- Home
- Entertainment
- Sandalwood
- ಕಾಂತಾರದಲ್ಲಿ ರುಕ್ಮಿಣಿ ಜೊತೆ ರಿಷಬ್ ರೊಮ್ಯಾನ್ಸ್.... ಟ್ರೋಲ್ ಆದ್ರು ರಕ್ಷಿತ್ ಶೆಟ್ಟಿ
ಕಾಂತಾರದಲ್ಲಿ ರುಕ್ಮಿಣಿ ಜೊತೆ ರಿಷಬ್ ರೊಮ್ಯಾನ್ಸ್.... ಟ್ರೋಲ್ ಆದ್ರು ರಕ್ಷಿತ್ ಶೆಟ್ಟಿ
ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿ ಭಾರಿ ಸದ್ದು ಮಾಡುತ್ತಿದೆ. ಇನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಟ್ರೈಲರಲ್ಲಿ ರುಕ್ಮಿಣಿ ವಸಂತ್ ಮತ್ತು ರಿಷಬ್ ಶೆಟ್ಟಿ ರೊಮ್ಯಾನ್ ನೋಡಿ ಅಭಿಮಾನಿಗಳು ರಕ್ಷಿತ್ ಶೆಟ್ಟಿಯವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಕಾಂತಾರ ಚಾಪ್ಟರ್ 1
ಕಾಂತಾರ ಸಿನಿಮಾ ಮೂಲಕ ದೇಶವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡೀದ ರಿಷಬ್ ಶೆಟ್ಟಿ ಇದೀಗ ಕಾಂತಾರಾ ಚಾಪ್ಟರ್ 1 ಟ್ರೈಲರ್ ಬಿಡುಗಡೆ ಮಾಡಿದ್ದು. ಹಲವು ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಇದನ್ನು ನೋಡಿ ಸಿನಿರಸಿಕರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಮುಖ್ಯ ಆಕರ್ಷಣೆ
ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾದ ಬಳಿಕ ರುಕ್ಮಿಣಿ ವಸಂತ್ ಟ್ರೆಂಡಿಂಗ್ ನಲ್ಲಿದ್ದಾರೆ. ಯಾಕಂದ್ರೆ ಈ ಸಿನಿಮಾದ ಮುಖ್ಯ ಆಕರ್ಷಣೆ ಅಂದ್ರೆ ಅದು ರುಕ್ಮಿಣಿ. ಟ್ರೈಲರ್ ನೋಡಿದ ಬಳಿಕ ರುಕ್ಮಿಣಿ ವಸಂತ್ ಅಂದಕ್ಕೆ ಮರುಳಾಗಿರುವ ಜನರು ನಟಿಯನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ.
ರುಕ್ಮಿಣಿ ವಸಂತ್ ಮೇಲೆ ಕ್ರಶ್
ಈಗಾಗಲೆ ಸಪ್ತಸಾಗರದಾಚೆ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೀಗ ಕಾಂತಾರದಲ್ಲಿ ನಟಿಯ ಲುಕ್ ನೋಡಿ, ಜನರಿಗೆ ರುಕ್ಮಿಣಿ ಮೇಲೆ ಕ್ರಶ್ ಆಗಿದ್ದು, ಸೋಶಿಯಲ್ ಮೀಡಿಯದಲ್ಲಿನ ಪ್ರತಿಯೊಂದು ಪೇಜ್ ಗಳಲ್ಲೂ ರುಕ್ಮಿಣಿ ರಾರಾಜಿಸುತ್ತಿದ್ದಾರೆ.
ಟ್ರೋಲ್ ಆಗ್ತಿದ್ದಾರೆ ರಕ್ಷಿತ್ ಶೆಟ್ಟಿ
ಇದೆಲ್ಲದರ ನಡುವೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಸಪ್ತಸಾಗರದಾಚೆ ಸಿನಿಮಾ ಬಳಿಕ ರಕ್ಷಿತ್ ಮತ್ತು ರುಕ್ಮಿಣಿ ಜೋಡಿಯನ್ನು ಜನರು ಎಷ್ಟು ಇಷ್ಟ ಪಟ್ಟಿದ್ದರು ಅಂದ್ರೆ ಇಬ್ಬರು ಜೋಡಿಯಾದ್ರೆ ಸೂಪರ್ ಎನ್ನುವಷ್ಟು ಇಷ್ಟಪಟ್ಟಿದ್ದರು.
ರಕ್ಷಿತ್ ಶೆಟ್ಟಿಗೆ ಮೋಸ
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್- ರುಕ್ಮಿಣಿ ಪ್ರೀತಿ ಹೇಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ, ಕೊನೆಗೆ ರುಕ್ಮಿಣಿ ಬೇರೆ ಮದುವೆಯಾಗುತ್ತಾಳೆ. ತನ್ನ ಪುಟ್ಟಿಗಾಗಿ ರಕ್ಷಿತ್ ಏನೆಲ್ಲಾ ಮಾಡಿ, ಕೊನೆಗೆ ಸಾಯುತ್ತಾನೆ ಅನ್ನೋದನ್ನು ನೋಡಿದ್ದಾರೆ. ಇದೀಗ ಅದೇ ಪುಟ್ಟಿ ರಿಷಬ್ ಜೊತೆ ರೊಮ್ಯಾನ್ಸ್ ಮಾಡೋದು ನೋಡಿ ರಕ್ಷಿತ್ ಶೆಟ್ಟಿಗೆ ಮೋಸ ಎನ್ನುತ್ತಿದ್ದಾರೆ.
ಸಪ್ತ ಸಾಗರದಾಚೆ, ಉಳಿದವರು ಕಂಡಂತೆ ಪೋಸ್ಟ್
ಸದ್ಯ ಇನ್’ಸ್ಟಾಗ್ರಾಂನಲ್ಲಿ ಸಪ್ತಸಾಗರ, ಉಳಿದವರು ಕಂಡಂತೆ ಸಿನಿಮಾದ ವಿಡಿಯೋ ತುಣುಕುಗಳನ್ನು ಶೇರ್ ಮಾಡಿ, ಪುಟ್ಟಿ ಹೀಗೆ ಮಾಡಬಾರದಿತ್ತು, ಗೆಳೆಯನಿಂದಲೇ ಮೋಸ ಆಯ್ತು, ಪಾಪ ಶೆಟ್ರು ಪುಟ್ಟಿ ಇದು ತಪ್ಪಲ್ವಾ ಎಂದು ಕೇಳುತ್ತಿದ್ದಾರೆ.