- Home
- Entertainment
- Sandalwood
- Kothalavadi ನಾಯಕಿ ಕಾವ್ಯಾಳನ್ನು ನಮ್ಗೇ ಕೊಟ್ಬಿಡಿ ಎಂದ ಯಶ್ ಅಮ್ಮ: ವಿಡಿಯೋ ವೈರಲ್
Kothalavadi ನಾಯಕಿ ಕಾವ್ಯಾಳನ್ನು ನಮ್ಗೇ ಕೊಟ್ಬಿಡಿ ಎಂದ ಯಶ್ ಅಮ್ಮ: ವಿಡಿಯೋ ವೈರಲ್
ಕೊತ್ತಲವಾಡಿ ನಾಯಕಿಯನ್ನು ನಮ್ಗೇ ಕೊಟ್ಬಿಡಿ ಎಂದ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಅವರು ಕಾವ್ಯಾ ತಾಯಿಯ ಬಳಿ ಹೇಳ್ತಿರೋ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಏನಿದೆ ನೋಡಿ...

ಭೂಮಿ ತಾಯಾಣೆ ಮೂಲಕ ಪದಾರ್ಪಣೆ
'ಭೂಮಿ ತಾಯಾಣೆ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿ ಸೈ ಎನ್ನಿಸಿಕೊಂಡವರು ನಟಿ ಕಾವ್ಯಾ ಶೈವ. (Kavya Shaivas) ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ 'ಸುಮನಾ' ಪಾತ್ರದಲ್ಲಿ ಜನಮನ ಸೂರೆಗೊಂಡಿದ್ದರೂ, ಅರ್ಧದಲ್ಲಿಯೇ ಸೀರಿಯಲ್ ಬಿಟ್ಟು ವೀಕ್ಷಕರನ್ನು ನಿರಾಸೆಗೊಳಿಸಿದ್ದರು. ಗ್ರಾಮವೊಂದರ ಹುಡುಗಿ, ರಾಜಕೀಯದಲ್ಲಿ ಮಿಂಚಲು ರೆಡಿಯಾಗಲಿರುವ ವ್ಯಕ್ತಿಯನ್ನು ಮದುವೆಯಾಗಿ, ಅವರ ಮನೆಯಲ್ಲಿ ಅನುಭವಿಸುವ ನೋವು, ತಮ್ಮನ ಸಾವಿನ ಪ್ರತಿಕಾರ ಇವೆಲ್ಲವನ್ನೂ ಕಾವ್ಯ ಅದ್ಭುತವಾಗಿ ನಿರ್ವಹಿಸಿದ್ದರು. ಇದಕ್ಕೆ ಸೂಕ್ತ ಕಾರಣವೂ ತಿಳಿದಿರಲಿಲ್ಲ.
ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ನಟಿ
ಕೊನೆಗೆ ಅವರು ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ಕಾಣಿಸಿಕೊಂಡರು. ಆದರೆ, ಕೆಂಡಸಂಪಿಗೆ ಸೀರಿಯಲ್ ಯಾಕೆ ಬಿಟ್ಟೆ ಎನ್ನುವ ಕಾರಣ ಅಲ್ಲಿಯೂ ಸರಿಯಾಗಿ ಕೊಟ್ಟಿರಲಿಲ್ಲ. ಕಾರಣಾಂತರಗಳಿಂದಲೇ ಹೊರಗೆ ಬಂದೆ ಅಂತಷ್ಟೇ ತಿಳಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್
ಆದರೆ ಅದಾದ ಬಳಿಕ ನಟಿ ಸೋಷಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿದ್ದು, ಒಂದಲ್ಲ ಒಂದು ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಇದರಿಂದ ಅವರು ನಟ ಯಶ್ ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರ ನಿರ್ಮಾಣದ ಪೃಥ್ವಿ ಅಂಬಾರ್ ನಾಯಕರಾದ 'ಕೊತ್ತಲವಾಡಿ' ಸಿನಿಮಾದಲ್ಲಿ ನಟಿಯಾದರು. ಕುತೂಹಲದ ಸಂಗತಿ ಏನೆಂದರೆ, 'ಕೊತ್ತಲವಾಡಿ' ಚಿತ್ರದ ಚಿತ್ರೀಕರಣ ಮುಗಿಯುವವರೆಗೂ ಪುಷ್ಪಾ ಅವರ ಬಗ್ಗೆ ನಟಿಗೆ ಗೊತ್ತಿರಲಿಲ್ಲವಂತೆ. ಈ ಬಗ್ಗೆ ಹಿಂದೆಯೂ ಅವರು ಮಾತನಾಡಿದ್ದರು. "ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರೇ ನಮ್ಮ ಸಿನಿಮಾ ನಿರ್ಮಾಪಕರು ಅನ್ನೋದು ನನಗೆ ಗೊತ್ತಿರಲಿಲ್ಲ. ನಮಗೆ ಶೂಟಿಂಗ್ ಮುಗಿದಮೇಲೆಯೇ ಗೊತ್ತಾಗಿದ್ದು ಎಂದಿದ್ದರು.
