- Home
- Entertainment
- Sandalwood
- 'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..': ಲೈಫ್ ಟುಡೇ ಚಿತ್ರದಲ್ಲಿ ಜೋಗಿ ಪ್ರೇಮ್ ಗಾಯನ
'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..': ಲೈಫ್ ಟುಡೇ ಚಿತ್ರದಲ್ಲಿ ಜೋಗಿ ಪ್ರೇಮ್ ಗಾಯನ
ಸಿಕ್ಕರೆ ಸಿಕ್ಕರೆ ಒಳ್ಳೆ ಹುಡುಗ್ರು ಸಿಕ್ಕರೇ ಎಂಬ ಹಾಡು ತುಂಬಾ ಇಷ್ಟ ಆಗಿತ್ತು. ಸಾಹಿತ್ಯ ತುಂಬಾ ಚೆನ್ನಾಗಿದೆ. ಹಾಗಾಗಿ ದೊಡ್ಡ ದೊಡ್ಡ ಸಿಂಗರ್‌ಗಳಿದ್ದಾರೆ, ಶಂಕರ್ ಮಹಾದೇವ್ ಅವರಂಥ ದೊಡ್ಡ ಗಾಯಕರಿದ್ದಾರೆ.

ಜಲ್ಸಾ ಮತ್ತು 'ಇರುವುದೆಲ್ಲವ ಬಿಟ್ಟು' ಸಿನಿಮಾಗಳ ನಿರ್ದೇಶಕ ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರ ಲೈಫ್ ಟುಡೇ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ.
ಇದೀಗ ಅದೇ ಹಾಡಿನ ಕನ್ನಡ ವರ್ಶನ್ 'ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..' ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಯಾಗಿದ್ದಾರೆ.
ಸಿಕ್ಕರೆ ಸಿಕ್ಕರೆ ಒಳ್ಳೆ ಹುಡುಗ್ರು ಸಿಕ್ಕರೇ ಎಂಬ ಹಾಡು ತುಂಬಾ ಇಷ್ಟ ಆಗಿತ್ತು. ಸಾಹಿತ್ಯ ತುಂಬಾ ಚೆನ್ನಾಗಿದೆ. ಹಾಗಾಗಿ ದೊಡ್ಡ ದೊಡ್ಡ ಸಿಂಗರ್‌ಗಳಿದ್ದಾರೆ, ಶಂಕರ್ ಮಹಾದೇವ್ ಅವರಂಥ ದೊಡ್ಡ ಗಾಯಕರಿದ್ದಾರೆ.
ಅವರಲ್ಲಿ ಹಾಡಿಸಿ ಎಂದಿದ್ದೆ. ಆದರೆ ನಾನೇ ಹಾಡಬೇಕು ಎಂದು ಚಿತ್ರತಂಡದ ಬೇಡಿಕೆ ಆಗಿತ್ತು. ಸಂಗೀತ ಗೊತ್ತಿಲ್ಲ. ಆದರೆ ಸಂಗೀತ ಜ್ಞಾನ ಇದೆ ಎಂದರು ನಿರ್ದೇಶಕ ಜೋಗಿ ಪ್ರೇಮ್.
ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ, ರಾಮ್ ನಾರಾಯಣ್ ಸಾಹಿತ್ಯ ಬರೆದಿರುವ ಹಾಡು ಇದಾಗಿದೆ. ಕನ್ನಡ ಹಾಗೂ ತಮಿಳಿನಲ್ಲಿ ಮೂಡಿ ಬರಲಿರುವ ಚಿತ್ರ ಇದಾಗಿದ್ದು, ತಮಿಳಿನಲ್ಲಿ ಇದೇ ಹಾಡನ್ನು ಜಿ.ವಿ. ಪ್ರಕಾಶ್ ಹಾಡಿದ್ದಾರೆ. ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಹಾಜರಿದ್ದರು. ಲೇಖಚಂದ್ರ ಚಿತ್ರದ ನಾಯಕಿ. ತಬಲನಾಣಿ, ಅಪೂರ್ವ, ಕಾಕ್ರೋಚ್ ಸುಧಿ, ಜಗ್ಗಪ್ಪ ತಾರಾಗಣದಲ್ಲಿದ್ದಾರೆ.