- Home
- Entertainment
- Sandalwood
- ರಿಷಬ್ ಶೆಟ್ಟಿ ಹೇಳಿದ ಕನ್ನಡದ ಟಾಪ್ 5 ಸಿನಿಮಾಗಳು… ಜೀವನದಲ್ಲಿ ಒಂದ್ಸಲನಾದ್ರೂ ನೋಡಲೇಬೇಕು
ರಿಷಬ್ ಶೆಟ್ಟಿ ಹೇಳಿದ ಕನ್ನಡದ ಟಾಪ್ 5 ಸಿನಿಮಾಗಳು… ಜೀವನದಲ್ಲಿ ಒಂದ್ಸಲನಾದ್ರೂ ನೋಡಲೇಬೇಕು
ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಸಂದರರ್ಶನಗಳಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ, ಒಂದು ಇಂಟರ್ವ್ಯೂನಲ್ಲಿ ಕನ್ನಡದ ಟಾಪ್ 5 ಸಿನಿಮಾಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆ ಸಿನಿಮಾಗಳನ್ನು ಜೀವನದಲ್ಲಿ ಒಂದು ಸಲನಾದ್ರೂ ನೋಡಲೇಬೇಕು. ಅಂತಹ ಅದ್ಭುತ ಚಿತ್ರಗಳವು. ಸಿನಿ ಪ್ರಿಯರಾಗಿದ್ದರೆ, ಮಿಸ್ ಮಾಡದೆ ನೋಡಿ.

ಟಾಪ್ 5 ಕನ್ನಡ ಸಿನಿಮಾಗಳು
ಕಾಂತಾರ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ನಡುವೆ ಹಿಂದಿಯಲ್ಲಿ ಅನುಪಮಾ ಜೊತೆಗಿನ ಸಂದರ್ಶನದಲ್ಲಿ ರಿಷಬ್ ಅವರು ಇಷ್ಟಪಡುವ 10 ರಲ್ಲಿ 10 ಅಂಕಗಳನ್ನು ಕೊಡಬಹುದಾದ ಟಾಪ್ 5 ಕನ್ನಡ ಸಿನಿಮಾಗಳನ್ನು ಹೆಸರಿಸಿದ್ದಾರೆ. ಇವು ನಿಜಕ್ಕೂ ಬೆಸ್ಟ್ ಸಿನಿಮಾಗಳು. ನೀವು ಸಿನಿಮಾ ಪ್ರಿಯರಾಗಿದ್ದರೆ, ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ.
ಭೂತಯ್ಯನ ಮಗ ಅಯ್ಯು
ಲೋಕೇಶ್ ಮತ್ತು ವಿಷ್ಣುವರ್ಧನ್ ನಟಿಸಿರುವ ಸೂಪರ್ ಹಿಟ್ ಸಿನಿಮಾ ಇದು. ಭೂತಯ್ಯನಾಗಿ ಎಂ.ಪಿ ಶಂಕರ್ ನಟಿಸಿದ್ದರು. ಈ ಸಿನಿಮಾ ನಿರ್ದೆಶನ ಮಾಡಿದ್ದು . ಕ್ರೂರಿಯಾದ ಊರಿನ ಯಜಮಾನ ಭೂತಯ್ಯನ ಸಾವಿನ ಬಳಿಕ, ಆತನ ಜವಾಬ್ಧಾರಿ ಮಗ ಅಯ್ಯುಗೆ ಬರುತ್ತದೆ. ಆತನ ಎದುರಾಳಿ ಎಂದರೆ ಗುಲ್ಲ. ಊರಿನವರ ಸೇವೆಗೆ ಸದಾ ಸಿದ್ಧರಾಗಿರುವ ಗುಲ್ಲ ಹಾಗೂ ಅಯ್ಯುನ ನಡುವೆ ಏನೆಲ್ಲಾ ನಡೆಯುತ್ತೆ ಅನ್ನೋದು ಕಥೆ.
ಒಂದಾನೊಂದು ಕಾಲದಲ್ಲಿ
ಗಿರೀಶ್ ಕಾರ್ನಾಡ್ ನಿರ್ದೇಶನದ ಶಂಕರ್ ನಾಗ್ ಅಭಿನಯದ ಅದ್ಭುತವಾದ ಚಿತ್ರ ಒಂದಾನೊಂದು ಕಾಲದಲ್ಲಿ. ಈ ಸಿನಿಮಾ ಅಕೀರಾ ಕುರುಸೋವಾ ಅವರ ಸಾಮುರಾಯಿ ಸಿನಿಮಾದಿಂದ ಪ್ರೇರಣೆ ಪಡೆದಿದೆ. ಗಂಡುಗಲಿ (ಶಂಕರ್ ನಾಗ್) ಎನ್ನುವವನು ಒಬ್ಬ ಕೂಲಿ ಸೈನಿಕನಾಗಿದ್ದು, ಗಾಯಗೊಂಡ ಇಬ್ಬರು ಶತ್ರು ಸೈನಿಕರನ್ನು ರಕ್ಷಿಸಿ ಅವರ ಮುಖ್ಯಸ್ಥನ ಬಳಿಗೆ ಕರೆದೊಯ್ಯಲಾಗುತ್ತದೆ. ಮುಖ್ಯಸ್ಥನು ತನ್ನ ಶತ್ರುವಿನ ವಿರುದ್ಧ ಹೋರಾಡಲು ತನ್ನ ಸೈನಿಕರಿಗೆ ತರಬೇತಿ ನೀಡಲು ಅವನನ್ನು ನೇಮಿಸಿಕೊಳ್ಳುತ್ತಾನೆ. ಮುಂದೆ ಏನಾಗುತ್ತೆ ಅನ್ನೋದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.
ನಾಗರಹಾವು
ಇದು ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ. ಈ ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ವಿಷ್ಣುವರ್ಧನ್ ಅವರು ರಾಮಾಚಾರಿ ಪಾತ್ರದಲ್ಲಿ ನಟಿಸಿದ್ದರು. ಪುಟ್ಟಯ್ಯ ಕಣಗಲ್ ನಿರ್ದೇಶನದ ಸಿನಿಮಾದಲ್ಲಿ ಅಶ್ವಥ್ ಅವರು ಚಾಮಯ್ಯ ಮೇಷ್ಟ್ರಾಗಿ, ರಾಮಾಚಾರಿ ಪ್ರೀತಿಯ ಶಿಕ್ಷಕನಾಗಿ ನಟಿಸಿದ್ದರು. ರಾಮಾಚಾರಿ ಜೀವನದಲ್ಲಿ ಅಲಮೇಲು ಮತ್ತು ಮಾರ್ಗರೇಟ್ ಎನ್ನುವ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಚಿತ್ರದ ಕಥೆ.
ಚೋಮನದುಡಿ
ಬಿ.ವಿ. ಕಾರಂತರು ನಿರ್ದೇಶನ ಮಾಡಿರುವ ಎಂ.ವಿ ವಾಸುದೇವ ರಾವ್ ಚೋಮನ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ಈ ಸಿನಿಮಾದ ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಸ್ವಂತ ಭೂಮಿಯಲ್ಲಿ ಉಳುಮೆ ಮಾಡಲು ಕನಸು ಕಾಡುವ ಹಿಂದುಳಿದ ಅಸ್ಪ್ರಷ್ಯ ಜಾತಿಯ ಚೋಮನ ಕಥೆ ಇದು.
ಕಾಡು
ಅಮರೀಶ್ ಪುರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ್ದಾರೆ. ಊರ ನಾಯಕನ ಅವಿವಾಹಿತ ಸಂಬಂಧ, ವಾಮಾಚಾರ ಮತ್ತು ಕಾಡಿನ ಕುರಿತಾದ ಕತೆಯನ್ನು ಈ ಸಿನಿಮಾ ಬಹಳ ಸುಂದರವಾಗಿ ಕಟ್ಟಿಕೊಟ್ಟಿದೆ.