ಯಶ್ ಅಮ್ಮನಿಂದ ಡಿಮಾಂಡ್
ಇದೀಗ ಕಾವ್ಯಾ ಶೈವ ಅವರ ಅಮ್ಮನ ಜೊತೆ ಚಿಟ್ಚಾಟ್ ಮಾಡುತ್ತಾ ಪುಷ್ಪಾ ಅವರು, ನಿಮ್ಮ ಮಗಳು ಕಾವ್ಯಾರನ್ನು ನಮಗೇ ಕೊಟ್ಟುಬಿಡಿ. ನಾವೇ ಸಾಕ್ತೇವೆ ಎಂದು ತಮಾಷೆಗೆ ಹೇಳಿರುವ ವಿಡಿಯೋ ವೈರಲ್ ಆಗ್ತಿದೆ.
ಕೊತ್ತಲವಾಡಿ ಬಗ್ಗೆ ಕಾವ್ಯಾ ಶೈವ
ಕಾವ್ಯಾ ಅವರ ಅಮ್ಮ ಕೂಡ ಕರೆದುಕೊಂಡು ಹೋಗಿ ಎಂದಿರೋದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇದನ್ನು ಯಶ್ಟಾಕೀಸ್ ಇನ್ಸ್ಟಾಗ್ರಾಮ್ ಪುಟದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಕೊತ್ತಲವಾಡಿ ಬಗ್ಗೆ ಕಾವ್ಯಾ ಶೈವ
ಇನ್ನು ನಟಿ ಕಾವ್ಯಾ ಅವರು ಈ ಹಿಂದೆ, ಕೊತ್ತಲವಾಡಿ ಸಿನಿಮಾದ ಬಗ್ಗೆ ಮಾತನಾಡುತ್ತಾ, "ಯಶ್ ಅವರ ಅಮ್ಮನೇ ನಮ್ಮ ಸಿನಿಮಾ ನಿರ್ಮಾಪಕರು ಅನ್ನೋದು ನನಗೆ ಗೊತ್ತಿರಲಿಲ್ಲ ಎಂದಿದ್ದರು. ಆಮೇಲೆ ಬ್ಯಾಂಕ್ನಿಂದ ಪೇಮೆಂಟ್ ಬಂದ ಮೇಲೆ, ವಿಷಯ ಗೊತ್ತಾಗಿದ್ದು ಎಂದಿದ್ದರು.
ಕೊತ್ತಲವಾಡಿ ಸಿನಿಮಾ ನಾಯಕಿ ಕಾವ್ಯಾ
ಸಿನಿಮಾ ಶೂಟಿಂಗ್, ಡಬ್ಬಿಂಗ್ ಎಲ್ಲಾ ಮುಗಿದ ಮೇಲಷ್ಟೇ ನನಗೆ ಪುಷ್ಪಾ ಅರುಣ್ ಕುಮಾರ್ ಅವರನ್ನು ಮೀಟ್ ಮಾಡಲು ಸಾಧ್ಯವಾಗಿತ್ತು. ಸಿನಿಮಾ ಎಲ್ಲಾ ಮುಗಿದಮೇಲೆ ಪ್ರಚಾರ ಮಾಡುವುದು ಇರುತ್ತಲ್ಲ, ಆ ಸಂದರ್ಭದಲ್ಲಿ ಅವರು ಸಿಕ್ಕಿದ್ದು ಎಂದಿದ್ದರು.