ಯಾರ್ ಮೇಲಾದ್ರೂ ಕ್ರಶ್ ಆದ್ರೆ ಹೀಗೆಲ್ಲಾ ಆಗುತ್ತಂತೆ ಹೌದಾ?
ಕ್ರಶ್… ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಕ್ರಶ್ ಬಂದು ಹೋಗಿಯೇ ಹೋಗಿರುತ್ತಾರೆ. ಕೆಲವರು ಅದನ್ನು ಟೈಮ್ ಪಾಸ್ ಅಂದುಕೊಂಡು ಬಿಟ್ಟರೆ, ಮತ್ತೆ ಕೆಲವರು, ಅದನ್ನೆ ಪ್ರೀತಿಯಾಗಿ ಬದಲಾಯಿಸುತ್ತಾರೆ. ಆದರೆ ಎಲ್ಲದಕ್ಕೂ ಮುನ್ನ ಕ್ರಶ್ ಅಂದ್ರೆ ಏನು ಅನ್ನೋದನ್ನು ತಿಳಿಯಿರಿ.

ಸ್ಕೂಲ್ ಗೆ ಹೋಗುವ ಸಮಯದಲ್ಲೋ, ಕಾಲೇಜಿಗೆ ಹೋಗುವ ಸಮಯದಲ್ಲೋ ಎಲ್ಲೋ ಒಂದು ಕಡೆ ನಿಮಗೆ ಯಾರದ್ದೋ ಮೇಲೆ ಕ್ರಶ್ (crush)ಆಗಿಯೇ ಇರಬೇಕಲ್ಲ… ಪ್ರತಿ ಬಾರಿ ಅವರು ಎದುರು ಬಂದಾಗ ಹೃದಯ ಬಡಿತ ಹೆಚ್ಚುತ್ತೆ, ತುಟಿ ತನಗರಿವೇ ಇಲ್ಲದಂತೆ ನಗುತ್ತೆ. ಇದೇನು ಪ್ರೀತಿಯೇ ಎಂದು ನಿಮಗೆ ಅನಿಸಿಬಿಡುತ್ತದೆ. ಯಾಕೆಂದರೆ ಪ್ರತಿ ಬಾರಿಯೂ ಭಾವನೆಗಳು ನೈಜವಾಗಿರುತ್ತವೆ. ಅದೇ ರೀತಿ ಈಗಲೂ ಆಗುತ್ತಿದೆಯೇ? ಯಾರ್ ಮೇಲಾದ್ರೂ ಮತ್ತೆ ಕ್ರಶ್ ಆಗಿದ್ಯಾ? ನಿಜವಾಗ್ಲೂ ಕ್ರಶ್ ಅಂದ್ರೆ ಏನು?
ಕ್ರಶ್ ಮತ್ತು ಪ್ರೀತಿಯ (love and crush) ನಡುವಿನ ವ್ಯತ್ಯಾಸವನ್ನು ಮತ್ತೆ ಮತ್ತೆ ಬದಲಾಯಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಉತ್ತಮ. ಕ್ರಶ್ ನ ನಿಜವಾದ ಅರ್ಥವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ನಂತರ ಜೀವನದಲ್ಲಿ ಜೀವನವನ್ನು ಪ್ರೀತಿಸಲು ಹೊಸ ದಿಕ್ಕನ್ನು ನೀಡುತ್ತೀರಿ. ಉದ್ದೇಶವು ಸ್ಪಷ್ಟವಾಗಿದ್ದರೆ, ಹಾದಿಯೂ ಸಹ ಸ್ಪಷ್ಟವಾಗಿರುತ್ತದೆ. ಆಗ ಪ್ರೀತಿ ಕೂಡ ಸುಲಭವಾಗಿ ಸಿಗುತ್ತದೆ ಮತ್ತು ಕ್ರಶ್ ಅನ್ನು ಪ್ರೀತಿಯಾಗಿ ಪರಿವರ್ತಿಸುವ ಆತ್ಮವಿಶ್ವಾಸವನ್ನು ಸಹ ನೀವು ಪಡೆಯುತ್ತೀರಿ.
