ನಟಿಸೋದಕ್ಕೂ ಸೈ… ನಿರ್ದೇಶನಕ್ಕೂ ಜೈ… ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕನ್ನಡಿಗರು
ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಿರ್ದೇಶಕರು ನಟರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಅವರಲ್ಲಿ ಪ್ರಮುಖ ನಟ-ನಿರ್ದೇಶಕರ ಬಗ್ಗೆ ಮಾಹಿತಿ ಇಲ್ಲಿದೆ. ಇವರು ನಟರಾಗಿ ಮತ್ತು ನಿರ್ದೇಶಕರಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಗೆದ್ದವರು.

ನಟ-ನಿರ್ದೇಶಕರಾಗಿ ಗೆದ್ದವರು
ಕನ್ನಡ ಚಿತ್ರರಂಗದಲ್ಲಿ ದಿಗ್ಗಜ ನಟರಿದ್ದಾರೆ. ಆದರಲ್ಲಿ ನಟರಾಗಿ ಹಾಗೂ ನಿರ್ದೇಶಕರಾಗಿ ಗೆದ್ದವರು ಹಲವರು. ಅವರಲ್ಲಿ ಟಾಪ್ ಸ್ಟಾರ್ ಗಳ ಬಗ್ಗೆ ವಿವರ ಇಲ್ಲಿದೆ. ಕನ್ನಡ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದವರು ಇವರು.
ಗಿರೀಶ್ ಕಾರ್ನಾಡ್
ಕನ್ನಡ, ಇಂಗ್ಲಿಷ್, ಸಾಹಿತಿ, ನಟ, ನಿರ್ದೇಶಕರಾಗಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು ಗಿರೀಶ್ ಕಾರ್ನಾಡ್. ನಟನೆಗೆ ನಿಂತರೆ ಅಬ್ಬಬ್ಬ ಎನ್ನುವಂತಹ ನಟನೆ, ಇವರು ನಿರ್ದೇಶನ ಮಾಡಿದ ವಂಶವೃಕ್ಷ, ಕಾಡು, ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ ಸಿನಿಮಾಗಳು ಅಮೋಘವಾಗಿದೆ.
ಶಂಕರ್ ನಾಗ್
ಶಂಕರ್ ನಾಗ್ ರಂತಹ ಮೇರು ನಟ, ನಿರ್ದೇಶಕ ಮತ್ತೆ ಹುಟ್ಟಿ ಬರೋದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಇದ್ದವರು. ಬದುಕಿದ್ದು, 35 ವರ್ಷಗಳಷ್ಟೇ ಆದರು, ಅವರು ನಟಿಸಿ, ನಿರ್ದೇಶನ ಮಾಡಿದ ಸಿನಿಮಾಗಳು ಇಂದಿಗೂ ಜನಮನದಲ್ಲಿ ಉಳಿಯುವಂತದ್ದು. ಶಂಕರ್ ನಾಗ್ ನಿರ್ದೇಶನದ ಮಿಂಚಿನ ಓಟ, ಗೀತಾ, ಆಕ್ಸಿಡೆಂಟ್, ಒಂದು ಮುತ್ತಿನ ಕಥೆ ಎಂತಹಾ ಸಿನಿಮಾಗಳು.
ಕಾಶಿನಾಥ್
ಕನ್ನಡ ಚಿತ್ರರಂಗಕ್ಕೆ ಹೊಸತನದ ಕಥೆಯನ್ನು ಪರಿಚಯಿಸಿದವರು ಕಾಶಿನಾಥ್. ನಟನಾಗಿ ಕಾಮಿಡಿ ಪಾತ್ರಗಳ ಮೂಲಕ ನಗಿಸಿದ ಇವರು, ನಿರ್ದೇಶಕರಾಗಿ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅಪರಿಚಿತ, ಅನುಭವ, ಅನಂತನ ಅವತಾರ, ಅಜಗಜಾಂತರ, ಇವೆಲ್ಲಾ ಕಾಶಿನಾಥ್ ಅವರ ಮಾಸ್ಟರ್ ಪೀಸ್ ಗಳು.
ಉಪೇಂದ್ರ
ಉಪೇಂದ್ರ ಅವರು ಕಾಶಿನಾಥ್ ರ ಪಕ್ಕಾ ಶಿಷ್ಯರು. ಜನ ಉಪೇಂದ್ರ ನಟನೆಯನ್ನು ತುಂಬಾನೆ ಇಷ್ಟಪಡುತ್ತಾರೆ. ಆದರೆ ನಿರ್ದೇಶಕನಾಗಿ ಉಪೇಂದ್ರಾಗೆ ಫ್ಯಾನ್ಸ್ ಜಾಸ್ತಿನೆ ಇದ್ದಾರೆ. ತರ್ಲೆ ನನ್ ಮಗ, ಶ್, ಓಂ, ಎ, ಉಪೇಂದ್ರ,H2O, ಸೂಪರ್ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಜನಮನ ಗೆದ್ದಿದ್ದಾರೆ ಈ ನಟ.
