ಸಿಂಪಲ್ ಲವ್ ಸ್ಟೋರಿ ಮೂಲಕ ಸ್ಯಾಂಡವುಡ್ ಗೆ ಕಾಲಿಟ್ಟ ರಾಧಾ ಕೃಷ್ಣ ಖ್ಯಾತಿಯ ಮಲ್ಲಿಕಾ
ಹಿಂದಿಯ ಡಬ್ ಆದರೂ ಕನ್ನಡ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿ, ಪ್ರೇಕ್ಷಕರನ್ನು ರಂಜಿಸಿದ ಸೀರಿಯಲ್ ರಾಧಾ ಕೃಷ್ಣ. ಈ ಸೀರಿಯಲ್ ನಲ್ಲಿ ರಾಧೆಯಾಗಿ ಮಿಂಚಿದ ಮಲ್ಲಿಕಾ ಸಿಂಗ್ ಇದೀಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕೃಷ್ಣ ಸೀರಿಯಲ್ (Radha Krishna Serial) ಮರೆಯೋದು ಅಸಾಧ್ಯ ಅಲ್ವಾ? ಕೃಷ್ಣನ ತುಂಟಾಟ, ಕೃಷ್ಣ ರಾಧಾರ ನಿಷ್ಕಲ್ಮಶ ಪ್ರೀತಿ, ಜೊತೆಗೆ ಆ ಪಾತ್ರಧಾರಿಗಳ ಮುಗ್ಧ ನಟನೆ ಎಲ್ಲವೂ ಜನಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಿಂದಿಯ ಡಬ್ಬಿಂಗ್ ಸೀರಿಯಲ್ ಆದರೂ ಕನ್ನಡ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದ ಸೀರಿಯಲ್ ಇದಾಗಿತ್ತು.
ಸೀರಿಯಲ್ ನೋಡಿರೋರೆಲ್ಲಾ ರಾಧಾ ಮುಗ್ಧ ಅಭಿನಯ, ಸೌಂದರ್ಯಕ್ಕೆ ಮನಸೋಲದೆ ಇರಲಾರದು. ಇದೀಗಾ ರಾಧಾ ಪಾತ್ರದಲ್ಲಿ ಕನ್ನಡಿಗರ ಮನಗೆದ್ದ ಮಲ್ಲಿಕಾ ಸಿಂಗ್ ಒಂದು ಸರಳ ಪ್ರೇಮಕಥೆ ಮೂಲಕ ಸ್ಯಾಂಡಲ್ ವುಡ್ ಗೆ (Sandalwood) ಎಂಟ್ರಿ ಕೊಡ್ತಿದ್ದಾರೆ.
ಹೌದು ರಾಧಾ ಕೃಷ್ಣ ಖ್ಯಾತಿಯ ಮಲ್ಲಿಕಾ ಸಿಂಗ್ (Mallika Singh) ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸಿಂಪಲ್ ಸುನಿ (Simple Suni) ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ.
ಮಲ್ಲಿಕಾ ಸಿಂಗ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಪಾತ್ರ ಮತ್ತು ಪಾತ್ರದ ಹಿನ್ನೆಲೆಯನ್ನು ಪರಿಚಯಿಸುವಂತಹ ವಿಡಿಯೋ ಮತ್ತು ಫಸ್ಟ್ ಲುಕ್ ನ್ನು (First look) ಚಿತ್ರತಂಡ ರಿಲೀಸ್ ಮಾಡಿದೆ. ಈ ಸಿನಿಮಾದಲ್ಲಿ ಮಲ್ಲಿಕಾ ಮಧುರಾ ಹೆಸರಿನ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಬ್ಬರು ಮಲ್ಲಿಕಾ ಸಿಂಗ್, ಮತ್ತೊಬ್ಬರು ಸ್ವಾತಿಷ್ಠ ಕೃಷ್ಣನ್. ಸಿನಿಮಾದಲ್ಲಿ ಮಲ್ಲಿಕಾ ಸಿಂಗರ್ ಆಗಿದ್ದರೆ, ಸ್ವಾತಿಷ್ಠ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ (Vinay Rajkumar) ಅತಿಶಯ್ ಎಂಬ ಸಂಗೀತ ನಿರ್ದೇಶಕನ ಪಾತ್ರದಲ್ಲಿ ನಟಿಸಲಿದ್ದಾರೆ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಎನ್ನುವ ಕನಸು ಹೊಂದಿರುವ ವ್ಯಕ್ತಿಯ ಕಥೆ ಇದಾಗಿದೆ. ಸಿಂಪಲ್ ಸುನಿ ನಿರ್ದೇಶನದ ಈ ಸಿಂಪಲ್ ಪ್ರೇಮಕಥೆ ಹೇಗಿರಲಿದೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ.
ಮಲ್ಲಿಕಾ ಸಿಂಗ್ ಟಿವಿ ಸೀರಿಯಲ್ ಮತ್ತು ವೆಬ್ ಸೀರೀಸ್ ಗಳಲ್ಲಿ ಇದುವರೆಗೆ ನಟಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಟಿ ಜನ್ ಬಾಜ್ ಜಿಂದಾಬಾದ್, ರಾಧಾ ಕೃಷ್ಣ ಮತ್ತು ಜೈ ಕನ್ಹಯ್ಯಾ ಲಾಲ್ ಕೀ ಸೀರಿಯಲ್ ಗಳಲ್ಲಿ ಮತ್ತು ಎಸ್ಕೇಪ್ ಲೈವ್ ಎನ್ನುವ ವೆಬ್ ಸೀರೀಸ್ ನಲ್ಲೂ (web series) ನಟಿಸಿದ್ದರು.