ಈ ಮನೆಮದ್ದನ್ನು ಬಳಸೋದ್ರಿಂದ ಮನೆಯಲ್ಲಿ ಒಂದೇ ಒಂದು ಜಿರಲೆಯೂ ಇರಲ್ಲ!
ಜಿರಲೆ ಚಿಕ್ಕದಾಗಿ ಕಾಣಿಸಿದರೂ ಅವು ಮನೆಯನ್ನು ಕೊಳಕಾಗಿಸುವುದಲ್ಲದೆ, ಅನಾರೋಗ್ಯಕ್ಕೂ ಕಾರಣವಾಗಬಹುದು. ಹಾಗಾಗಿ ಅವುಗಳನ್ನು ಮನೆಯಿಂದ ದೂರವಿಡಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ.

ಹಲವು ಮನೆಗಳಲ್ಲಿ ಜಿರಲೆ ಕಾಟ ಕೊಡುತ್ತಿರುತ್ತವೆ. ಅವುಗಳನ್ನು ಓಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಅವು ಹೋಗುವುದಿಲ್ಲ. ಈ ಜಿರಲೆಗಳು ಹೆಚ್ಚಾಗಿ ತಿನ್ನುವ ಆಹಾರ ಪದಾರ್ಥಗಳು, ಪಾನೀಯಗಳ ಹತ್ತಿರವೇ ಹೆಚ್ಚಾಗಿ ಓಡಾಡುತ್ತಿರುತ್ತವೆ. ಮನೆಯ ಮೂಲೆಗಳಲ್ಲಿ ಅಡಗಿ ಧೂಳನ್ನು ಹರಡುತ್ತವೆ. ಈ ಜಿರಲೆಗಳಿಂದ ಮನೆ ಕೊಳಕಾಗುವುದಲ್ಲದೆ, ನಮ್ಮನ್ನು ಹಲವು ರೋಗಗಳಿಗೆ ತುತ್ತಾಗಿಸುತ್ತವೆ.
ಈ ಜಿರಲೆಗಳು ಮನೆಯಿಂದ ಓಡಿಹೋಗಲಿ ಎಂದು ಮಾರುಕಟ್ಟೆಯಿಂದ ದುಬಾರಿ ಸ್ಪ್ರೇಗಳನ್ನು ಕೊಂಡು ಬಳಸುತ್ತಾರೆ. ಆದರೂ ಇವು ಮನೆ ಬಿಟ್ಟು ಹೋಗುವುದಿಲ್ಲ. ಆದರೆ ನೀವು ಕೆಲವು ಸರಳ ಉಪಾಯಗಳಿಂದ ಮನೆಯಲ್ಲಿ ಒಂದೇ ಒಂದು ಜಿರಲೆಯೂ ಇಲ್ಲದಂತೆ ಮಾಡಬಹುದು ಗೊತ್ತಾ? ಅವು ಯಾವುವೆಂದು ಈಗ ತಿಳಿದುಕೊಳ್ಳೋಣ ಬನ್ನಿ.
2 ಅಥವಾ 3 ಟೀ ಚಮಚ ಒಣಮೆಣಸಿನಕಾಯಿ ಪುಡಿ ಅಥವಾ ಕರಿಮೆಣಸಿನ ಪುಡಿಯನ್ನು ಬಳಸಬಹುದು. ಅದೇ ರೀತಿ 1-2 ಟೀ ಚಮಚ ಸಾಸಿವೆ ಪುಡಿ, 2-3 ಟೇಬಲ್ ಚಮಚ ನಿಂಬೆರಸ (ಒಂದು ನಿಂಬೆಹಣ್ಣಿನ ರಸ), ಎರಡು ಕಪ್ ನೀರು (ಸುಮಾರು 500 ಮಿ.ಲೀ), ಖಾಲಿ ಸ್ಪ್ರೇ ಬಾಟಲ್ ಅಗತ್ಯವಿದೆ. ಪ್ರತಿ ಮನೆಯಲ್ಲೂ ಇರುವ ಈ ಪದಾರ್ಥಗಳಿಂದ ಒಂದು ಮಿಶ್ರಣವನ್ನು ತಯಾರಿಸಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇವುಗಳ ಘಾಟಾದ ವಾಸನೆ ಜಿರಲೆಗಳನ್ನು ಓಡಿಸುತ್ತದೆ.
ಮೊದಲು ಒಂದು ಪಾತ್ರೆಯಲ್ಲಿ ಎರಡು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಮೆಣಸಿನ ಪುಡಿ, ನಿಂಬೆರಸ ಹಾಕಿ ಮಿಶ್ರಣ ಮಾಡಿ. ಇವೆಲ್ಲವನ್ನೂ ಚೆನ್ನಾಗಿ ಕಲಸಿ. ಹೀಗೆ ಮಾಡಿದರೆ ಅದರಲ್ಲಿ ಮೆಣಸಿನ ಪುಡಿ ಗಂಟುಗಳು ಇರುವುದಿಲ್ಲ. ಅಲ್ಲದೆ ಪುಡಿ ಸಂಪೂರ್ಣವಾಗಿ ನೀರಿನಲ್ಲಿ ಬೆರೆತು ಹೋಗುತ್ತದೆ. ನಂತರ ಇದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.
ಮೊದಲು ಜಿರಲೆಗಳು ಮನೆಯಲ್ಲಿ ಎಲ್ಲಿ ಓಡಾಡುತ್ತಿವೆ ಎಂದು ತಿಳಿದುಕೊಳ್ಳಿ. ಸಾಮಾನ್ಯವಾಗಿ ಜಿರಲೆಗಳು ಹೆಚ್ಚಾಗಿ ಅಡುಗೆ ಮನೆಯ ಕೌಂಟರ್, ಸಿಂಕ್ ಕೆಳಗೆ, ಕ್ಯಾಬಿನೆಟ್‌ಗಳ ಮೂಲೆಗಳಲ್ಲಿ, ಸ್ನಾನಗೃಹ, ಕಸದ ಬುಟ್ಟಿಗಳ ಸುತ್ತ, ಪೀಠೋಪಕರಣಗಳ ಬಿರುಕುಗಳಲ್ಲಿ, ಗೋಡೆಗಳ ಬಿರುಕುಗಳಲ್ಲಿ ಹೆಚ್ಚಾಗಿ ಇರುತ್ತವೆ. ಈ ಸ್ಥಳಗಳಲ್ಲಿ ನೀವು ತಯಾರಿಸಿಟ್ಟುಕೊಂಡಿರುವ ಮಿಶ್ರಣವನ್ನು ಸ್ಪ್ರೇ ಮಾಡಿ. ಜಿರಲೆಗಳು ಅಡಗಿಕೊಳ್ಳುವ ಎಲ್ಲಾ ಸ್ಥಳಗಳಲ್ಲಿ ಇದನ್ನು ಸ್ಪ್ರೇ ಮಾಡಿ. ಮೊದಲಿಗೆ ಇದನ್ನು ನೀವು ಪ್ರತಿದಿನ ಬಳಸಿ. ಆದರೆ ಜಿರಲೆಗಳು ಕಡಿಮೆಯಾದರೆ ವಾರಕ್ಕೆ ಎರಡು ಮೂರು ಬಾರಿ ಬಳಸಿದರೆ ಸಾಕು. ಇದು ಮನೆಯಲ್ಲಿ ಒಂದೇ ಒಂದು ಜಿರಲೆಯೂ ಇಲ್ಲದಂತೆ ಮಾಡುವ ಸುಲಭ ಉಪಾಯ. ಆದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಿರಲೆಗಳು ರಾತ್ರಿ ಹೆಚ್ಚಾಗಿ ಓಡಾಡುತ್ತವೆ. ಆದ್ದರಿಂದ ನೀವು ಇದನ್ನು ರಾತ್ರಿ ಸ್ಪ್ರೇ ಮಾಡಿದರೆ ಸಾಕು.