- Home
- Entertainment
- Sandalwood
- ಅಕ್ರಮ ಶೋಧ ಮತ್ತು ಅಪಾಯಕಾರಿ ಥ್ರಿಲ್ಲರ್... ಜುಗಾರಿ ಕ್ರಾಸ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಹೀರೋ
ಅಕ್ರಮ ಶೋಧ ಮತ್ತು ಅಪಾಯಕಾರಿ ಥ್ರಿಲ್ಲರ್... ಜುಗಾರಿ ಕ್ರಾಸ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಹೀರೋ
ಜುಗಾರಿ ಕ್ರಾಸ್ ಜನಪ್ರಿಯ ಕಾದಂಬರಿ ಆಧರಿತ ಸಿನಿಮಾಕ್ಕೆ ರಾಜ್ ಬಿ ಶೆಟ್ಟಿ ನಾಯಕ. ಕಾದಂಬರಿಯ ನಾಯಕ ಸುರೇಶನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುರುದತ್ತ ಗಾಣಿಗ ಈ ಚಿತ್ರದ ನಿರ್ದೇಶಕರು.

ಜನಪ್ರಿಯ ಪತ್ತೇದಾರಿ ಕಾದಂಬರಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಪತ್ತೇದಾರಿ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾ ರೂಪ ಪಡೆಯುತ್ತಿದೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಭಾರಿ ಸದ್ದು ಮಾಡಿತ್ತು.
ಸುರೇಶನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ
ಈ ಜನಪ್ರಿಯ ಕಾದಂಬರಿ ಆಧರಿತ ಸಿನಿಮಾಕ್ಕೆ ರಾಜ್ ಬಿ ಶೆಟ್ಟಿ ನಾಯಕ. ಕಾದಂಬರಿಯ ನಾಯಕ ಸುರೇಶನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುರುದತ್ತ ಗಾಣಿಗ ಈ ಚಿತ್ರದ ನಿರ್ದೇಶಕರು.
ಸಿನಿಮಾದ ಟೀಸರ್ ಬಿಡುಗಡೆ
ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾದ ಬಳಿಕ ರಾಜ್ ಬಿ. ಶೆಟ್ಟಿ ಮತ್ತು ಗುರುದತ್ತ ಗಾಣಿಗ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಸದ್ಯ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ನಿಗೂಢತೆ ಎಲ್ಲೂ ಮಿಸ್ ಆಗಲ್ಲ
ತೇಜಸ್ವಿ ಕಾದಂಬರಿಯನ್ನು ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಕೊಂಚ ಬದಲಿಸಿದ್ದೇವೆ. ಆದರೆ ಮೂಲಲೇಖಕರು ಕಟ್ಟಿಕೊಟ್ಟ ನಿಗೂಢತೆ ಎಲ್ಲೂ ಮಿಸ್ ಆಗಲ್ಲ.
ಸಿನಿಮ್ಯಾಟಿಕ್ ಅನುಭವ
ಪಶ್ಚಿಮ ಘಟ್ಟಗಳ ರುದ್ರರಮಣೀಯ ಪ್ರಕೃತಿಯ ನಡುವೆ ಹುದುಗಿರುವ ಕೆಂಪು ವಜ್ರದ ಅಕ್ರಮ ಶೋಧ ಮತ್ತದರ ಹಿಂದಿನ ಅಪಾಯಕಾರಿ ಥ್ರಿಲ್ಲಿಂಗ್ ಅಂಶಗಳು ಸಿನಿಮ್ಯಾಟಿಕ್ ಅನುಭವವನ್ನು ಗಾಢವಾಗಿಸುತ್ತವೆ ಎಂದಿದ್ದಾರೆ ಗುರುದತ್ ಗಾಣಿಗ.
ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ
ಜುಗಾರಿ ಕ್ರಾಸ್ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತವಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂಬರುವ ವಾರಗಳಲ್ಲಿ ತಾರಾಗಣದ ಬಗ್ಗೆ ಪ್ರಕಟಣೆಗಳನ್ನು ನಿರೀಕ್ಷಿಸಲಾಗಿದೆ.