ಭಾರತದಲ್ಲಿ ಶಓಮಿಗೆ 11 ವರ್ಷ ಸಂಭ್ರಮ, ಕೇವಲ 14,999 ರೂಗೆ ರೆಡ್ಮಿ 15 ಫೋನ್ ಬಿಡುಗಡೆ
ಶಓಮಿ ವಿಶ್ವದಲ್ಲಿ ಸಂಚಲ ಮೂಡಿಸಲು ಆರಂಭಿಸಿ 15 ವರ್ಷ ತುಂಬಿದ್ದರೆ, ಭಾರತದಲ್ಲಿ 11 ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಶಓಮಿ ರೆಡ್ಮಿ 15 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಎಲ್ಲಾ ಫೀಚರ್ಸ್ ಇರುವ, ಗರಿಷ್ಠ ಸ್ಟೋರೇಜ್ ಫೋನ್ ಕೇವಲ 14,999 ರೂಗೆ ಲಾಂಚ್ ಮಾಡಿದೆ.

ಶಓಮಿ ಭಾರತ ಸೇರಿದಂತೆ ವಿಶ್ವದಲ್ಲೇ ಸ್ಮಾರ್ಟ್‌ಫೋನ್ ಕ್ರಾಂತಿ ಮಾಡಿದೆ. ಅತೀ ಕಡಿಮೆ ಬೆಲೆಗೆ ಫೋನ್ ನೀಡುತ್ತಾ, ಗರಿಷ್ಠ ಫೀಚರ್ಸ್ ಸೇರಿದಂತೆ ಎಲ್ಲಾ ಟೆಕ್ ಅನುಭವಿಸುವಂತೆ ಮಾಡಿದೆ. ಹೀಗೆ ಕ್ರಾಂತಿ ಮಾಡಿದ ಶಓಮಿಗೆ 15ನೇ ವರ್ಷದ ಸಂಭ್ರಮವಾಗಿದ್ದರೆ, ಭಾರತದಲ್ಲಿ 11ನೇ ವರ್ಷದ ಸಂಭ್ರಮ ಆಚರಿಸುತ್ತಿದೆ. ಇದರ ಅಂಗವಾಗಿ ಶಓಮಿ ಹೊಸ ಫೋನ್ ಲಾಂಚ್ ಮಾಡಿದೆ.
ಶಓಮಿ ಇಂಡಿಯಾ ಭಾರತದಲ್ಲಿ 11 ವರ್ಷಗಳ ಗುರುತಾಗಿ ರೆಡ್ಮಿ 15 5ಜಿ ಬಿಡುಗಡೆ ಮಾಡಿದೆ. ಈ ಹೊಸ ಡಿವೈಸ್ ಶಕ್ತಿ, ಕಾರ್ಯಕ್ಷಮತೆ ಮತ್ತು ಸ್ಟೈಲ್ ಅನ್ನು ಸಂಯೋಜಿಸಿದ್ದು ಇಂದಿನ ಸಂಪರ್ಕಿತ ಗ್ರಾಹಕರಿಗೆ ವಿನ್ಯಾಸಗೊಳಿಸಲಾಗಿದೆ. ಈ ಫೋನ್ ಹೊಸ ತಂತ್ರಜ್ಞಾನಗಳಿಂದ ಮಿಳಿತವಾಗಿದೆ. ಹೊಸ ಆವಿಷ್ಕಾರದ ಕಡಿಮೆ ಬೆಲೆಯ ಉತ್ತಮ ಫೀಚರ್ ಫೋನ್ ಆಗಿ ಗುರುತಿಸಿಕೊಂಡಿದೆ.
ರೆಡ್ಮಿ 15 5ಜಿ ಈ ವರ್ಗದ ಪ್ರಥಮ 7000ಎಂಎಎಚ್ ಇವಿ-ಗ್ರೇಡ್ ಸಿಲಿಕಾನ್-ಕಾರ್ಬನ್ ಬ್ಯಾಟರಿ ಪರಿಚಯಿಸಿದ್ದು ಇದು 33ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಮತ್ತು 18ಡಬ್ಲ್ಯೂ ರಿವರ್ಸ್ ಚಾರ್ಜಿಂಗ್ ಮೂಲಕ 48 ಗಂಟೆಗಳವರೆಗೆ ಶಕ್ತಿ ನೀಡುತ್ತದೆ. ಇದು 6.9-ಇಂಚು ಎಫ್.ಎಚ್.ಡಿ.+ ಅಡಾಪ್ಟಿವ್ ಸಿಂಕ್ ಡಿಸ್ಪ್ಲೇಯನ್ನು 144ಹರ್ಟ್ಸ್ ರಿಫ್ರೆಶ್ ರೇಟ್ ವರೆಗೆ ನೀಡುತ್ತದೆ. ಟಿಯುವಿ ರೀನ್ ಲ್ಯಾಂಡ್ ಟ್ರಿಪಲ್ ಸರ್ಟಿಫಿಕೇಷನ್ ಮತ್ತು ಡಾಲ್ಬಿ ಸರ್ಟಿಫೈಡ್ ಸ್ಪೀಕರ್ ಗಳು ತಲ್ಲೀನಗೊಳಿಸುವ ಮನರಂಜನೆಗೆ ಹೊಂದಿದೆ.
ಈ ಫೋನ್ ಸ್ನಾಪ್ ಡ್ರಾಗನ್ 6ಎಸ್ ಜೆನ್ 3ಯಿಂದ ಸನ್ನದ್ಧವಾಗಿದ್ದು 16ಜಿಬಿ ರ‍್ಯಾಮ್ (ವರ್ಚುಯಲ್ ರ‍್ಯಾಮ್ ಒಳಗೊಂಡು) ಮತ್ತು ಯು.ಎಫ್.ಎಸ್.2.2 ಸ್ಟೋರೇಜ್ ಹೊಂದಿದೆ. ಇದರ 50ಎಂಪಿ ಡ್ಯುಯಲ್ ಕ್ಯಾಮರಾ ಸಿಸ್ಟಂ ಮತ್ತು 8ಎಂಪಿ ಫ್ರಂಟ್ ಕ್ಯಾಮರಾ ವೈವಿಧ್ಯಮಯ ಇಮೇಜಿಂಗ್ ನೀಡುತ್ತಿದ್ದು ಅದಕ್ಕೆ ಎಐ ವಿಶೇಷತೆಗಳ ಬೆಂಬಲ ಹೊಂದಿದೆ.
ಶಓಮಿ ಹೈಪರ್ ಒ.ಎಸ್.2 ಆಂಡ್ರಾಯಿಡ್ 15ರೊಂದಿಗೆ ಇದು ಸುಧಾರಿತ ಬುದ್ಧಿಮತ್ತೆ ಮತ್ತು ಮೃದುವಾದ ಮಲ್ಟಿಟಾಸ್ಕಿಂಗ್ ನೀಡುತ್ತದೆ. ಆಗಸ್ಟ್ 28ರಿಂದ ಲಭ್ಯವಾಗಲಿದ್ದು ಬೆಲೆಗಳು ರೂ.14,999ರಿಂದ ಪ್ರಾರಂಭಗೊಳ್ಳುತ್ತಿದ್ದು ಫ್ರಾಸ್ಟೆಡ್ ವೈಟ್, ಮಿಡ್ ನೈಟ್ ಬ್ಲಾಕ್ ಮತ್ತು ಸ್ಯಾಂಡಿ ಪರ್ಪಲ್ ಬಣ್ಣಗಳಲ್ಲಿ ಲಭ್ಯ.