- Home
- Entertainment
- Sandalwood
- Varamahalakshmi 2025: ನಟ ಯಶ್, ರಾಧಿಕಾ ಪಂಡಿತ್, ಅದಿತಿ ಪ್ರಭುದೇವ ಮನೆಯಲ್ಲಿ ಭರ್ಜರಿ ಹಬ್ಬ; Photos
Varamahalakshmi 2025: ನಟ ಯಶ್, ರಾಧಿಕಾ ಪಂಡಿತ್, ಅದಿತಿ ಪ್ರಭುದೇವ ಮನೆಯಲ್ಲಿ ಭರ್ಜರಿ ಹಬ್ಬ; Photos
ಇಡೀ ನಾಡು ಬಹಳ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ( Varamahalakshmi Festival ) ಖುಷಿಯಿಂದ ಆಚರಿಸಿದೆ. ಅಂತೆಯೇ ನಟ ಯಶ್, ರಾಧಿಕಾ ಪಂಡಿತ್, ಅದಿತಿ ಪ್ರಭುದೇವ ಅವರ ಮನೆಯಲ್ಲಿಯೂ ಹಬ್ಬವನ್ನು ಖುಷಿಯಿಂದ ಆಚರಿಸಲಾಗಿದೆ.

ನಟಿ ಅದಿತಿ ಪ್ರಭುದೇವ, ಯಶ್-ರಾಧಿಕಾ ಪಂಡಿತ್ ದಂಪತಿ ಬಹಳ ಖುಷಿಯಿಂದ ಹಬ್ಬವನ್ನು ಆಚರಿಸಿದೆ.
ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಟ್ಲ ಅವರ ಮುದ್ದಿನ ಮಗಳು ನೇಸರ ದೇವರ ಮುಂದೆ ಕಂಡಿದ್ದು ಹೀಗೆ..
ನಟಿ ಅದಿತಿ ಪ್ರಭುದೇವ, ಯಶಸ್ ಪಟ್ಲ ಅವರ ತಂದೆ ತಾಯಿ ಕೂಡ ಈ ಹಬ್ಬದಲ್ಲಿ ಭಾಗಿಯಾಗಿದ್ದರು. ಇಡೀ ಕುಟುಂಬವು ಖುಷಿಯಿಂದ ಹಬ್ಬವನ್ನು ಆಚರಿಸಿದೆ.
ಇಡೀ ಕುಟುಂಬವು ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿದೆ. ನಟಿ ಅದಿತಿ ಪ್ರಭುದೇವ ಅವರು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದಲ್ಲಿ ಅದಿತಿ ಪ್ರಭುದೇವ ಅವರು ಪುಟ್ಟ ಲಕ್ಷ್ಮೀ ನೇಸರ ಜೊತೆಗೆ ಆಚರಿಸಿದ್ದಾರೆ. ಹೀಗಾಗಿ ಈ ಹಬ್ಬ ಇನ್ನಷ್ಟು ಡಬಲ್ ಖುಷಿ ತಂದಿದೆ.
ಅದಿತಿ ಪ್ರಭುದೇವ ಅವರು ಬಿಳಿ ಬಣ್ಣ ಹಾಗೂ ಪಿಂಕ್ ಬಣ್ಣದ ಕಾಂಬಿನೇಶನ್‌ನಲ್ಲಿರುವ ಸೀರೆ ಉಟ್ಟಿದ್ದಾರೆ. ಅಷ್ಟೇ ಅಲ್ಲದೆ ಗ್ರ್ಯಾಂಡ್ ಆಗಿರುವ ಬ್ಲೌಸ್ ಹಾಕಿದ್ದರು.
ಅಂದಹಾಗೆ ನಟಿ ರಾಧಿಕಾ ಪಂಡಿತ್ ಕೂಡ ಕುಟುಂಬದ ಜೊತೆಗೆ ಹಬ್ಬವನ್ನು ಆಚರಿಸಿದ್ದಾರೆ. ಯಶ್ ಜೋಡಿಯು ಯಾವಾಗಲೂ ಹಬ್ಬಗಳನ್ನು ಗ್ರ್ಯಾಂಡ್ ಆಗಿ ಆಚರಿಸುವುದು.
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
ನಟಿ ರಾಧಿಕಾ ಪಂಡಿತ್ ಅವರು ಹಬ್ಬ ಎಂದು ಬಹಳ ಗ್ರ್ಯಾಂಡ್ ಆಗಿ ಟ್ರೆಡಿಷನಲ್ ಆಗಿ ರೆಡಿ ಆಗಿದ್ದಾರೆ.