ಕ್ರಶ್ ಪದದ ನಿಜವಾದ ಅರ್ಥ
ಕ್ರಶ್ ಗಳನ್ನು ಸಾಮಾನ್ಯವಾಗಿ ನೀವು ಎಂದಿಗೂ ಹೇಳಲಾಗದ ರೊಮ್ಯಾಂಟಿಕ್ ಭಾವನೆಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಹಾಗಲ್ಲ. ನೀವು ಪ್ರೀತಿಯ ಭಾವನೆಯನ್ನು ಇಲ್ಲಿಯವರೆಗೆ ಕ್ರಶ್ ಎಂದು ಕರೆಯುತ್ತಿದ್ದಿರಿ, ಅಲ್ಲವೇ? ಆದರೆ ಕ್ರಶ್ ಅರ್ಥವೇ ಬೇರೆ. ಯಾವಾಗಲೂ ಕ್ರಶ್ ಗೆ ರೊಮ್ಯಾಂಟಿಕ್ ಫೀಲಿಂಗ್ ಬರೋದಿಲ್ಲ ಎಂದು ತಜ್ಞರು ಒಪ್ಪುತ್ತಾರೆ. ಆದರೆ ಅವರು ಕ್ರಶ್ ನೊಂದಿಗೆ ಕಾಂಟಾಕ್ಟ್ ಹೊಂದಲು ಬಯಸುವವರ ಮನಸಿನಲ್ಲಿ ರೊಮ್ಯಾಂಟಿಕ್ ಫೀಲಿಂಗ್ (romantic feeling) ಕೂಡ ಇರುತ್ತೆ.
ಕ್ರಶ್ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸ
ಪ್ರೀತಿ ಮತ್ತು ಕ್ರಶ್ ಅನ್ನು ಒಂದೇ ಎಂದು ಪರಿಗಣಿಸುವ ತಪ್ಪನ್ನು ಮಾಡಬೇಡಿ. ಇವೆರಡೂ ವಿಭಿನ್ನ ಭಾವನೆಗಳು. ಇವೆರಡರ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಆಕರ್ಷಣೆ ಮತ್ತು ಆಳವಾದ ಪ್ರೀತಿ. ಈ ಎರಡು ಭಾವನೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ತುಂಬಾ ಕಷ್ಟ. ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.
-ಕೆಲವೊಮ್ಮೆ ಕ್ರಶ್ ಗಾಗಿ ನೀವು ದೈಹಿಕ ಆಕರ್ಷಣೆಯನ್ನು (physical attraction) ಅನುಭವಿಸಬಹುದು. ಆದರೆ ಪ್ರೀತಿ ಇದ್ದಾಗ, ನೀವು ಡೀಪ್ ಫೀಲಿಂಗ್ ಹೊಂದುವಿರಿ.
-ಕ್ರಶ್ ಆದಾಗ ನೀವು ಅವರ ಬಗ್ಗೆ ಕನಸು ಕಾಣುವಿರಿ. ಆದರೆ ಪ್ರೀತಿ ಇದ್ದಾಗ ನೀವು ಪ್ರಾಯೋಗಿಕ ವಿಷಯಗಳನ್ನು ಯೋಚಿಸುತ್ತೀರಿ.
-ಪ್ರೀತಿಯಲ್ಲಿದ್ದಾಗ, ನೀವು ಆ ವ್ಯಕ್ತಿಯನ್ನು ಪೂರ್ತಿಯಾಗಿ ಇಷ್ಟಪಡುತ್ತೀರಿ. ಆದರೆ ನೀವು ಕ್ರಶ್ ನ ಗುಣಲಕ್ಷಣಗಳಲ್ಲಿ ಒಂದನ್ನು ಇಷ್ಟಪಡುತ್ತೀರಿ, ಉದಾಹರಣೆಗೆ ಅವನ ನಗು, ದೇಹದ ಭಾಗ ಅಥವಾ ಡ್ರೆಸ್ಸಿಂಗ್..
-ಕ್ರಶ್ ಅನ್ನೋದು ತುಂಬಾ ಸಮಯದವರೆಗೆ ಉಳಿಯೋದೆ ಇಲ್ಲ, ಸ್ವಲ್ಪ ಸಮಯ ಮಾತ್ರ ಒಬ್ಬರ ಮೇಲೆ ಕ್ರಶ್ ಇರುತ್ತೆ.
