ಇದೇ ನೋಡಿ ಸಿಂಹದ ಜೀವನದಲ್ಲಿ ಅತ್ಯಂತ ನೋವಿನ ಸಂದರ್ಭ; ಆ ಸಮಯದಲ್ಲಿ ಅದು ಬೇಟೆಯಾಡಲ್ಲ!
Wildlife Facts: ಸಿಂಹ ಕಾಡಿನ ರಾಜ. ಕಾಡಿನಲ್ಲಿ ಅತ್ಯಂತ ಶಕ್ತಿಶಾಲಿ ಪ್ರಾಣಿಯಾದ ಆನೆ ಕೂಡ ಅದರ ಮುಂದೆ ಮಂಡಿಯೂರುತ್ತೆ. ಸಿಂಹದ ಘರ್ಜನೆಯನ್ನು ಕೇಳಿದ ತಕ್ಷಣ ಹೆಚ್ಚಿನ ಪ್ರಾಣಿಗಳು ಆ ಪ್ರದೇಶದಿಂದ ಓಡಿಹೋಗುತ್ತವೆ. ಆದರೆ ಇದೇ ಸಿಂಹ ಜೀವನದಲ್ಲಿ ಅನುಭವಿಸುವ ಅತ್ಯಂತ ನೋವಿನ ಸಮಯ ಯಾವುದು ಗೊತ್ತಾ?.

ಉಗ್ರವಾಗಿ ಬೇಟೆಯಾಡುತ್ತೆ
ಸಿಂಹವು ಬೇಟೆಯಾಡಲು ಹೋದಾಗ ಮೊದಲು ದಾರಿ ಕ್ಲಿಯರ್ ಮಾಡಿಕೊಳ್ಳುತ್ತೆ. ಆ ನಂತರ ತನ್ನ ಬೇಟೆಯನ್ನು ಕಂಡುಹಿಡಿದು ಭೀಕರ ರೀತಿಯಲ್ಲಿ ಕೊಲ್ಲುತ್ತದೆ.
ತೀಕ್ಷ್ಣವಾದ ಹಲ್ಲು ಮತ್ತು ಉಗ್ರ ಉಗುರುಗಳು
ಸಿಂಹದ ಚೂಪಾದ ಹಲ್ಲುಗಳು ಮತ್ತು ಕ್ರೂರ ಉಗುರುಗಳು ಯಾವುದೇ ಬೇಟೆಯನ್ನು ಕ್ಷಣಮಾತ್ರದಲ್ಲಿ ಕೊಲ್ಲುವಷ್ಟು ಶಕ್ತಿಶಾಲಿಯಾಗಿರುತ್ತವೆ. ಸಿಂಹವು ಮಾಂಸವನ್ನು ಹರಿದು ಹಾಕಿದಾಗ ಅದರ ಕಚ್ಚುವಿಕೆಯ ಬಲವು 600 ರಿಂದ 1000 PSI ತಲುಪಬಹುದು.
ಕಾಡಿನ ರಾಜ
ಸಿಂಹವನ್ನು ಕಾಡಿನ ರಾಜನನ್ನಾಗಿ ಮಾಡಿದ್ದು ಸುಮ್ಮನೆ ಅಲ್ಲ. ಅದರ ಶಕ್ತಿ, ನಾಯಕತ್ವ ಮತ್ತು ಧೈರ್ಯದಿಂದಾಗಿ. ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳು ಅದನ್ನು ತಮ್ಮ ರಾಜನೆಂದು ಪರಿಗಣಿಸುತ್ತವೆ.
ಘರ್ಜನೆ 8 ಕಿ.ಮೀ. ದೂರದವರೆಗೆ ಕೇಳಿಸುತ್ತೆ
ಸಿಂಹದ ಘರ್ಜನೆಯನ್ನು 8 ಕಿಲೋಮೀಟರ್ ದೂರದವರೆಗೆ ಕೇಳಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಉಗ್ರ ಘರ್ಜನೆಯೊಂದಿಗೆ, ಅವು ಕಾಡಿನಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುತ್ತವೆ. ಈ ಘರ್ಜನೆಯನ್ನು ಇತರ ಪ್ರಾಣಿಗಳೂ ಗೌರವಿಸುತ್ತವೆ ಮತ್ತು ಭಯಪಡುತ್ತವೆ.
ಯಾವಾಗ ದುಃಖ ಆಗುತ್ತೆ?
ಸಿಂಹವು ತುಂಬಾ ಶಕ್ತಿಶಾಲಿಯಾಗಿದ್ದರೂ, ಕಾಡಿನ ರಾಜನಾಗಿದ್ದರೂ ಸಹ ಅದಕ್ಕೂ ದುಃಖ ಆಗುತ್ತೆ. ಆ ಸಂದರ್ಭವನ್ನು ಎದುರಿಸುತ್ತದೆ. ಈ ದುಃಖದ ನಂತರ ಸಿಂಹವು ಅಸಹಾಯಕ, ಶಕ್ತಿಹೀನನಾಗುತ್ತದೆ. ಬೇಟೆಯಾಡಲು ಹೋಗಲ್ಲ.
ಸಿಂಹದ ಜೀವನದಲ್ಲಿ ವೃದ್ಧಾಪ್ಯ
ಹೌದು, ಸಿಂಹದ ವೃದ್ಧಾಪ್ಯವು ಅದರ ಜೀವನದಲ್ಲೇ ಬಹಳ ದುಃಖದ ಸಮಯವಾಗಿದೆ. ಈ ಸಮಯದಲ್ಲಿ ಅದರ ಶಕ್ತಿ ಕಡಿಮೆಯಾಗುತ್ತದೆ ಮತ್ತು ಅದು ತುಂಬಾ ದುರ್ಬಲನಾಗುತ್ತದೆ. ಈ ಸಮಯದಲ್ಲಿ ಒಂಟಿತನದ ನೋವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.
ರಕ್ಷಿಸಿಕೊಳ್ಳುವ ಶಕ್ತಿಯನ್ನೂ ಕಳೆದುಕೊಳ್ಳುತ್ತೆ
ವೃದ್ಧಾಪ್ಯದಲ್ಲಿ ಸಿಂಹವು ಎಷ್ಟು ದುರ್ಬಲವಾಗುತ್ತದೆಯೆಂದರೆ ಅದು ಬೇಟೆಯಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನಂತೂ ಬಿಟ್ಟುಬಿಡುತ್ತದೆ. ಕತ್ತೆಕಿರುಬಗಳು ವೃದ್ಧಾಪ್ಯದಲ್ಲಿ ಸಿಂಹಗಳನ್ನು ಸುತ್ತುವರೆದು ಕೊಲ್ಲುತ್ತವೆ.