ವರನ ಹುಡುಕಿ ಕೊಟ್ಟರೆ 88 ಲಕ್ಷ ರೂ, ಮಗುವಾದರೆ 2.64 ಕೋಟಿ ರೂ ಆಫರ್ ಕೊಟ್ಟ ಮಾಡೆಲ್
ಕಂಟೆಂಟ್ ಕ್ರಿಯೆಟರ್ ಮಾಡೆಲ್ ಭರ್ಜರಿ ಆಫರ್ ನೀಡಿದ್ದಾಳೆ. ಈಕೆ ಮದುವೆಗೆ ರೆಡಿಯಾಗಿದ್ದಾರೆ. ವರನ ಹುಡುಕಿ ಕೊಟ್ಟವರಿಗೆ 88 ಲಕ್ಷ ರೂಪಾಯಿ ಬ್ರೋಕರ್ ಫೀಸ್ ಕೊಡುತ್ತಾಳೆ. ಇನ್ನು ಈಕೆ ಗರ್ಭಿಣಿಯಾದರೆ 2.64 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾಳೆ.

ಭಾರತದಲ್ಲಿ ಮದುವೆಯಾಗಲು ಹೊರಟವರಿಗೆ ವರ ಹಾಗೂ ವಧು ಅನ್ವೇಷಣೆ ಮಾಡಲು ಹಲವು ವೇದಿಕೆಗಳಿವೆ. ವಧು ವರರನ ಅನ್ವೇಷಣೆ, ಮ್ಯಾಟ್ರಮೋನಿ ಸೈಟ್ ಸೇರಿದಂತೆ ಹಲವು ಆಯ್ಕಗಳಿವೆ. ಇನ್ನು ಪ್ರತಿ ಕುಟುಂಬದಲ್ಲಿ, ಪ್ರತಿ ಗ್ರಾಮದಲ್ಲಿ ಒಂದಷ್ಟು ಮಂದಿ ಮದುವೆ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಲ್ಲೊಬ್ಬ ಕೆಂಟೆಂಟ್ ಕ್ರಿಯೇಟರ್ ಯುವತಿ ಮದುವೆಯಾಗಲು ಬಯಸಿದ್ದಾಳೆ. ಆದರೆ ಸೂಕ್ತ ವರನ ಹುಡುಕಲು ಹೊಸ ಆಫರ್ ಘೋಷಿಸಿದ್ದಾಳೆ. ಸೂಕ್ತ ವರನ ಹುಡುಕಿ ಕೊಟ್ಟವರಿಗೆ ಬರೋಬ್ಬರಿ 88 ಲಕ್ಷ ರೂಪಾಯಿ ಆಫರ್ ಮಾಡಿದ್ದಾಳೆ. ಇಷ್ಟೇ ಅಲ್ಲ ಒಂದು ವೇಳೆ ಕಂಕಣ ಭಾಗ್ಯ ಕೂಡಿ ಬರದೇ ಇದ್ದರೆ, ಈಕೆ ಗರ್ಭಧರಿಸುವಂತಾದರೆ ಸಾಕು, ಆತನಿಗೆ ಬರೋಬ್ಬರಿ 2.64 ಕೋಟಿ ರೂಪಾಯಿ ಆಫರ್ ಮಾಡಿದ್ದಾಳೆ.
ಕಂಟೆಂಟ್ ಕ್ರಿಯೇಟರ್ ಆಫರ್ ಬೆನ್ನಲ್ಲೇ ಸಾಲು ಸಾಲು ಮೆಸೇಜ್
ಬ್ರೋಕರ್ ಫೀಸ್ ಪೆಡೆಯಲು ಅಥವಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಿದ್ಧರಾಗಿದ್ದರೆ, ಈ ಆಫರ್ ಕೊಟ್ಟ ಯುವತಿ ಇರವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. 33 ವರ್ಷದ ಈಕೆಯ ಹೆಸರು ಆ್ಯಲ್ಲಾ. ಒನ್ಲಿ ಫ್ಯಾನ್ಸ್ ಕಂಟೆಂಟ್ ಕ್ರಿಯೇಟರ್ ಆಗಿರುವ ಈಕೆ ಇದೀಗ ಕೋಟಿ ಕೋಟಿ ರೂಪಾಯಿ ಆಫರ್, ಗರ್ಭಧಾರಣೆ ಆಫರ್ ಕೂಡ ಕೊಟ್ಟಿದ್ದಾಳೆ. ಇದರ ಬೆನ್ನಲ್ಲೇ ಈಕೆಗೆ ಕರೆಗಳು, ಮೆಸೇಜ್ ಸಂಖ್ಯೆ ದುಪ್ಪಟ್ಟಾಗಿದೆ.
