- Home
- Entertainment
- News
- 'ಕಾಮಸೂತ್ರ'ದಿಂದ ಹಲ್ಚಲ್ ಸೃಷ್ಟಿಸಿರೋ ನಟಿ ಶ್ವೇತಾ ಮೆನನ್ ವಿರುದ್ಧ FIR: ಕಾರಣ ಮಾತ್ರ ಕುತೂಹಲ...
'ಕಾಮಸೂತ್ರ'ದಿಂದ ಹಲ್ಚಲ್ ಸೃಷ್ಟಿಸಿರೋ ನಟಿ ಶ್ವೇತಾ ಮೆನನ್ ವಿರುದ್ಧ FIR: ಕಾರಣ ಮಾತ್ರ ಕುತೂಹಲ...
ಕಾಮಸೂತ್ರ ಕಾಂಡೋಮ್ ಜಾಹೀರಾತಿನ ಮೂಲಕ ಹಲ್ಚಲ್ ಸೃಷ್ಟಿಸಿರೋ ಮಾಲಿವುಡ್ ನಟಿ ಶ್ವೇತಾ ಮೆನನ್ ವಿರುದ್ಧ FIR ದಾಖಲಾಗಿದೆ. ಕಾರಣವೂ ಕುತೂಹಲವಾಗಿದೆ. ಏನದು?

ಶ್ವೇತಾ ಮೆನನ್ ವಿರುದ್ಧ ದೂರು ದಾಖಲು
ಕಾಮಸೂತ್ರ ಕಾಂಡೋಮ್ ಜಾಹೀರಾತಿನ ಮೂಲಕ ಹಲ್ಚಲ್ ಸೃಷ್ಟಿಸಿರೋ ಮಾಲಿವುಡ್ ನಟಿ ಶ್ವೇತಾ ಮೆನನ್ ವಿರುದ್ಧ FIR ದಾಖಲಾಗಿದೆ. ಕೇರಳದ ಎರ್ನಾಕುಲಂನಲ್ಲಿ ಈ ದೂರು ದಾಖಲಾಗಿದೆ. ಇದಕ್ಕೆ ಕಾರಣ, ನಟಿ ಹಣಕ್ಕಾಗಿ ಅಶ್ಲೀಲ ಮತ್ತು ಅಸಭ್ಯ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ ಎನ್ನುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಎ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಶ್ವೇತಾ ಮೆನನ್ ವಿರುದ್ಧ ದೂರು
ಅಷ್ಟಕ್ಕೂ, ಇಲ್ಲಿಯವರೆಗೆ ಅರೆನಗ್ನರಾಗಿ ಕಾಣಿಸಿಕೊಳ್ಳುತ್ತಲೇ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ ಹಲವು ಚಿತ್ರನಟಿಯರು. ಅನಿಮಲ್ ಚಿತ್ರದಲ್ಲಿ ನಟಿ ತೃಪ್ತಿ ಡಿಮ್ರಿ ಸಂಪೂರ್ಣ ಬೆತ್ತಲಾಗುತ್ತಲೇ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ, ಅಭಿಮಾನಿಗಳ ಕಣ್ಮಣಿಯಾಗಿ, ನ್ಯಾಷನಲ್ ಕ್ರಷ್ ಆಗಿ ಹೊರಹೊಮ್ಮಿದರು. ಹಲವು ನಿರ್ಮಾಪಕರು, ನಿರ್ದೇಶಕರು ಈ ಬೆತ್ತಲು ನಟಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ಕೊಡಲು ಕಾತರದಿಂದ ಕಾಯುತ್ತಿದ್ದಾರೆ. ಅರೆಬರೆ ಬೆತ್ತಲಾಗಿ ಕಾಣಿಸಿಕೊಳ್ಳುತ್ತಿರುವ ನಟಿಯರಿಗೂ ಇದು ಸ್ವಲ್ಪ ಶಾಕ್ ಕೊಟ್ಟಂತಿದೆ. ಇದರ ನಡುವೆಯೇ ಶ್ವೇತಾ ಮೆನನ್ ಸಂಪೂರ್ಣ ಬೆತ್ತಲಾಗಲು ತಾವು ರೆಡಿ ಎಂಬ ಹೇಳಿಕೆ ಕೊಟ್ಟಿದ್ದರು.
50 ವರ್ಷ ವಯಸ್ಸಿನ ಶ್ವೇತಾ
50 ವರ್ಷ ವಯಸ್ಸಿನ ಶ್ವೇತಾ ಮಾಲಿವುಡ್ ನಟಿಯಾಗಿದ್ದರೂ ಹೆಚ್ಚು ಫೇಮಸ್ ಆಗಿದ್ದು, ಕಾಮಸೂತ್ರ ಕಾಂಡೋಮ್ ಜಾಹೀರಾತಿನ ಮೂಲಕ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲೂ ಮೋಡಿ ಮಾಡಿದ್ದಾರೆ. ಇಂಥ ಜಾಹೀರಾತುಗಳನ್ನು ಬಹಿರಂಗವಾಗಿ ತೋರಿಸಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿಯೇ ಶ್ವೇತಾ ಅವರು, ಜಾಹೀರಾತಿನಲ್ಲಿ ಕಾಣಿಸಿಕೊಂಡು ಹಲ್ಚಲ್ ಸೃಷ್ಟಿಸಿದ್ದವರು.
