- Home
- Entertainment
- Sandalwood
- Bhavana Rao House Warming: ನಟಿ ಭಾವನಾ ರಾವ್ ಮನೆ ಗೃಹ ಪ್ರವೇಶದಲ್ಲಿ ರವಿಚಂದ್ರನ್ ಸೇರಿದಂತೆ ಸೆಲೆಬ್ರಿಟಿಗಳು ಭಾಗಿ
Bhavana Rao House Warming: ನಟಿ ಭಾವನಾ ರಾವ್ ಮನೆ ಗೃಹ ಪ್ರವೇಶದಲ್ಲಿ ರವಿಚಂದ್ರನ್ ಸೇರಿದಂತೆ ಸೆಲೆಬ್ರಿಟಿಗಳು ಭಾಗಿ
ನಟಿ ಭಾವನಾ ರಾವ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹೊಸ ಮನೆಯ ಗೃಹ ಪ್ರವೇಶದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ಗಾಳಿಪಟ, ಬಹುಪರಾಕ್, ಪರಪಂಚ, ರ್ಯಾಂಬೋ 2, ದಯವಿಟ್ಟ ಗಮನಿಸಿ, ಹೊಂದಿಸಿ ಬರೆಯಿರಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾವ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ.
ನಟಿ ಭಾವನಾ ರಾವ್ ಅವರ ಹೊಸ ಮನೆಯ ಗೃಹ ಪ್ರವೇಶದಲ್ಲಿ ʼಹೊಂದಿಸಿ ಬರೆಯಿರಿʼ ಸಿನಿಮಾ ತಂಡ ಭಾಗಿಯಾಗಿತ್ತು. ನಟ ನವೀನ್ ಶಂಕರ್, ಅರ್ಚನಾ ಜೋಯಿಸ್ ಮುಂತಾದವರು ಭಾಗಿಯಾಗಿದ್ದಾರೆ.
ನಟಿ ತಾರಾ ಅವರು ಭಾವನಾ ರಾವ್ ಮನೆಯ ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದರು. ಈ ಮೂಲಕ ನಟಿಯ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ.
ನಟ ವಿಜಯ್ ರಾಘವೇಂದ್ರ ಅವರ ʼಗ್ರೇ ಗೇಮ್ಸ್ʼ ಸಿನಿಮಾದಲ್ಲಿ ಭಾವನಾ ನಟಿಸಿದ್ದರು. ವಿಜಯ್ ರಾಘವೇಂದ್ರ ಅವರು ಅಕ್ಕನ ಮಗನ ಜೊತೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಭಾವನಾ ಮನೆಗೆ ಬಂದು ಶುಭ ಹಾರೈಸಿದ್ದಾರೆ.
ನಟ ವಿ ರವಿಚಂದ್ರನ್ ಅವರು ಭಾವನಾ ಮನೆಗೆ ಬಂದು ಶುಭ ಹಾರೈಸಿದ್ದಾರೆ. ಈ ಮೂಲಕ ಭಾವನಾ ಕುಟುಂಬ ಫುಲ್ ಖುಷಿಯಾಗಿದೆ.
ನಟಿ ಸಿಂಧು ಲೋಕನಾಥ್ ಕೂಡ ಗೆಳತಿ ಭಾವನಾ ರಾವ್‌ಗೆ ಶುಭ ಹಾರೈಸಿದ್ದಾರೆ.
ನಟ ಶರಣ್ ಕೂಡ ಭಾವನಾ ಮನೆಗೆ ಬಂದಿದ್ದರು. ನಮಗೆ ಇದು ತುಂಬ ಖುಷಿಯಾದ ಸಮಯ ಎಂದು ಭಾವನಾ ಹೇಳಿಕೊಂಡಿದ್ದಾರೆ.
ಕನ್ನಡ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕೂಡ ಭಾವನಾ ಮನೆಗೆ ಬಂದಿದ್ದರು. ಬಹಳ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನಡೆದಿದೆ.
ಕನ್ನಡ ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಒಡೆಯರ್ ಕೂಡ ಭಾವನಾ ಮನೆಗೆ ಬಂದಿದ್ದರು.
ನಟಿ ಸೋನು ಗೌಡ, ಜಾಹ್ನವಿ ರಾಯಲ ಅವರು ಕೂಡ ಗೆಳತಿ ಭಾವನಾ ರಾವ್ ಮನೆಗೆ ಬಂದಿದ್ದರು.