- Home
- Entertainment
- Sandalwood
- Sorry ಮತ್ತು Thank You ಪದ ಪವರ್‌ಫುಲ್ ಆದರೆ ಬೇಕಾಬಿಟ್ಟಿ ಬಳಸುತ್ತಿದ್ದಾರೆ: ನಟಿ ರಾಗಿಣಿ ದ್ವಿವೇದಿ
Sorry ಮತ್ತು Thank You ಪದ ಪವರ್‌ಫುಲ್ ಆದರೆ ಬೇಕಾಬಿಟ್ಟಿ ಬಳಸುತ್ತಿದ್ದಾರೆ: ನಟಿ ರಾಗಿಣಿ ದ್ವಿವೇದಿ
ಸಾರಿ: ಕರ್ಮ ರಿಟರ್ನ್ಸ್ ಸಿನಿಮಾದಲ್ಲಿ ತುಪ್ಪದ ಹುಡುಗಿ ನಾಯಕಿ. ಸಾರಿ ಮತ್ತು ಥ್ಯಾಂಕ್ಸ್ ಪದ ಮಹತ್ವ ಸಾರಲು ಮುಂದಾದ ರಾಗಿಣಿ..

ಕನ್ನಡ ಚಿತ್ರರಂಗದ ಮುದ್ಧು ಮುಖದ ಚೆಲುವೆ ರಾಗಿಣಿ ದ್ವಿವೇದಿ. ಬ್ರಹ್ಮ ನಿರ್ದೇಶನ ಮಾಡುತ್ತಿರುವ ಬಹುಭಾಷಾ ಸಾರಿ: ಕರ್ಮ ರಿಟರ್ನ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
'ಸಿನಿಮಾ ಬಗ್ಗೆ ಮಾತನಾಡಿದರೆ ಇದು ಕಾಮಿಡಿ, ಮರ್ಡರ್ ಮಿಸ್ಟರಿ, ರೊಮ್ಯಾನ್ಸ್ ಮತ್ತು ಹಾರರ್ ಎಲ್ಲವೂ ಹೊಂದಿದೆ. ಈ ಸಿನಿಮಾ ಅನೇಕ ವಿಚಾರಗಳನ್ನು ಕವರ್ ಮಾಡುತ್ತದೆ' ಎಂದು ಬೆಂಗಳೂರು ಟೈಮ್ಸ್ ಜೊತೆ ರಾಗಿಣಿ ಮಾತನಾಡಿದ್ದಾರೆ.
'ಸೂಪರ್ ನ್ಯಾಚುರಲ್ ಸೂಪರ್ ಹೀರೋ ಸಿನಿಮಾ ಇದಾಗಿದ್ದು, ಪೊಡಕ್ಷನ್ ಕೆಲಸಗಳು ಆರಂಭವಾಗಿದೆ. ಸಿನಿಮಾನ ಇಂಗ್ಲಿಷ್‌ನಲ್ಲೂ ಬಿಡುಗಡೆ ಮಾಡುವ ಪ್ಲ್ಯಾನಿಂಗ್ ನಡೆಯುತ್ತಿದೆ'
'ಸಿನಿಮಾದ ಟೈಟಲ್ ಇಂಟ್ರೆಸ್ಟಿಂಗ್ ಆಗಿದೆ. my belief in karma drew me to the film. ನನ್ನ ನಂಬಿಕೆಗಳ ಪ್ರಕಾರ ಸಾರಿ ಮತ್ತು ಥ್ಯಾಂಕ್ ಯು ತುಂಬಾನೇ ಪವರ್‌ಫುಲ್'
'90% ಜನರು ಈ ಪದವನ್ನು ಸರಿಯಾಗಿ ಬಳಸುವುದಿಲ್ಲ. ಕರ್ಮಾ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ನಾನು ತಿಳಿದುಕೊಂಡಿರುವುದು ಭಗವತ್ ಗೀತಾ ಓದಿದ ಮೇಲೆ' ಎಂದು ರಾಗಿಣಿ ಹೇಳಿದ್ದಾರೆ.
'ನಾನು ನೇರನುಡಿಯ ವ್ಯಕ್ತಿ ನನ್ನ ತಪ್ಪಿದ್ದರೆ ನಾನು ಸಾರಿ (Sorry) ಕೇಳುತ್ತೀನಿ ಒಂದು ಸೆಕೆಂಡ್ ಕೂಡ ಯೋಚನೆ ಮಾಡುವುದಿಲ್ಲ'
'ಆದರೆ ಇತ್ತೀಚಿನ ದಿನಗಳಲ್ಲಿ ನಾನು ತುಂಬಾ ನರಳುವಂತೆ ಮಾಡಿರುವ ವ್ಯಕ್ತಿಗಳಯ ಕ್ಷಮೆ ಕೇಳಿಲ್ಲ ಅದಕ್ಕೆ ಯಾರು ಕ್ಷಮೆ ಕೇಳುತ್ತಾರೆ' ಎಂದಿದ್ದಾರೆ ರಾಗಿಣಿ.