ಮುಕೇಶ್ ಅಂಬಾನಿ ಡ್ರೈವರ್ ಮಕ್ಕಳು ಅಮೇರಿಕಾದಲ್ಲಿ ಶಾಲೆಗೆ ಹೋಗ್ತಾರೆ, ಚಾಲಕನಿಗಿರೋ ಸ್ಯಾಲರಿ ಎಷ್ಟು?
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅಂಬಾನಿ ಕುಟುಂಬ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುತ್ತದೆ. ಹೀಗಿರುವ ಅಂಬಾನಿ ಕುಟುಂಬ ಡ್ರೈವರ್ ಒಂದು ತಿಂಗಳಿಗೆ ಪಡೆಯುವ ಸಂಬಳ ಎಷ್ಟು ನಿಮ್ಗೊತ್ತಾ?

ಅಂಬಾನಿ ಈ ಹೆಸರು ನಮ್ಮ ದೇಶದಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕೇಳಿ ಬರುವುದು ಧೀರೂಬಾಯ್ ಅಂಬಾನಿ ಹೆಸರು. ಅವರ ನಂತರ ರಿಲಯನ್ಸ್ ಗ್ರೂಪ್ ನ ಒಡೆತನವನ್ನು ಸಮವಾಗಿ ಹಂಚಿಕೊಂಡಿದ್ದು ಅವರ ಮಕ್ಕಳಾಗಿರುವ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ.
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿ, ಪಾರ್ಟಿ, ಕಾರು, ದಿರಿಸಿಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಮನೆ ಆಗಿರುವ ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬ ವಾಸವಾಗಿದೆ. 25ಕ್ಕೂ ಅಧಿಕ ಅಂತಸ್ತುಗಳನ್ನು ಹೊಂದಿರುವ ಈ ಒಂದು ಬಿಲಿಯನ್ ಡಾಲರ್ ಅಧಿಕ ಮೌಲ್ಯದ ಬಿಲ್ಡಿಂಗಿನಲ್ಲಿ ಎಲ್ಲಾ ಐಷಾರಾಮಿ ಸೌಕರ್ಯಗಳು ಸೌಲಭ್ಯವುಗಳೂ ಇವೆ.
ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ. ಇಲ್ಲಿ ಸಾವಿರಾರು ಮಂದಿ ಕೆಲಸಗಾರರು ಸಹ ಇದ್ದಾರೆ. ಹೀಗಿರುವ ಮುಕೇಶ್ ಅಂಬಾನಿ ಅವರ ಡ್ರೈವರ್ ಒಂದು ತಿಂಗಳಿಗೆ ಪಡೆಯುವ ಸಂಭಾವನೆ ಬಗ್ಗೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಯಾಕೆಂದರೆ ಮುಕೇಶ್ ಅಂಬಾನಿ ಡ್ರೈವರ್ ಒಂದು ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳವನ್ನು ಪಡೆಯುತ್ತಾರಂತೆ. ಇಂದಿನ ಹಲವಾರು ಕಂಪನಿಗಳ ಬಾಸ್ ಗಳಿಗೂ ಕೂಡ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಭಾವನೆ ಬರೋದು ಕಷ್ಟ. ಹೀಗಿರುವಾಗಮುಕೇಶ್ ಅಂಬಾನಿ ಅವರ ಡ್ರೈವರ್ ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಾರೆ.
ಈ ಚಾಲಕ ಮುಕೇಶ್ ಅಂಬಾನಿ ಅವರ ಬಳಿ ಇರುವಂತಹ ಎಲ್ಲಾ ಕಾರುಗಳಲ್ಲಿಯೂ ಕೂಡ ಪರಿಣಿತಿಯನ್ನು ಹೊಂದಿದ್ದಾರೆ. ಅಂಬಾನಿಯವರಿಗೆ ಕಾರ್ ಡ್ರೈವರ್ ಗಳನ್ನು ಒದಗಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆ ಹೊಂದಿದೆ. ಹೀಗಾಗಿ ಸಂಭಾವನೆ ವಿಚಾರದಲ್ಲಿ ಮಾತ್ರವಲ್ಲ ಕೆಲಸದ ವಿಚಾರದಲ್ಲಿ ಕೂಡ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ.
ತಿಂಗಳಿಗೆ ಎರಡು ಲಕ್ಷ ಸಂಬಳ ಅಂದರೆ ವಾರ್ಷಿಕ 24 ಲಕ್ಷ ರೂ. ಆಗಿದೆ. ವರದಿಗಳ ಪ್ರಕಾರ, ಆಂಟಿಲಿಯಾದಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯೂ ಅದೇ ಪ್ರಮಾಣದ ಸಂಬಳವನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದೆ.
ಮಾಸಿಕ ಸಂಬಳದ ಹೊರತಾಗಿ, ಅಂಬಾನಿ ಉದ್ಯೋಗಿಗಳು ವಿಮೆ ಮತ್ತು ಟ್ಯೂಷನ್ ಮರುಪಾವತಿಯನ್ನು ಸಹ ಪಡೆಯುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಮುಕೇಶ್ ಅಂಬಾನಿ ಅವರ ಕೆಲವು ಸಿಬ್ಬಂದಿ ತಮ್ಮ ಮಕ್ಕಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾರೆ.
66% ಹೆಚ್ಚಳವನ್ನು ಪಡೆದ ನಂತರ ದೆಹಲಿ ಶಾಸಕರು ತಿಂಗಳಿಗೆ 90,000 ರೂ ಸಂಬಳ ಪಡೆಯುತ್ತಾರೆ.. ಹಾಗಾಗಿ, ಮುಖೇಶ್ ಅಂಬಾನಿ ಅವರ ಬಾಣಸಿಗರು ಹೆಚ್ಚಿನ ಭಾರತೀಯ ಶಾಸಕರಿಗಿಂತ ಹೆಚ್ಚು ಸಂಪಾದಿಸುತ್ತಾರೆ.