ಆನ್‌ಲೈನ್ ಗೇಮಿಂಗ್ ಬಿಲ್ 2025: ಡ್ರೀಮ್11 ಬಂದ್? ಯೂಸರ್ಸ್ ದುಡ್ಡಿನ ಕಥೆ ಏನು?
ಆನ್‌ಲೈನ್ ಗೇಮಿಂಗ್ ಬಿಲ್ 2025 ಪಾರ್ಲಿಮೆಂಟ್‌ನಲ್ಲಿ ಪಾಸ್ ಆಗಿ, ಡ್ರೀಮ್11, ಮೈ11ಸರ್ಕಲ್‌ಗಳಿಗೆ ಶಾಕ್ ಕೊಟ್ಟಿದೆ. ಯೂಸರ್‌ಗಳ ದುಡ್ಡಿನ ಬಗ್ಗೆ ಆತಂಕದ ನಡುವೆ ಕಂಪನಿಗಳು ಸ್ಪಷ್ಟನೆ ನೀಡಿವೆ.
15

Image Credit : Gemini
ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕಲು ಸರ್ಕಾರ ತಂದ ‘ಆನ್‌ಲೈನ್ ಗೇಮಿಂಗ್ ಬಿಲ್ 2025’ಗೆ ಲೋಕಸಭಾ, ರಾಜ್ಯಸಭೆಗಳ ಒಪ್ಪಿಗೆ ಸಿಕ್ಕಿದೆ. ರಾಷ್ಟ್ರಪತಿ ಸಹಿ ಹಾಕಿದ ನಂತರ ಇದು ಕಾನೂನಾಗಿದೆ. ಡ್ರೀಮ್11, ಮೈ11ಸರ್ಕಲ್, ಎಂಪಿಎಲ್‌ಗಳಿಗೆ ಶಾಕ್.
25
Image Credit : stockphoto
ಡ್ರೀಮ್ ಸ್ಪೋರ್ಟ್ಸ್ ತಮ್ಮ ಡ್ರೀಮ್11 ಆ್ಯಪ್‌ನಲ್ಲಿನ ‘ಪೇ ಟು ಪ್ಲೇ’ ಗೇಮ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಡ್ರೀಮ್ ಪಿಕ್ಸ್, ಡ್ರೀಮ್ ಪ್ಲೇ ಆ್ಯಪ್‌ಗಳನ್ನೂ ಸ್ಥಗಿತಗೊಳಿಸಿದೆ. ಯೂಸರ್‌ಗಳ ದುಡ್ಡು ಸೇಫ್, ಯಾವಾಗ ಬೇಕಾದರೂ ವಾಪಸ್ ಪಡೆಯಬಹುದು ಎಂದಿದೆ.
35
Image Credit : Harsh Jain | twitter
ಎಂಎಪಿಎಲ್ ಕೂಡ ತನ್ನ ಆ್ಯಪ್‌ನಲ್ಲಿ ಹಣದ ಗೇಮ್‌ಗಳನ್ನು ನಿಲ್ಲಿಸಿದೆ. ಹೊಸದಾಗಿ ಹಣ ಹಾಕಲು ಆಗಲ್ಲ, ಆದರೆ ಉಳಿದ ಹಣವನ್ನು ವಾಪಸ್ ಪಡೆಯಬಹುದು ಎಂದಿದೆ.
45
Image Credit : our own
ಗೇಮ್ಸ್‌ಕ್ರಾಫ್ಟ್ ತನ್ನ ರಮ್ಮಿ ಆ್ಯಪ್‌ನಲ್ಲಿ ಹಣದ ವ್ಯವಹಾರ ನಿಲ್ಲಿಸಿದೆ. ಜೂಪೀ ಕೂಡ ಹಣದ ಗೇಮ್‌ಗಳನ್ನು ನಿಲ್ಲಿಸುತ್ತಿದೆ. ಯೂಸರ್‌ಗಳು ತಮ್ಮ ಹಣವನ್ನು ಬೇಗ ವಾಪಸ್ ಪಡೆಯಬೇಕು ಎಂದು ತಜ್ಞರು ಹೇಳಿದ್ದಾರೆ.
55
Image Credit : ANI
ಭಾರತದ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆ ಈಗ $3.7 ಬಿಲಿಯನ್ ಇದೆ. 2029ರ ವೇಳೆಗೆ $9.1 ಬಿಲಿಯನ್ ಆಗಬಹುದು. ಈ ಕಾನೂನಿನಿಂದ ದೊಡ್ಡ ಬದಲಾವಣೆಗಳಾಗಲಿವೆ.
Latest Videos