- Home
- Entertainment
- Sandalwood
- Actor Doddanna ಕಾಲಿಗೆ ಏನಾಗಿದೆ? 77 ವರ್ಷ ವಯಸ್ಸಿನಲ್ಲಾಗದ ಸತ್ಯದರ್ಶನ 3 ತಿಂಗಳಿನಲ್ಲಿ ಆಯ್ತು ಎಂದ ನಟ
Actor Doddanna ಕಾಲಿಗೆ ಏನಾಗಿದೆ? 77 ವರ್ಷ ವಯಸ್ಸಿನಲ್ಲಾಗದ ಸತ್ಯದರ್ಶನ 3 ತಿಂಗಳಿನಲ್ಲಿ ಆಯ್ತು ಎಂದ ನಟ
Actor Doddanna: ಕನ್ನಡ ಚಿತ್ರರಂಗದಲ್ಲಿ 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದೊಡ್ಡಣ್ಣ ಕಳೆದ ಮೂರು ತಿಂಗಳಿನಿಂದ ಹೊರಗಡೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ವೀಲ್ ಚೇರ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಫ್ರಾಕ್ಚರ್ ಆಯ್ತು
“ಕಳೆದ ಜುಲೈ ತಿಂಗಳಿನಲ್ಲಿ ಜಾರಿ ಬಿದ್ದೆ. ಫ್ರಾಕ್ಚರ್ ಆಯ್ತು, ರಾತ್ರಿ ಫೋನ್ ಮಾಡಿದರೂ ಕೂಡ ಯಾವ ಡಾಕ್ಟರ್ ಕೂಡ ರಿಸೀವ್ ಮಾಡಲಿಲ್ಲ. ಮರುದಿನ ಆಸ್ಪತ್ರೆಗೆ ಹೋದೆ. 4 ಗಂಟೆಗಳ ಕಾಲ ಆಪರೇಶನ್ ಮಾಡಿದರು. ಮರುದಿನ ಸರೋಜಾ ದೇವಿ ಅವರ ನಿಧನದ ವಿಷಯ ತುಂಬ ಬೇಸರ ಆಯ್ತು. ಬಿ ಸರೋಜಾದೇವಿ ಅವರು ಅದೃಷ್ಟವಂತ ನಟಿ. ಅವರಿಗೆ ಅಂಬರೀಶ್ ಕಂಡರೆ ತುಂಬ ಇಷ್ಟ. ಕೊನೆಯದಾಗಿ ನಾನು ಅವರನ್ನು ನೋಡೋಕೆ ಆಗಲಿಲ್ಲ” ಎಂದು ದೊಡ್ಡಣ್ಣ ಹೇಳಿದ್ದಾರೆ.
ನನಗೆ 77 ವರ್ಷ
“ನನಗೆ 77 ವರ್ಷದಲ್ಲಿದ್ದೇನೆ. ಇಷ್ಟು ವರ್ಷದಲ್ಲಿ ಆಗದ ಜ್ಞಾನೋದಯ ಈಗ ಆಯ್ತು. ಕಳೆದ ಮೂರು ತಿಂಗಳಿನಲ್ಲಿ ಸತ್ಯ ದರ್ಶನ ಆಯ್ತು. ನಾನು ಜೀವನದಲ್ಲಿ ಭ್ರಮೆಯಲ್ಲಿ ಬದುಕಿದ್ದೆ. ನಾವು ಚೆನ್ನಾಗಿದ್ದಾಗ ಎಲ್ಲರೂ ಬರುತ್ತಾರೆ, ನಾವು ಮೂಲೆಯಲ್ಲಿದ್ದಾಗ ಯಾರು ಎಷ್ಟು ದಿನ ನೋಡಿಕೊಳ್ತಾರೆ? ನನ್ನ ಹೆಂಡ್ತಿ ನನ್ನನ್ನು ತುಂಬ ಚೆನ್ನಾಗಿ ನೋಡಿಕೊಂಡಳು. ಯಾರಿಗೂ ಹೊರೆಯಾಗದ ಹಾಗೆ ಬದುಕಿ ತೋರಿಸಬೇಕು” ಎಂದು ದೊಡ್ಡಣ್ಣ ಹೇಳಿದ್ದಾರೆ.
ಮೂರು ತಿಂಗಳಿನಿಂದ ಎಲ್ಲೂ ಹೋಗಿಲ್ಲ
“ನಾನು ಕಳೆದ ಮೂರು ತಿಂಗಳಿನಿಂದ ಎಲ್ಲೂ ಹೋಗಿಲ್ಲ. ಯಾವ ಕಾರ್ಯಕ್ರಮವನ್ನು ಅಟೆಂಡ್ ಮಾಡಿಲ್ಲ, ಯಾವ ಸಿನಿಮಾವನ್ನೂ ನೋಡಿಲ್ಲ. ನನ್ನನ್ನು ಸ್ವಂತ ಮಗನಿಗಿಂತ ಜಾಸ್ತಿ ರಾಕ್‌ಲೈನ್ ವೆಂಕಟೇಶ್ ನೋಡಿಕೊಂಡಿದ್ದಾನೆ. ನನ್ನ ಆತ್ಮೀಯರು ಬಂದು ನನ್ನನ್ನು ನೋಡಿಕೊಂಡು ಹೋದರು” ಎಂದು ದೊಡ್ಡಣ್ಣ ಹೇಳಿದ್ದಾರೆ.
ಕೆಟ್ಟದಾಗಿ ಮಾತನಾಡಿದ್ರೆ...
“ನಾವು ಒಳ್ಳೆಯ ಕೆಲಸ ಮಾಡಿದ್ದೇವೆ, ಆದರೆ ಕೆಲವರು ಕೆಟ್ಟದಾಗಿ ಮಾತನಾಡಿದಾಗ ಏನೂ ಅನಿಸೋದಿಲ್ಲ, ಆ ಸ್ಥಿತಿಗೆ ಬಂದಿದ್ದೇನೆ. ನನ್ನ ಜೀವನದಲ್ಲಿ 80% ನಡೆದುಕೊಂಡು ಬಂದಾಗಿದೆ” ಎಂದು ದೊಡ್ಡಣ್ಣ ಹೇಳಿದ್ದಾರೆ.
ಸಿನಿಮಾ ನಿರ್ದೇಶನ ಮಾಡುವಾಸೆ
“ನನಗೆ ಸಿನಿಮಾ ಮಾಡಬೇಕು ಎನ್ನುವ ಆಸೆ. ಮೌಲ್ಯಗಳ ಕುರಿತು ಒಂದು ಸಿನಿಮಾ ಕಥೆ ರೆಡಿಯಿದೆ. ಅದಕ್ಕೆ ನಾನು ನಿರ್ದೇಶನ ಮಾಡುವ ಆಸೆ ಇದೆ” ಎಂದು ದೊಡ್ಡಣ್ಣ ಅವರು ಹೇಳಿದ್ದಾರೆ.