ಅಕ್ಕಿ ಹಿಟ್ಟಲ್ಲಿ ಹುಳ ಆಗದಂತೆ ತಡೆಯಲು ಸಿಂಪಲ್ ಟ್ರಿಕ್
ಬೇಸಿಗೆಯಲ್ಲಿ ಬಿಸಿಲು, ಗಾಳಿಯಲ್ಲಿ ತೇವಾಂಶ ಅಥವಾ ಕೋಣೆಯ ಉಷ್ಣತೆ ಹೆಚ್ಚಾದಾಗ ಅಕ್ಕಿ, ಬೇಳೆ, ಹಿಟ್ಟುಗಳಲ್ಲಿ ಹುಳ ಆಗುವ ಸಾಧ್ಯತೆ ಹೆಚ್ಚು.

ಎಲ್ಲರ ಅಡುಗೆ ಮನೆಯಲ್ಲೂ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಕಡ್ಲೆ ಹಿಟ್ಟು ಇದ್ದೇ ಇರುತ್ತೆ. ಹಲವರು ಈ ಹಿಟ್ಟುಗಳನ್ನು ಕಡಿಮೆ ಪ್ರಮಾಣದಲ್ಲಿ ತರುತ್ತಾರೆ. ಹೆಚ್ಚು ತಂದಿಟ್ಟರೆ ಹುಳ ಬರುತ್ತೆ ಅಂತ ಭಯ. ಈಗಂತೂ ಹಲವರು ಹುಳ ಬರುತ್ತೆ ಅಂತ ಫ್ರಿಡ್ಜ್‌ನಲ್ಲಿ ಇಡ್ತಾರೆ. ಆದರೆ ಎಲ್ಲರೂ ಹಾಗೆ ಇಡೋಕೆ ಆಗಲ್ಲ. ಹಾಗಾದರೆ ಹುಳ ಬರದಂತೆ ತಡೆಯಲು ಏನು ಮಾಡಬೇಕು?
ಬೇಸಿಗೆಯಲ್ಲಿ ಬಿಸಿಲು, ಗಾಳಿಯಲ್ಲಿ ತೇವಾಂಶ ಅಥವಾ ಕೋಣೆಯ ಉಷ್ಣತೆ ಹೆಚ್ಚಾದಾಗ ಅಕ್ಕಿ, ಬೇಳೆ, ಹಿಟ್ಟುಗಳಲ್ಲಿ ಹುಳ ಬರುವ ಸಾಧ್ಯತೆ ಹೆಚ್ಚು. ಆದರೆ ಒಂದೇ ಒಂದು ವಸ್ತು ಸೇರಿಸಿದರೆ ವರ್ಷಗಟ್ಟಲೆ ಸ್ಟೋರ್ ಮಾಡಬಹುದು. ಅದೇ ಕಲ್ಲುಪ್ಪು. ಎಲ್ಲರ ಮನೆಯಲ್ಲೂ ಕಲ್ಲುಪ್ಪು ಇರುತ್ತೆ. ಇದನ್ನು ಸ್ವಲ್ಪ ಹಿಟ್ಟು, ಬೇಳೆ ಇಟ್ಟ ಡಬ್ಬದಲ್ಲಿ ಹಾಕಿದರೆ ಸಾಕು.
ಮೊದಲು ಗಾಳಿ ಆಡದ ಡಬ್ಬದಲ್ಲಿ ಹಿಟ್ಟು ಅಥವಾ ಬೇಳೆ ಹಾಕಿ. (ಪ್ಲಾಸ್ಟಿಕ್ ಬದಲು ಗಾಜು ಅಥವಾ ಸ್ಟೀಲ್ ಡಬ್ಬ ಒಳ್ಳೆಯದು) ಅದರಲ್ಲಿ ½ ಟೀ ಚಮಚ ಕಲ್ಲುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗಾಳಿ ಆಡದಂತೆ ಮುಚ್ಚಳ ಮುಚ್ಚಿ. ಉಪ್ಪು ಹಾಕಿದ್ರೆ ಹಿಟ್ಟು ಹಾಳಾಗುತ್ತೆ ಅಂತ ಭಯ ಬೇಡ. ಬಳಸುವಾಗ ತೊಳೆದರೆ ಉಪ್ಪು ಹೋಗುತ್ತೆ. 2-3 ಕೆಜಿ ಹಿಟ್ಟಲ್ಲಿ ಒಂದು ಚಮಚ ಕಲ್ಲುಪ್ಪು ಹಾಕೋದ್ರಿಂದ ಉಪ್ಪು ಜಾಸ್ತಿ ಆಗಲ್ಲ. ಹಿಟ್ಟು ಕಲಸುವಾಗ ಸ್ವಲ್ಪ ನೋಡ್ಕೊಂಡು ಕಲಸಿದ್ರೆ ಸಾಕು.
ಉಪ್ಪನ್ನು ನೇರವಾಗಿ ಹಿಟ್ಟಿನಲ್ಲಿ ಮಿಕ್ಸ್ ಮಾಡೋಕೆ ಇಷ್ಟ ಇಲ್ದಿದ್ರೆ, ಉಪ್ಪನ್ನು ಒಂದು ಪುಟ್ಟ ಕವರ್‌ನಲ್ಲಿ ಹಾಕಿ ಅದೇ ಡಬ್ಬದಲ್ಲಿಡಿ. ತಿಂಗಳಿಗೊಮ್ಮೆ ಈ ಪ್ಯಾಕೆಟ್ ಬದಲಾಯಿಸಿದರೆ ಸಾಕು. ಹೀಗೆ ಮಾಡಿದ್ರೂ ಹುಳ ಬರಲ್ಲ.