ಬೆತ್ತಲಾಗಲು ರೆಡಿ ಎಂದಿದ್ದ ನಟಿ
ಈ ರೀತಿಯ ಜಾಹೀರಾತಲ್ಲಿ ನಟಿಸುತ್ತಿದ್ದೇನೆ ಎಂದಾಗ ಮನೆಯಿಂದಲೂ ಅವರಿಗೆ ಬೆಂಬಲ ಸಿಕ್ಕಿತ್ತು ಎಂದು ಹೇಳಿಕೊಂಡಿರುವ ನಟಿ, ಈಗ ತಾವು ಅಗತ್ಯ ಬಿದ್ದರೆ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲೆಯಾಗಲು ರೆಡಿ ಎಂದಿದ್ದರು. ನಾನು ಇಲ್ಲಿಯವರೆಗೆ ಏನೇನು ರೋಲ್ ಮಾಡಿದ್ದೇನೋ ಆ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ. ಪ್ರಜ್ಞೆ ಇಲ್ಲದೆ ಏನನ್ನೂ ಮಾಡಿಲ್ಲ. ಬಿಕಿನಿಯಲ್ಲಿ ನಟಿಸು ಎಂದರೆ ಈಗಲೂ ಅದಕ್ಕೆ ರೆಡಿ ಇದ್ದೇನೆ, ಅಷ್ಟೇ ಏಕೆ, ಬೆತ್ತಲಾಗಿ ನಟಿಸು ಎಂದರೂ ನಾನು ರೆಡಿ. ಅಷ್ಟೇ ಅಲ್ಲ, ಈಗಲೂ ರತಿ ನಿರ್ವೇದಂ ಮತ್ತು ಕಾಮಸೂತ್ರ ಸಿನಿಮಾಗಳಲ್ಲಿ ನಟಿಸಲು ಸಿದ್ಧಳಿದ್ದೇನೆ ಎಂದಿದ್ದರು.
ಶ್ವೇತಾ ಮೆನನ್ ವಿರುದ್ಧ ದೂರು
ಕೇರಳದ ಎರ್ನಾಕುಲಂ ಮೂಲದ ಮಾರ್ಟಿನ್ ಮೆನಾಚೆರಿ ಎಂಬುವವರು ನಟಿ ಶ್ವೇತಾ ಮೆನನ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಅಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸ್ಥಳೀಯ ಪೊಲೀಸರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಬೆನ್ನಲ್ಲೇ ಎರ್ನಾಕುಲಂ ಪೊಲೀಸರು ನಟಿಯರ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ. ಅನೈತಿಕ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್ 3 ಮತ್ತು 5 ನ್ನೂ ಸಹ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.
ಮಿಸ್ ಇಂಡಿಯಾ ಏಷ್ಯಾ ಪೆಸಿಫಿಕ್
ಅಷ್ಟಕ್ಕೂ, ನಟಿ 1994ರ ಫೆಮಿನಾ ಮಿಸ್ ಇಂಡಿಯಾ ಏಷ್ಯಾ ಪೆಸಿಫಿಕ್ ಆಗಿದ್ದವರು. ಕೇರಳ ರಾಜ್ಯ ಪ್ರಶಸ್ತಿ ಹಾಗೂ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರ ಮೇಲೆ ಈಗ ಹಣದ ಲಾಭಕ್ಕಾಗಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆಂಬ ದೂರು ದಾಖಲಾಗಿದೆ.
ಅಶ್ಲೀಲ ಸಿನಿಮಾಗಳಲ್ಲಿ ನಟನೆ
ನಟಿ ಶ್ವೇತಾ ಮೆನನ್ ಆರ್ಥಿಕ ಲಾಭಕ್ಕಾಗಿ ಅಸಭ್ಯ ಮತ್ತು ಅಶ್ಲೀಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಅದನ್ನು ಹಣಕ್ಕಾಗಿ ಸೋಶಿಯಲ್ ಮೀಡಿಯಾ ಹಾಗೂ ವಯಸ್ಕರ ವೆಬ್ ಸೈಟ್‌ಗಳಲ್ಲಿ ಹಂಚಲಾಗಿದೆ. ಹಣ ಗಳಿಸುವ ದೃಷ್ಟಿಯಿಂದ ತಾನು ನಟಿಸಿದ ದೃಶ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಶ್ವೇತಾ ಮೆನನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೂರಿನ ಹಿಂದೆ ದುರುದ್ದೇಶ
ಇದಾಗಲೇ ಹಲವಾರು ನಟಿಯರು ಅರೆಬರೆ ನಗ್ನವಾಗಿ ಕಾಣಿಸಿಕೊಂಡಿದ್ದು, ಕೆಲವರು ಸಂಪೂರ್ಣ ಬೆತ್ತಲಾದರೂ ಶ್ವೇತಾ ವಿರುದ್ಧದ ದೂರಿಗೆ ಬೇರೆಯದ್ದೇ ಕಾರಣ ಹೇಳಲಾಗುತ್ತಿದೆ.
ಅಮ್ಮ ಸಮಿತಿಗೆ ಚುನಾವಣೆ
'ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್' (ಅಮ್ಮ) ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯುತ್ತಿದೆ. ಇದರ ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ವೇತಾ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ದೂರ ದಾಖಲಿಸಿರಬಹುದು ಎಂದು ಅಂದಾಜಿಸಲಾಗಿದೆ.