ರವಿಚಂದ್ರನ್
ರವಿಚಂದ್ರನ್ ಅಂದ್ರೆ ಸಿನಿಮಾ ಪ್ರೇಮಿ. ಅವರು ಸಿನಿಮಾಗಾಗಿ ಏನು ಬೇಕಾದರು ಮಾಡೋದಕ್ಕೆ ತಯಾರಿರುವಂತವರು. ನಟನಾಗಿ- ನಿರ್ದೇಶಕನಾಗಿ ಎರಡರಲ್ಲೂ ಇವರು ಗೆದ್ದಿದ್ದಾರೆ. ಪ್ರೇಮ ಲೋಕ, ರಣಧೀರ, ಕಿಂದರಿ ಜೋಗಿ, ಶಾಂತಿಕ್ರಾಂತಿ, ಹಳ್ಳಿ ಮೇಷ್ಟ್ರು, ಸಿಪಾಯಿ, ಕಲಾವಿದ, ಕ್ರೇಜಿ ಸ್ಟಾರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಮೇಶ್ ಅರವಿಂದ್
ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ಹಾಕುವ ನಾಯಕಿಯರು ಮಿಂಚುವ ಕಾಲದಲ್ಲಿ, ನಾಯಕನ ಪಾತ್ರದ ಮೂಲಕ ಸಿನಿರ್ಸಿಕರು ಕಣ್ಣೀರು ಹಾಕುವಂತೆ ಮಾಡಿದ ಎವರ್ ಗ್ರೀನ್ ನಟ ರಮೇಶ್ ಅರವಿಂದ್. ಸಿನಿಮಾದಲ್ಲಿನ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಇವರು ನಿರ್ದೇಶಕರಾಗಿ ಸಹ ಗೆದ್ದಿದ್ದಾರೆ. ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ಉತ್ತಮ ವಿಲನ್ ಮೊದಲಾದ ಸಿನಿಮಾ ಮೂಲಕ ಜನಮನ ಗೆದ್ದಿದ್ದಾರೆ.
ಎಸ್ ನಾರಾಯಣ್
ಎಸ್ ನಾರಾಯಣ್ ಕೂಡ ನಾಯಕರಾಗಿ ಹಾಗೂ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ನಾಯಕರಾಗಿ ತಮ್ಮ ಕಾಮಿಡಿ ಪಾತ್ರಗಳ ಮೂಲಕ ಮಿಂಚಿದರೆ, ನಿರ್ದೇಶಕರಾಗಿ ಚೈತ್ರದ ಪ್ರೇಮಾಂಜಲಿ, ಅನುರಾಗದ ಅಲೆಗಳು, ವೀರಪ್ಪ ನಾಯ್ಕ, ಸೂರ್ಯವಂಶ, ರವಿಮಾಮ, ಶಬ್ಧವೇದಿ, ಸಿಂಹಾದ್ರಿಯ ಸಿಂಹ, ಚೆಲುವಿನ ಚಿತ್ತಾರ, ವೀರ ಪರಂಪರೆಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ ನಾರಾಯಣ.
ಸುದೀಪ್
ಕಿಚ್ಚ ಸುದೀಪ ತಮ್ಮ ಮಾತು, ನಟನೆ, ನೋಟದ ಮೂಲಕವೇ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡ್ತಾರೆ. ಇನ್ನು ನಿರ್ದೇಶನದಲ್ಲೂ ಇವರು ಸೂಪರ್. ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇ ಗೌಡ, ಮಾಣಿಕ್ಯ, ವೀರಮದಕರಿಯಂತಹ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ಇವರದ್ದು.
ರಿಷಬ್ ಶೆಟ್ಟಿ
ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ. ಇವರು ಕೂಡ ನಟನಾಗಿ ಹಾಗೂ ನಿರ್ದೇಶಕನಾಗಿ ಗೆದ್ದಿದ್ದಾರೆ. ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ 1 ಸಿನಿಮಾ ಮೂಲಕ ಅತ್ಯುತ್ತಮ ನಿರ್ದೇಶಕ ಪಟ್ತವನ್ನೂ ಪಡೆದಿದ್ದಾರೆ.
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ನಟನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಗೆದ್ದಿದ್ದಾರೆ. ಆದರೆ ನಿರ್ದೇಶಕನಾಗಿ ಇವರು ಮಾಡಿದ್ದು ಕೇವಲ ಒಂದು ಸಿನಿಮಾ ಅದು ಉಳಿದವರು ಕಂಡಂತೆ. ಆ ಸಿನಿಮಾ ಮೂಲಕವೇ ರಕ್ಷಿತ್ ಅತ್ಯುತ್ತಮ ನಿರ್ದೇಶಕ ಎನ್ನುವುದನ್ನು ಸಾಬೀತುಪಡಿಸಿದ್ದು, ಇವರು ಸದ್ಯ ತಮ್ಮ ಮುಂದಿನ ಸಿನಿಮಾ ರಿಚರ್ಡ್ ಆಂಟನಿ ಕಥೆ ಬರೆಯೋದರಲ್ಲಿ ಬ್ಯುಸಿಯಾಗಿದ್ದಾರೆ.
ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ನೋಡೊದಕ್ಕೆ ಸಿಂಪಲ್ ಆಗಿ ಕಾಣಿಸಿದರೂ, ಅವರ ನಟನೆ, ನಿರ್ದೇಶನಕ್ಕೆ ಜನ ಫಿದಾ ಆಗಿದ್ದಾರೆ. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಹಾಗೂ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.