-ಪ್ರೀತಿ ನಿಧಾನವಾಗಿ ಆದರೆ, ಕ್ರಶ್ ತಕ್ಷಣವೇ ನೋಡಿದ ಕೂಡಲೇ ಸಂಭವಿಸುತ್ತದೆ.
-ಕ್ರಶ್ ಇದ್ದರೆ, ಆ ವ್ಯಕ್ತಿಯಲ್ಲಿ ಯಾವುದೇ ಕೊರತೆ ನಿಮಗೆ ಕಾಣೋದಿಲ್ಲ, ಆದರೆ ನಿಮಗೆ ಆ ವ್ಯಕ್ತಿಯ ಮೇಲೆ ಪ್ರೀತಿ ಇದ್ದರೆ, ಅವರನ್ನು ನೀವು ಸುಧಾರಿಸಲು ಬಯಸುತ್ತೀರಿ. ಇದರಿಂದ ಆ ವ್ಯಕ್ತಿಯು ಪರಿಪೂರ್ಣನಾಗಲು ಸಾಧ್ಯವಾಗುತ್ತದೆ ಎಂದು ನೀವು ಅಂದುಕೊಳ್ಳುವಿರಿ..
ಯಾರ ಮೇಲೆ ಕ್ರಶ್ ಆಗಬಹುದು?
ಯಾರ ಮೇಲೆ ಕ್ರಶ್ ಆಗಬಹುದು? ಅನ್ನೋ ಪ್ರಶ್ನೆ ಮೂಡೋದು ಸಹಜ. ಅಂದಹಾಗೆ, ಇದು ಯಾವಾಗ ಬೇಕಾದರೂ ಯಾರಿಗಾದರೂ ಸಂಭವಿಸಬಹುದು. ಕೆಲವೊಮ್ಮೆ ಸಂಬಂಧವೇ ಇಲ್ಲದ ಜನರೊಂದಿಗೆ ಇದು ಸಂಭವಿಸುತ್ತದೆ. ಉದಾಹರಣೆಗೆ ಕಚೇರಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿ, ಫಿಲಂ ಸ್ಟಾರ್, ಯೂತ್ ಐಕಾನ್, ಕಾಲೇಜ್ ನಲ್ಲಿ ಯಾರ ಮೇಲೋ, ಶಿಕ್ಷಕರ ಮೇಲೆ, ಬಸ್ ನಲ್ಲಿ ಹೀಗೆ ಯಾರ ಮೇಲೆ ಬೇಕಾದರೂ ಕ್ರಶ್ ಆಗುವ ಚಾನ್ಸ್ ಇದೆ.
ನಿಮಗೆ ಕ್ರಶ್ ಆಗಿದೆ ಎಂದು ಗುರುತಿಸುವುದು ಹೇಗೆ?
ಅವರು ಬಂದ ತಕ್ಷಣ, ನೀವು ಸ್ವಲ್ಪ ನಾಚಿಕೆಪಡುತ್ತೀರಿ.
ನಿಮ್ಮ ಸುತ್ತಲಿನ ಜನರು ನಿಮ್ಮನ್ನೇ ದಿಟ್ಟಿಸಿ ನೋಡ್ತಾ ಇದ್ದಾರೆನೋ ಅನಿಸುತ್ತೆ
ಆತಂಕ, ಸಂತೋಷ ಮತ್ತು ಉತ್ಸಾಹದಂತಹ ಮಿಶ್ರ ಭಾವನೆಗಳು ಇರುತ್ತವೆ.
ಪ್ರತಿ ಕ್ಷಣವೂ ಯಾರಾದರೂ ನಿಮ್ಮನ್ನು ಗಮನಿಸುತ್ತಿರುವಂತೆ ಭಾಸವಾಗುತ್ತದೆ.
ನಿಮಗೆ ವೈಯಕ್ತಿಕವಾಗಿ ಕ್ರಶ್ ಬಗ್ಗೆ ಗೊತ್ತಿಲ್ಲದಿದ್ದರೆ ಏನು ಮಾಡುವುದು?
