾರ ಸಲ್ಲಿಸಲಾಗಿದೆ.

ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಕುರಿತ 'ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ ಧಾರವಾಡ ವಿಷನ್ ಗ್ರೂಪ್ 2020-2025' ವರದಿಯನ್ನು ವಿಷನ್ ಗ್ರೂಪ್‌ನ ಮುಖ್ಯಸ್ಥ ಉಲ್ಲಾಸ್ ಕಾಮತ್ ಅವರು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹಸ್ತಾಂತರಿಸಿದ್ದಾರೆ.

ವರದಿ ಸ್ವೀಕರಿಸಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಬದ್ಧವಾಗಿ ಉತ್ತರ-ಕರ್ನಾಟಕದ ಅಭಿವೃದ್ಧಿಗಾಗಿ "ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ- ಧಾರವಾಡ' ರೂಪುರೇಷೆಯ ದಾಖಲೆ ಸಿದ್ಧವಾಗಿದೆ. 2025ರ ವೇಳೆಗೆ ಶೇ.35 ರಷ್ಟು ಆರ್ಥಿಕ ಬೆಳವಣಿಗೆಯೊಂದಿಗೆ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಇದೆ. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಮೂಲಕ ಈ ಕ್ಷೇತ್ರದ ಹೂಡಿಕೆದಾರನ್ನು ಸೆಳೆಯಲಾಗುವುದು ಎಂದು ಹೇಳಿದ್ದಾರೆ.

ಕಳೆದ ಬಜೆಟ್‌ನಲ್ಲಿ ಎಫ್‌ಸಿಜಿ ಕ್ಲಸ್ಟರ್ ಸ್ಥಾಪನೆ ಸಂಬಂಧ ಘೋಷಣೆ ಆಗಿತ್ತು. ಅದರಂತೆ "ಟ್ರಾನ್ಸ್‌ಫಾರ್ಮ್ ಹುಬ್ಬಳ್ಳಿ ಧಾರವಾಡ ವಿಷನ್ ಗ್ರೂಪ್ 2020-2025' ವರದಿ ಸಿದ್ಧಪಡಿಸಲಾಗಿದೆ. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆ ಕುರಿತು ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಪಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಸಮಾಲೋಚನೆ ನಡೆಸಿ ಯೋಜನೆ ಸಾಕಾರಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಹುಬ್ಬಳ್ಳಿ ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್ ಹೆಚ್ಚುವರಿ 25,000 ಕೋಟಿ ರೂ. ವಹಿವಾಟು ನಡೆಯುವ ಸೃಷ್ಟಿ ನಿರೀಕ್ಷೆ ಇದೆ. ಜತೆಗೆ, ಪ್ರದೇಶದಲ್ಲಿ 12-15 ಸಾವಿ ಕೋಟಿ ರೂ. ಸಾಮಾಜಿಕ ಆರ್ಥಿಕ ವಹಿವಾಟು ನಡೆಯುವ ಅಂದಾಜಿದೆ. ಪ್ರಸ್ತಾವಿತ ಎಫ್‌ಎಂಸಿಜಿ ಕ್ಲಸ್ಟರ್ ಮೂರು ಹಂತದಲ್ಲಿ ಅಭಿವೃದ್ಧಿಯಾಗಲಿದ್ದು. ಪ್ರತಿ ಹಂತದದಲ್ಲೂ 50 ಎಫ್‌ಎಂಸಿಜಿ ಕಂಪನಿಗಳು ಅಂದಾಜು 2500 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದೆ. ಅದೇ ರೀತಿ ಪ್ರತಿ ಹಂತದಲ್ಲೂ 50,000 ಉದ್ಯೋಗ ಸೃಷ್ಟಿ ಸಾಧ್ಯತೆ ಇದ್ದು, ಪ್ರತಿ ಹಂತದಲ್ಲೂ 500 ಎಕರೆ ಪ್ರದೇಶ ಬಳಕೆಯಾಗಲಿದೆ ಎಂದರು.

ರಾಜ್ಯದ ಮುಂದಿನ ಕೈಗಾರಿಕಾ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದ್ದು. ಮುಂದಿನ 4-5 ವರ್ಷಗಳಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೂಡ ಇದು ನೆರವಾಗಲಿಗೆ ಎಂದು ಭರವಸೆ ವ್ಯಕ್ತಪಡಿಸಿದರು.

ಹೂಡಿಕೆ ಆಕರ್ಷಣೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ಮುಂಬಯಿ, ಹೈದರಾಬಾದ್, ಗುವಾಹಟಿ ರೋಡ್ ಶೋ ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿತ್ತು. ಅದರ ಫಲವಾಗಿ ಹಲವಾರು ಯೋಜನೆಗಳು ಸಾಕಾರ ರೂಪ ತಾಳುತ್ತಿವೆ. ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿ ಕುರಿತ ಅಧ್ಯಯನಕ್ಕೆ ವಿಷನ್ ಗ್ರೂಪ್ ರಚಿಸಲಾಗಿತ್ತು. ರಾಜ್ಯ ಸರ್ಕಾರ ಹಾಗೂ ಕೈಗಾರಿಕೆ ಇಲಾಖೆಯ ಪ್ರಯತ್ನದಿಂದಾಗಿ ಈ ವರದಿ ಸಿದ್ಧಗೊಂಡಿದೆ," ಎಂದು ವಿಷನ್ ಗ್ರೂಪ್‌ನ ಅಧ್ಯಕ್ಷ ಉಲ್ಲಾಸ್ ಕಾಮತ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಕೆಐಡಿಬಿ ಸಿಇಓ, ಡಾ. ಶಿವಶಂಕರ್ ಎಫ್ ಎಂ ಸಿ ಜಿ ಕ್ಲಸ್ಟರ್ ನೋಡಲ್ ಬಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