MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಕೆರಾಡಿ ಸರ್ಕಾರಿ ಶಾಲೆಯಲ್ಲಿ ಕುಟುಂಬದ ಜೊತೆ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ರಿಷಬ್ ಶೆಟ್ಟಿ

ಕೆರಾಡಿ ಸರ್ಕಾರಿ ಶಾಲೆಯಲ್ಲಿ ಕುಟುಂಬದ ಜೊತೆ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ರಿಷಬ್ ಶೆಟ್ಟಿ

ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟೂರು ಕೆರಾಡಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸಮೇತ ಸ್ವಾಂತಂತ್ರ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. 

2 Min read
Pavna Das
Published : Aug 15 2025, 04:36 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Instagram

ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ದೇಶಭಕ್ತಿಯು ಮೊಳಗುತ್ತಿದೆ. ಸೆಲೆಬ್ರಿಟಿಗಳು ಸಹ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ.

210
Image Credit : Instagram

ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಭಿನ್ನವಾಗಿ ತಮ್ಮ ಕುಟುಂಬದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Related Articles

Related image1
Rishab Shetty's New Movie: ಪ್ರಖ್ಯಾತ ತೆಲುಗು ನಿರ್ಮಾಣ ಸಂಸ್ಥೆ ಜೊತೆ ರಿಷಬ್‌ ಶೆಟ್ಟಿ ಸಿನಿಮಾ ಮಾಡೋದು ಫಿಕ್ಸ್!
Related image2
Now Playing
Actor Rishab Shetty: ಮರಾಠಿ ದೊರೆ ಒಂದೇ ಅಲ್ಲ, ಶ್ರೀಕೃಷ್ಣ ದೇವರಾಯರ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ
310
Image Credit : Instagram

ರಿಷಬ್ ತಮ್ಮ ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ತಮ್ಮ ಕುಟುಂಬದ ಜೊತೆಯಾಗಿ ತೆರಳಿ, ಅಲ್ಲಿ ಮಕ್ಕಳ ಜೊತೆಗೆ ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.

410
Image Credit : Instagram

ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ನಟ ನನ್ನ ಕುಟುಂಬದೊಂದಿಗೆ ನಮ್ಮೂರಿನ ಕೆರಾಡಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ. ಈ ಪುಟಾಣಿಗಳ ಭವಿಷ್ಯವೇ ನಮ್ಮ ಭಾರತದ ಭವಿಷ್ಯ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಎಂದಿದ್ದಾರೆ.

510
Image Credit : Instagram

ರಿಷಬ್ ಶೆಟ್ಟಿ ಧ್ವಜಾರೋಹಣ ಮಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪತ್ನಿ ಪ್ರಗತಿ ಶೆಟ್ಟಿ ಕೂಡ ಜೊತೆಯಾಗಿದ್ದು, ಅವರು ಕೂಡ ಶಾಲಾ ಮಕ್ಕಳ ಜೊತೆ ಮಾತನಾಡಿ ಶುಭ ಕೋರಿದ್ದಾರೆ.

610
Image Credit : Instagram

ಇನ್ನು ರಿಷಬ್ ಹಾಗೂ ಪ್ರಗತಿ ಅವರ ಮಕ್ಕಳಾದ ರನ್ವಿತ್ ಮತ್ತು ರಾಧ್ಯಾ ಕೂಡ ಶಾಲೆಯ ಮಕ್ಕಳೊಂದಿಗೆ ಬೆರೆತು, ತಾವು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಗುಲಾಬಿ ಹೂವು ಹಿಡಿದು ಸಂಭ್ರಮಿಸಿದ್ದಾರೆ.

710
Image Credit : Instagram

ತಮ್ಮ ಹುಟ್ಟೂರಿನ ಕುರಿತು ಅಪಾರ ಅಭಿಮಾನವುಳ್ಳ ರಿಷಬ್ ಶೆಟ್ಟಿ ಕೆಲವು ವರ್ಷಗಳ ಹಿಂದೆ ಕೆರಾಡಿಯ ಈ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪಡೆದಿದ್ದರು. ಸದ್ಯ ಈ ಶಾಲೆ ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ನಡೆಯುತ್ತಿದೆ.

810
Image Credit : Instagram

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಉಳಿವಿನ ಬಗ್ಗೆ ಮಾತನಾಡಿದ ರಿಷಬ್ ನಿಜವಾಗಿಯೂ ತಮ್ಮೂರಿನಲ್ಲಿ ಕನ್ನಡ ಶಾಲೆಯನ್ನು ಉಳಿಸಿದ್ದಾರೆ. ಸಾಮಾಜಿಕ ಕೆಲಸಗಳಿಗಾಗಿ ರಿಷಬ್​ ಶೆಟ್ಟಿ ತಮ್ಮದೇ ‘ರಿಷಬ್​ ಶೆಟ್ಟಿ ಫೌಂಡೇಶನ್​’ ಆರಂಭಿಸಿದ್ದು, ಆ ಮೂಲಕ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.

910
Image Credit : Instagram

ಇನ್ನೊಂದೆಡೆ ರಿಷಭ್ ಶೆಟ್ಟಿ ಇತ್ತೀಚೆಗಷ್ಟೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದು, ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾದ ಮೇಕಿಂಗ್ ವಿಡಿಯೋ ಇತ್ತೀಚೆಗೆ ರಿಲೀಸ್ ಆಗಿದ್ದು, ಭರ್ಜರಿ ಸೆಟ್ಟಿಂಗ್ ನೋಡಿ, ಸಿನಿಮಾ ಬ್ಲಾಕ್ ಬಸ್ಟರ್ ಗ್ಯಾರಂಟಿ ಎಂದಿದ್ದಾರೆ ಜನ.

1010
Image Credit : Instagram

ರಿಷಬ್ ಶೆಟ್ಟಿ ಸದ್ಯ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದು, ತೆಲುಗಿನಲ್ಲಿ ಹನುಮಾನ್, ಛತ್ರಪತಿ ಶಿವಾಜಿ ಸಿನಿಮಾದಲ್ಲು ನಟಿಸಲಿದ್ದಾರೆ. ಅಷ್ಟೇ ಅಲ್ಲ ಶ್ರೀಕೃಷ್ಣದೇವರಾಯನ ಪಾತ್ರದಲ್ಲೂ ಕಾಣಿಸಲಿದ್ದಾರೆ ಎಂಬ ವದಂತಿ ಇದೆ. ಇದಲ್ಲದೇ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲೂ ರಿಷಬ್ ನಾಯಕನಾಗಿ ನಟಿಸಲಿದ್ದಾರೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಿಷಬ್ ಶೆಟ್ಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved