- Home
- Entertainment
- Sandalwood
- Kantara Chapter 1ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದು… ಈ ಖ್ಯಾತ ನಟನ ಪತ್ನಿ!
Kantara Chapter 1ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದು… ಈ ಖ್ಯಾತ ನಟನ ಪತ್ನಿ!
ಕಾಂತಾರಾ ಚಾಪ್ಟರ್ 1ಸಿನಿಮಾ ಬಿಡುಗಡೆಯಾಗಿ ದೇಶ ವಿದೇಶದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಬೆರ್ಮೆ ಅಂದರೆ ರಿಷಬ್ ಶೆಟ್ಟಿಯ ತಾಯಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ ನಟಿ ಯಾರು ಗೊತ್ತಾ? ಇವರು ಖ್ಯಾತ ನಟನ ಪತ್ನಿಯೂ ಹೌದು.

ಕಾಂತಾರಾ ಚಾಪ್ಟರ್ 1
ಅಕ್ಟೋಬರ್ 2ರಂದು ಬಿಡುಗಡೆಯಾಗಿರುವ ಕಾಂತಾರಾ ಚಾಪ್ಟರ್ 1ಸಿನಿಮಾ ಸದ್ಯ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಾ ಸಾಗುತ್ತಿದೆ. ದೇಶ ವಿದೇಶದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಹೈಲೈಟ್ ಆಗಿದ್ದು, ರಿಷಬ್ ಶೆಟ್ಟಿ ತಾಯಿ ಬೈ ಪಾತ್ರ ಕೂಡ ಜನಮನ ಗೆದ್ದಿದೆ.
ಬೆರ್ಮೆಯ ತಾಯಿ ಪಾತ್ರ
ಕಾಂತಾರ ಸಿನಿಮಾದಲ್ಲಿ ಬಾವಿಯೊಳಗೆ ಸಿಗುವ ಬೆರ್ಮೆಯ ತಾಯಿ ಬೈದಿ ಪಾತ್ರವು ಅದ್ಭುತವಾಗಿ ಮೂಡಿ ಬಂದಿದೆ. ಅಮ್ಮನ ಸೆಂಟಿಮೆಂಟ್ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ. ಆ ಪಾತ್ರದಲ್ಲಿ ನಟಿಸಿದ ನಟಿ ಯಾರು ಗೊತ್ತಾ?
ರಂಗಾಯಣ ರಘು ಪತ್ನಿ
ಬೈದಿ ಪಾತ್ರಕ್ಕೆ ಜೀವ ತುಂಬಿದವರು ಬೇರೆ ಯಾರೂ ಅಲ್ಲ, ನಟ ರಂಗಾಯಣ ರಘು ಪತ್ನಿ ಮಂಗಳ. ಇವರೂ ಕೂಡ ರಂಗಭೂಮಿ ಕಲಾವಿದೆ ಮತ್ತು ನಟಿ ಕೂಡ ಹೌದು. ಹಲವು ನಾಟಕ, ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ರಂಗಭೂಮಿ ಕಲಾವಿದೆ
ಮಂಗಳ ಅವರು ರಂಗಭೂಮಿ ಕಲಾವಿದೆಯಾಗಿದ್ದು, ಅವರು ತಮ್ಮದೇ ಆದ ಸಂಚಾರಿ ಥಿಯೇಟರ್ ಕೂಡಾ ನಡೆಸುತ್ತಿದ್ದಾರೆ. ಇವರು ಕೇವಲ ನಟನೆಯಷ್ಟೇ ಅಲ್ಲದೆ, ನಾಟಕಗಳ ನಿರ್ದೇಶನ ಕೂಡ ಮಾಡುತ್ತಾರೆ. ನಾಟಕಗಳ ಆಯೋಜನೆ ಕೂಡ ಮಾಡುತ್ತಾರೆ.
ರಘು ಮತ್ತು ಮಂಗಳ
ರಂಗಭೂಮಿ ಕಲಾವಿದರಾಗಿರುವ ರಂಗಾಯಣ ರಘು ಮತ್ತು ಮಂಗಳ ಪ್ರೀತಿಸಿ ಮದುವೆಯಾದವರು. ಇಬ್ಬರು ಕೂಡ ಅದ್ಭುತ ಕಲಾವಿದರೂ ಹೌದು. ಇವರ ಮಗಳು ಕೂಡ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬೈದಿ ಪಾತ್ರಕ್ಕೆ ಅಪಾರ ಮೆಚ್ಚುಗೆ
ಇದೀಗ ಮಂಗಳ ಅವರು ಬೈದಿ ಪಾತ್ರದಲ್ಲಿ ನಟಿಸಿದ್ದು, ಪಾತ್ರ ಸಣ್ಣದಾದರು ಪಾತ್ರಕ್ಕೆ ಜೀವಿ ತುಂಬಿ ನಟಿಸಿದ್ದಾರೆ. ಈ ಪಾತ್ರವನ್ನು ಜನರು ಕೂಡ ಮೆಚ್ಚಿಕೊಂಡಿದ್ದು, ಸಿನಿಮಾಗೆ ಹೈಲೈಟ್ ಕೊಡುವಂತಹ ದೃಶ್ಯ ಕೂಡ ಇವರದ್ದೇ ಆಗಿದೆ.