ನಿಮಗೆ ವೈಯಕ್ತಿಕವಾಗಿ ನಿಮ್ಮ ಕ್ರಶ್ ಬಗ್ಗೆ ಗೊತ್ತಿಲ್ಲದಿದ್ದರೆ, ಮೊದಲು ತಿಳಿಯಲು ಪ್ರಯತ್ನಿಸಿ. ಅವರು ನಿಮ್ಮ ಸ್ನೇಹಿತನ ಪಾರ್ಟಿಯಲ್ಲಿ ಭೇಟಿಯಾಗಿರಬಹುದು ಮತ್ತು ನಿಮ್ಮಿಬ್ಬರಿಗೂ ಪರಸ್ಪರರ ಹೆಸರುಗಳನ್ನು ಹೊರತುಪಡಿಸಿ ಬೇರೇನೂ ತಿಳಿದಿಲ್ಲ. ತಿಳಿದ ನಂತರವೇ, ಮುಂದೆ ಹೆಜ್ಜೆ ಇಡಿ. ನೀವು ಭೇಟಿಯಾದ ಕೂಡಲೇ ನಿಮ್ಮ ಅಭಿಪ್ರಾಯ ತಿಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ನಿಮ್ಮನ್ನು ತಿಳಿದುಕೊಳ್ಳಬಹುದಾದಂತಹ ಅವಕಾಶಗಳನ್ನು ಅವರಿಗೆ ನೀಡಿ. ಒಬ್ಬರಿಗೊಬ್ಬರು ತಿಳಿದ ನಂತರವೇ ಕ್ರಶ್ ಗೆ ನಿಮ್ಮ ಮನಸಿನ ಮಾತು ತಿಳಿಸಿ.
ಬೇರೆ ಯಾರನ್ನಾದರೂ ಪ್ರೀತಿಸುತ್ತಾರೆಯೇ ತಿಳಿಯಿರಿ
ನಿಮ್ಮ ಕ್ರಶ್ ಗೆ ನಿಮ್ಮ ಹೃದಯದ ಮಾತನ್ನು ಹೇಳುವ ಮುನ್ನ ಅವರು ಬೇರೊಬ್ಬರನ್ನು ಪ್ರೀತಿಸುತ್ತಾರೆಯೇ ಎಂದು ಕಂಡುಹಿಡಿಯಿರಿ.ತುಂಬಾ ಅವಸರದಲ್ಲಿ ಇದನ್ನು ಅವರಿಗೆ ಹೇಳಿದರೆ, ಮತ್ತೆ ನೀವು ಪಶ್ಚಾತ್ತಾಪ ಪಡಬೇಕಾಗಿ ಬರಬಹುದು.
ಪ್ರೀತಿ ಎಂದರೇನು? (what is love)
ಕ್ರಶ್ ಬಗ್ಗೆ ಎಲ್ಲವನ್ನೂ ತಿಳಿದ ನಂತರ, ಪ್ರೀತಿ ಎಂದರೇನು ಎಂದು ನೀವು ತಿಳಿದಿರಬೇಕು? ವಾಸ್ತವವಾಗಿ, ನೀವು ಪ್ರೀತಿಯನ್ನು ಗುರುತಿಸಿದಾಗ ಮಾತ್ರ, ನೀವು ಕ್ರಶ್ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ನೀವು ಯಾರನ್ನಾದರೂ ಪ್ರೀತಿಸುತ್ತಿರುವಾಗ, ಅವರ ನೋಟದ ಬಗ್ಗೆ ಗಮನ ಹರಿಸದೆ ನೀವು ಅವರ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಯೋಚಿಸುತ್ತೀರಿ. ನೀವು ಅವರ ಸಮಸ್ಯೆಗಳನ್ನು ನಿಮ್ಮ ಸಮಸ್ಯೆಗಳನ್ನಾಗಿ ಮಾಡಿಕೊಳ್ಳುವಿರಿ ಮತ್ತು ಅವುಗಳನ್ನು ಪರಿಹರಿಸುವ ಬಗ್ಗೆಯೂ ಯೋಚಿಸುತ್ತೀರಿ. ಅವರನ್ನು ಸಂತೋಷಪಡಿಸಲು ನೀವು ನಿಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವಿರಿ. ಅವರೊಂದಿಗೆ ಇರೋದು ಸೇಫ್ ಎಂದು ಫೀಲ್ ಆದ್ರೆ… ಪ್ರೀತಿ ಅಲ್ಲದೇ ಮತ್ತೇನಿದು.