ಮದುವೆ ಕುರಿತು ಈಕೆ ಹೇಳಿಕೊಂಡಿದ್ದಾಳೆ. ಡೇಟಿಂಗ್ ಮಾಡಲು ಯುವಕನ ಹುಡುಕುವುದು ಕಷ್ಟದ ಕೆಲಸವಲ್ಲ. ಆದರೆ ಮದುವೆಯಾಗಲು ವರನ ಹುಡುಕುವುದು ಕಷ್ಟ. ಜೊತಗೆ ನನ್ನ ಕೆಲ ಬಯಕೆ, ಆಸೆ, ವೃತ್ತಿಗೆ ತಕ್ಕಂತೆ ಇರುವ ಹುಡುಗ ಬೇಕು. ಹೀಗಾಗಿ ನನ್ನನ್ನು ಮದುವೆಯಾಗುವ ಹುಡುಗನ ಹುಡುಕಿ ಕೊಟ್ಟವರಿಗೆ $100,000 ಅಂದರೆ ಸರಿಸುಮಾರು 88 ಲಕ್ಷ ರೂಪಾಯಿ ನೀಡುವುದಾಗಿ ಹೇಳಿಕೊಂಡಿದ್ದಾಳೆ.
ಒಂದು ವೇಳೆ ಮದುವೆಯಾಗಲು ನನಗೆ ಸೂಕ್ತ ವರ ಸಿಗದಿದ್ದರೆ, ಎರಡನೇ ಆಯ್ಕೆ ನೀಡಿದ್ದಾಳೆ. ಮಗು ಮಾಡುವಾತನಿಗೆ $300,000 ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 2.64 ಕೋಟಿ ರೂಪಾಯಿ ನೀಡುತ್ತೇನೆ ಎಂದು ಆ್ಯಲ್ಲಾ ಹೇಳಿದ್ದಾಳೆ. ಇದರಲ್ಲಿ ಯಾವ ಆಯ್ಕೆಯಾದರೂ ಒಕೆ ಎಂದು ಆಕೆ ಹೇಳಿದ್ದಾಳೆ.
ಮದುವೆಯಾಗುವ ಹುಡುಗನಿಗೆ ಕೆಲ ಷರತ್ತುಗಳು ಇವೆ. ಮುಖ್ಯವಾಗಿ ಮದುವೆಯಾಗುವ ಹುಡುಗ ಲೈಂಗಿಕತೆ ಹೆಚ್ಚು ಇಷ್ಟಪಡಬೇಕು. ಮಕ್ಕಳನ್ನು ಬಯಸುವ ಹಾಗೂ ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವ ಹುಡುಗನಾಗಿರಬೇಕು. ಆರ್ಥಿಕವಾಗಿ ಸದೃಢವಾಗಿರಬೇಕು. ನಾನು ಆತನಿಗೆ ಆರ್ಥಿಕ ನೆರವು ನೀಡುವ ಪರಿಸ್ಥಿತಿ ಇರಬಾರದು. ಇನ್ನು ಬಹುಪತ್ನಿತ್ವಕ್ಕೂ ಅವಕಾಶವಿದೆ. ಆದರೆ ನನಗೆ ಪ್ರಾಮುಖ್ಯತೆ ನೀಡಬೇಕು ಎಂದಿದ್ದಾಳೆ.
ಆಕೆಯ ಕೆಲ ಷರತ್ತುಗಳನ್ನು ಕೇಳಿ ಹಲವರು ಹಿಂದೆ ಸರಿದಿದ್ದಾರೆ. ಈಕೆಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಕಮೆಂಟ್ ವ್ಯಕ್ತವಾಗುತ್ತಿದೆ. ಹಲವರು ತಾವು ಮದುವೆಯಾಗುವುದಾಗಿ ಮುಂದೆ ಬಂದಿದ್ದಾರೆ. ಈ ಆಫರ್ ವರ ಸಿಗುವವರೆಗೂ ಅಥವಾ ಗರ್ಭಧರಿಸುವವರೆಗೂ ಇರುವ ಸಾಧ್ಯತೆ ಇದೆ.