ಪುರುಷರಲ್ಲಿ ಕಂಡು ಬರುವ ಸಂತಾನೋತ್ಪತ್ತಿ ಸಮಸ್ಯೆ: ಮನೆಯಲ್ಲೇ ಇದೆ ಪರಿಹಾರ

First Published Mar 6, 2021, 3:49 PM IST

ಇಂದಿನ ಒತ್ತಡ ಮತ್ತು ಓಡುವ ಸಮಯದಲ್ಲಿ ಜನರು ವಿವಿಧ ರೀತಿಯ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲಿ ಲೈಂಗಿಕ ಸಮಸ್ಯೆಯೂ ಸೇರಿದೆ. ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಲೈಂಗಿಕ ಸಮಸ್ಯೆಗಳ ಬಗ್ಗೆ ಆತಂಕಿತರಾಗಿರುತ್ತಾರೆ. ಅದರಲ್ಲೂ ಪುರುಷರ ಫಲವತ್ತತೆಯ ಸಮಸ್ಯೆ ಬಹುತೇಕರಲ್ಲಿ ಕಂಡು ಬರುತ್ತದೆ. ವಾಸ್ತವವಾಗಿ, ವೀರ್ಯವು ಗುಣಮಟ್ಟವು ವೀರ್ಯಾಣುಗಳ ಎಣಿಕೆಯನ್ನು ಅವಲಂಬಿಸಿರುತ್ತದೆ. ವೀರ್ಯಾಣುಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಜನರು ವಿವಿಧ ಚಿಕಿತ್ಸೆಗಳು ಮತ್ತು ಔಷಧಗಳನ್ನು ಆಶ್ರಯಿಸುತ್ತಾರೆ. ಆದರೆ, ಇದನ್ನು ಸುಧಾರಿಸಲು ಜನರು ಮನೆಮದ್ದುಗಳನ್ನು ಮತ್ತು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.